ಫಿಲ್ ಹ್ಯೂಸ್ ಚೇತರಿಕೆಗೆ ಕೊಹ್ಲಿ ಶುಭ ಹಾರೈಕೆ
ಸಿಡ್ನಿ, ನ.26: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಫಿಲ್ ಹ್ಯೂಸ್ ಅವರು ಮಾರಣಾಂತಿಕ ದಾಳಿ ತುತ್ತಾಗಿ ಆಸ್ಪತ್ರೆ ಸೇರಿರುವ ಸುದ್ದಿ ಓದಿರುತ್ತೀರಿ. ನ್ಯೂ ಸೌಥ್ ವೆಲ್ಸ್ ಪರ ಆಡುವಾಗ ಎಡಗೈ ಬ್ಯಾಟ್ಸ್ ಮನ್ ಹ್ಯೂಸ್ ಅವರ ತಲೆಗೆ ಭಾರಿ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಸರ್ಜರಿಗೊಳಪಟ್ಟಿದ್ದಾರೆ. ಮುಂದಿನ 24 ಗಂಟೆಗಳ ಕಾಲ ಏನು ಹೇಳಲು ಬರುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಷೆಫೀಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ಮಂಗಳವಾರ ಬೆಳಗ್ಗೆ ನಡೆದ ಘಟನೆ ಕ್ರಿಕೆಟ್ ಲೋಕವನ್ನು ತಲ್ಲಣಗೊಳಿಸಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂ ಸೌಥ್ ವೇಲ್ಸ್ ಹಾಗೂ ದಕ್ಷಿಣ ಆಸ್ಟ್ರೇಲಿಯಾ ನಡುವಿನ ನಾಲ್ಕು ದಿನಗಳ ಪಂದ್ಯದಲ್ಲಿ ಈ ದುರ್ಘಟನೆ ನಡೆದಿದೆ.ಫಿಲ್ ಹ್ಯೂಸ್ ದೇಹಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸಿದ್ದಾರೆ. [ಕ್ರಿಕೆಟರ್ ಗೆ ಮಾರಕವಾದ ಬೌನ್ಸರ್ ]
ನ್ಯೂ ಸೌಥ್ ವೇಲ್ಸ್ ಪರ ಆಡುತ್ತಿದ್ದ ಹ್ಯೂಸ್ ಅವರು 63 ರನ್ ಗಳಿಸಿ ಆಡುತ್ತಿದ್ದಾಗ ಸೀನ್ ಅಬಾಟ್ ಅವರು ಬೌನ್ಸರ್ ಎಸೆದಿದ್ದಾರೆ. ಬೌನ್ಸರ್ ಹುಕ್ ಮಾಡಲು ಯತ್ನಿಸಿದಾಗ ತಲೆಗೆ ಚೆಂಡು ಬಡಿದಿದೆ. ಈ ದುರಂತವನ್ನು ಹ್ಯೂಸ್ ಅವರ ತಾಯಿ ಹಾಗೂ ಸೋದರಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದು ನೋಡುತ್ತಿದ್ದರು ಎಂದು ತಿಳಿದು ಬಂದಿದೆ.
25 ವರ್ಷ ವಯಸ್ಸಿನ ಪ್ರತಿಭಾವಂತ ಎಡಗೈ ಬ್ಯಾಟ್ಸ್ ಮನ್ ಹ್ಯೂಸ್ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅದರೆ, ಹ್ಯೂಸ್ ದೇಹಸ್ಥಿತಿ ಗಂಭೀರವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ವಿವಿಧ ಕ್ರಿಕೆಟ್ ಸಂಸ್ಥೆಗಳು, ಹಾಲಿ, ಮಾಜಿ ಆಟಗಾರರು, ಅಭಿಮಾನಿಗಳ ಶುಭ ಹಾರೈಕೆಗಳ ಟ್ವೀಟ್ ಗಳ ಸಂಗ್ರಹ ಇಲ್ಲಿದೆ ನೋಡಿ....

ಪ್ರತಿಭಾವಂತ ಕ್ರಿಕೆಟರ್ ಹ್ಯೂಸ್
ಹ್ಯೂಸ್ ಅವರು ಆಸ್ಟ್ರೇಲಿಯಾ ಪರ 26 ಟೆಸ್ಟ್, 25 ಏಕದಿನ ಕ್ರಿಕೆಟ್, 1 ಟಿ 20 ಪಂದ್ಯವಾಡಿದ್ದಾರೆ. ಭಾರತ ವಿರುದ್ಧ ಟೆಸ್ಟ್ ಸರಣಿ ಆಡುವ ಕನಸು ಹೊತ್ತಿದ್ದರು. ಬ್ರಿಸ್ಬೇನ್ ನಲ್ಲಿ ಡಿ.4ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ
ವಿರಾಟ್ ಕೊಹ್ಲಿ ಸಂದೇಶ
ಆಸ್ಟ್ರೇಲಿಯಾದಲ್ಲಿ ಅಭ್ಯಾಸ ಪಂದ್ಯವಾಡುತ್ತಿರುವ ಟೀಂ ಇಂಡಿಯಾಗೆ ಹ್ಯೂಸ್ ದುರಂತದ ಸುದ್ದಿ ಕೇಳಿ ಭರಸಿಡಿಲಿನಂತೆ ಅಪ್ಪಳಿಸಿದೆ. ವಿರಾಟ್ ಕೊಹ್ಲಿ ಅವರು ತಮ್ಮ ಸಾಂತ್ವನದ ನುಡಿಗಳನ್ನು ಟ್ವೀಟ್ ಮಾಡಿದ್ದಾರೆ.
ಮಾಜಿ ಕ್ರಿಕೆಟರ್ ಡರೇನ್ ಲೀಮನ್
ಮಾಜಿ ಕ್ರಿಕೆಟರ್ ಡರೇನ್ ಲೀಮನ್ ಅವರು ಟ್ವೀಟ್ ಮಾಡಿ ಚೇತರಿಕೆಗಾಗಿ ಪ್ರಾರ್ಥಿಸಿ ಎಂದಿದ್ದಾರೆ.
ಡೇವಿಡ್ ವಾರ್ನರ್ ಅವರಿಂದ ಟ್ವೀಟ್
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಘಟನೆ ನಡೆದ ಬಳಿಕ ಹ್ಯೂಸ್ ಜೊತೆ ಆಸ್ಪತ್ರೆಗೆ ತೆರಳಿ ಜೊತೆಯಲ್ಲೇ ಇದ್ದರು.
ವೇಗಿ ಮಿಚೆಲ್ ಜಾನ್ಸನ್ ರಿಂದ ಟ್ವೀಟ್
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ರಿಂದ ಟ್ವೀಟ್
ವೇಗಿ ಸೀನ್ ಅಬಾಟ್ ರಿಂದ ಟ್ವೀಟ್
ಹ್ಯೂಸ್ ಅವರಿಗೆ ಬೌನ್ಸರ್ ಎಸೆದ ವೇಗಿ ಸೀನ್ ಅಬಾಟ್ ಅವರಿಂದ ಟ್ವೀಟ್. ಅಬಾಟ್ ಎಸೆತ ತಪ್ಪಿಸಿಕೊಳ್ಳಲು ಹೋದಾಗ ಚೆಂಡು ಹ್ಯೂಸ್ ತಲೆಗೆ ಬಿದ್ದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications