ಆತ ದಾಖಲಿಸಿದ ಗೋಲನ್ನೇ ಗೆದ್ದ ಸಾವು!
ಮಿಜೋರಾಂ, ಅ. 21: ಆತ ಪಂದ್ಯದಲ್ಲಿ ಗೋಲು ಗಳಿಸಿದ್ದ. ಗೋಲು ಗಳಿಸಿದ್ದಕ್ಕೆ ಜತೆ ಆಟಗಾರರೊಂದಿಗೆ ಸಂಭ್ರಮಿಸುತ್ತಿದ್ದ. ತಲೆ ಕೆಳಾಗಾಗಿ ಹಾರಿ ಒಮ್ಮೆ ಸಂಭ್ರಮಿಸಿಯೂ ಇದ್ದ. ಎರಡನೇ ಸಾರಿ ಇದೇ ರೀತಿ ಮಾಡಲು ಹೋದಾಗ ಆಯತಪ್ಪಿ ಬಿದ್ದ. ಬಿದ್ದವನ ಬೆನ್ನು ಮೂಳೆ ಮುರಿದು ಹೋಗಿತ್ತು.
ಇದು ನಡೆದಿದ್ದು ಬೇರಾವ ದೇಶದಲ್ಲ. ನಮ್ಮದೇ ಮಿಜೋರಾಂನಲ್ಲಿ. ಮಿಜೋರಾಂ ಸ್ಥಳಿಯ ಫುಟ್ ಬಾಲ್ ಕ್ಲಬ್ ತಂಡ ಬೆಥ್ಲೆಹೆಮ್ ವೆಂಗ್ ಥಾಂಗ್ ಕಳೆದ ಗುರುವಾರ ಮ್ಯಾನ್ಮಾರ್ ತಂಡದೊಂದಿಗೆ ಪಂದ್ಯವೊಂದನ್ನು ಆಡುತ್ತಿತ್ತು. ಮಿಜೋರಾಂ ತಂಡದ ಆಟಗಾರ 23 ವರ್ಷದ ಪೀಟರ್ ಬೈಕ್ಸಾಂಗ್ ಜ್ಯುಯೆಲಾ ಗೋಲು ದಾಖಲಿಸಿದರು.[ಸಚಿನ್, ಕೊಹ್ಲಿ, ಗಂಗೂಲಿ ಜೊತೆ ಧೋನಿ ಚೆಂಡಾಟ]

ಗೋಲಿನ ಸಂಭ್ರಮ ಆಚರಿಸಲು ತಲೆಯನ್ನು ನೆಲಕ್ಕೆ ಇಟ್ಟು ಪಲ್ಟಿ ಹೊಡೆದರು. ಸಂಭ್ರಮದಲ್ಲಿ ಇತರೇ ಆಟಗಾರರು ಪಾಲ್ಗೊಂಡಿದ್ದರು. ಆದರೆ ಇನ್ನೊಮ್ಮೆ ಪಲ್ಟಿ ಹೊಡೆಯಲು ಪ್ರಯತ್ನಿಸಿದ ಪೀಟರ್ ಅಸ್ವಸ್ಥರಾಗಿ ಬಿದ್ದರು. ತಕ್ಷಣಕ್ಕೆ ಗೊತ್ತಾಗದಿದ್ದರೂ ಉಳಿದ ಆಟಗಾರರು ಪೀಟರ್ ನನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಗೋಲಿನ ಸಂಭ್ರಮ ಮನೆಮಾಡಿದ್ದ ಜಾಗದಲ್ಲಿ ಸ್ಮಶಾನ ಮೌನ ಆವರಿಸಿತು.[ಚಿತ್ರಗಳು : ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು]
ನೆಲಕ್ಕೆ ಬಿದ್ದ ಪೀಟರ್ ಬೆನ್ನು ಮೂಳೆಗೆ ತೀವ್ರ ಹೊಡೆತ ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಉದಯೋನ್ಮುಖ ಆಟಗಾರ ಸಾವನ್ನಪ್ಪಿದರು. ನಾವು ಎಲ್ಲ ಪ್ರಯತ್ನ ಮಾಡಿದೆವು. ಆದರೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಿಜೋರಾಂ ಫುಟ್ ಬಾಲ್ ಅಸೋಸಿಯೇಷನ್ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಪೀಟರ್ ಧರಿಸುತ್ತಿದ್ದ 21ನೇ ನಂಬರ್ ಜರ್ಸಿಗೆ ಬೇಥ್ಲೆಹೇಮ್ ತಂಡ ನಿವೃತ್ತಿ ಘೋಷಿಸಿದ್ದು, ಪೀಟರ್ ಸ್ಮರಣಾರ್ಥ ಪಂದ್ಯವೊಂದನ್ನು ಆಯೋಜಿಸಲಾಗುವುದು ಎಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications