Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಹೆಮ್ಮೆಯ ಪುತ್ರಿಯರ ಆರ್ಭಟ: 2025ರಲ್ಲಿ ಮಹಿಳಾ ಕ್ರೀಡಾಪಟುಗಳ ಸುವರ್ಣ ಅಧ್ಯಾಯ

ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷ ಮುಕ್ತಾಯವಾಗುತ್ತದೆ. ನವ 2026ರ ವರ್ಷವನ್ನು ಬರ ಮಾಡಿಕೊಳ್ಳಲು ಎಲ್ಲರೂ ಕಾತರುರಾಗಿದ್ದಾರೆ. 2025ರಲ್ಲಿ ಹಲವು ಕ್ರೀಡೆಗಳಲ್ಲಿ ಭಾರತದ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಮಹಿಳೆಯರು ಮಾತ್ರ ತಮ್ಮ ಸ್ಥಿರ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ವರ್ಷ ಮೈದಾನದಲ್ಲಿ ಸಾಧನೆ ಮಾಡಿದ ಮಹಿಳಾ ಆಟಗಾರ್ತಿಯರ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಡೆದ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಆತಿಥೇಯ ತಂಡ ಸ್ಥಿರ ಪ್ರದರ್ಶನ ನೀಡಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು. ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಭಾರತ ಮೊದಲ ಬಾರಿಗೆ ಪ್ರಶಸ್ತಿಯನ್ನು ಮುತ್ತಿಟ್ಟು ಇತಿಹಾಸ ನಿರ್ಮಿಸಿತು. ಲೀಗ್‌ ಹಂತದಲ್ಲಿ ಬ್ಯಾಕ್‌ ಟು ಬ್ಯಾಕ್‌ ಮೂರು ಸೋಲು ಕಂಡ ಬಳಿಕ ಭಾರತ ಪುಟಿದೆದ್ದು ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದೆ. ಅಲ್ಲದೆ ಕೊನೆಯಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

Golden Year for Indian Women World Cup Glory Archery Records and Chess Mastery in 2025

ಭಾರತದ ಭರವಸೆಯ ಪ್ಯಾರಾ ಅಥ್ಲೀಟ್‌ ಶೀತಲ್ ದೇವಿ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ಸಾಧನೆ ಮಾಡಿದರು. ಕೈಗಳಿಲ್ಲದೆ ಚಿನ್ನಕ್ಕೆ ಗುರಿಯಿಟ್ಟ ಶೀತಲ ದೇವಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡು ಹಿಗ್ಗಿದರು. ಅಲ್ಲದೆ ಸ್ವರ್ಣ ಗೆದ್ದ ಕೈಗಳಿಲ್ಲದ ಮೊದಲ ಮಹಿಳಾ ಆಟಗಾರ್ತಿ ಎಂಬ ಶ್ರೇಯ ತಮ್ಮದಾಗಿಸಿಕೊಂಡರು.

ಐಸ್‌ ಹಾಕಿ ಕಂಚಿನ ಸಾಧನೆ

ಭಾರತದ ಮಹಿಳಾ ಐಸ್ ಹಾಕಿ ತಂಡವು ಏಷ್ಯಾ ಕಪ್‌ನಲ್ಲಿ ಕಂಚಿನ ಪದಕ ಗೆದ್ದು ಅಚ್ಚರಿ ಮೂಡಿಸಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೊದಲ ಪ್ರಶಸ್ತಿಯಾಗಿದ. ತನಗಿಂತ ಹೆಚ್ಚಿನ ಶ್ರೇಯಾಂಕಿತ ಚೀನಾ ತಂಡವನ್ನು ಮಣಿಸಿದ ಭಾರತ ಮೊದಲ ಬಾರಿಗೆ ಪೋಡಿಯಂ ಏರಿ ಸಾಧನೆ ಮಾಡಿತು.

ಲಿವರ್‌ಪೂಲ್‌ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜಾಸ್ಮಿನ್ ಲಂಬೋರಿಯಾ (57 ಕೆಜಿ) ಮತ್ತು ಮಿನಾಕ್ಷಿ ಹೂಡಾ (48 ಕೆಜಿ) ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ತಂದರು.

Golden Year for Indian Women World Cup Glory Archery Records and Chess Mastery in 2025

ಅಂಧರ ಮೊದಲ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ, ನೇಪಾಳ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ಭಾರತದ ವನಿತೆಯರು ಐತಿಹಾಸಿಕ ಸಾಧನೆ ಮಾಡಿದರು.

ದಿವ್ಯಾ ಮಿಂಚು

ಭಾರತದ ಯುವ ಚೆಸ್‌ ಆಟಗಾರ್ತಿ ದಿವ್ಯಾ ದೇಶಮುಖ್‌ ಅವರು ಫಿಡೆ ಮಹಿಳಾ ವಿಶ್ವಕಪ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಇವರು ತಮಗಿಂತ ಅನುಭವಿ ಕೊನೆರೂ ಹಂಪಿಯನ್ನು ಮಣಿಸಿ ಈ ಸಾಧನೆ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಮಹಿಳಾ 'ಗ್ರ್ಯಾಂಡ್‌ಮಾಸ್ಟರ್' ಎನಿಸಿಕೊಂಡರು.

Story first published: Monday, December 29, 2025, 10:05 [IST]
Other articles published on Dec 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+