
ನವದೆಹಲಿ, ಮೇ 23: ಅತೀ ಎತ್ತರದ ಶಿಖರವಾಗಿ ವಿಶ್ವ ವಿಖ್ಯಾತವಾಗಿರುವ ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಎಚ್‌ಐವಿ ಸೋಂಕಿತರಾಗಿ ನೇಪಾಳದ ಪೋಖಾರದ ಗೋಪಾಲ್ ಶ್ರೇಷ್ಠ ಗುರುತಿಸಿಕೊಂಡಿದ್ದಾರೆ. 56ರ ಹರೆಯದ ಗೋಪಾಲ್ ಈ ಸಾಧನೆ ಮಾಡಿದ್ದಾರೆ.
ಸ್ಟೇಟ್ ನ್ಯೂಸ್ ಏಜೆನ್ಸಿ ರಾಷ್ಟ್ರೀಯ ಸಮಾಚಾರ್ ಸಮಿತಿಯಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಪೋಖಾರದ ರತ್ನ ಚೌಕ್ ನಿವಾಸಿಯಾದ ಗೋಪಾಲ್ ಅವರು ಬುಧವಾರ (ಮೇ 22) ಮುಂಜಾನೆ ಮೌಟ್ ಎವರೆಸ್ಟ್ ತುದಿ ತಲುಪಿದ್ದರು.
'ಪೋಖಾರದ ರತ್ನ ಚೌಕ್‌ನಲ್ಲಿ ವಾಸವಿರುವ 56ರ ಹರೆಯದ ಗೋಪಾಲ್ ಶ್ರೇಷ್ಠ ಅವರು 8,848 ಎತ್ತರ ಮೌಂಟ್ ಎವರೆಸ್ಟ್ ಶಿಖರದ ತುದಿಗೆ ಇಂದು ಬೆಳಗ್ಗೆ 8:15 amಗೆ ಕಾಲಿರಿಸಿರುವುದನ್ನು ಎವರೆಸ್ಟ್ ಬೇಸ್ ಅಧಿಕಾರಿಗಳು ಖಾತರಿಪಡಿಸಿದ್ದಾರೆ' ಎಂದು ವರದಿಯಲ್ಲಿ ಹೇಳಲಾಗಿದೆ.