ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಬರ್ತ್‌ಡೇ ಸಂಭ್ರಮ; ಗೆಳೆಯನಿಗೆ ಮುತ್ತಿಕ್ಕಿದ ವೀಡಿಯೊ ವೈರಲ್
ಲೆಜೆಂಡರಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಪುತ್ರಿ, ಖ್ಯಾತ ನಿರೂಪಕಿ ಗ್ರೇಸ್ ಹೇಡನ್ ತಮ್ಮ 24ನೇ ಹುಟ್ಟುಹಬ್ಬವನ್ನು ಪ್ಯಾರಿಸ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಇವರು ಮಧ್ಯರಾತ್ರಿ ಐಫೆಲ್ ಟವರ್ ಎದುರು ಗೆಳೆಯ ವಿಲ್ಸನ್ ಸ್ಟ್ಯಾಥಮ್ ಕೈಹಿಡಿದು, ರೋಮ್ಯಾಂಟಿಕ್ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ತಡರಾತ್ರಿ 12 ಗಂಟೆ ಆಗುತ್ತಿದ್ದಂತೆ ಗ್ರೇಸ್ ಹೇಡನ್ ತನ್ನ ಗೆಳೆಯನನ್ನು ಅಪ್ಪಿ ಮುತ್ತಿಕ್ಕಿದರು. ಇದರ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ. ಸಾರಾ ತೆಂಡೂಲ್ಕರ್ ಆಪ್ತ ಗೆಳತಿಯಾಗಿರುವ ಗ್ರೇಸ್ ಅವರ ಈ ರೊಮ್ಯಾಂಟಿಕ್ ಬರ್ತ್‌ಡೇ ಕ್ಷಣಗಳು ಅಭಿಮಾನಿಗಳ ಮನಗೆದ್ದಿವೆ.
ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗ್ರೇಸ್ ಹೇಡನ್ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸುತಿದ್ದಾರೆ. ಇವರು ಕ್ರಿಕೆಟ್ ಆಟದಿಂದ ಹೆಸರು ಮಾಡದೆ, ಮೈಕ್ ಹಿಡಿದು ನಿರೂಪಕಿಯಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ. ಇವರು 2026ರ ಟಿ 20 ವಿಶ್ವಕಪ್‌ನಲ್ಲಿ ನಿರೂಪಕಿಯೂ ಆಗಿದ್ದರು.

ಗ್ರೇಸ್ ಹೇಡನ್ ಜೂನ್ 16, 2002 ರಂದು ಜನಿಸಿದರು. ಅವರು ಪ್ಯಾರಿಸ್‌ನಲ್ಲಿ ತಮ್ಮ 24ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರು ಮಧ್ಯರಾತ್ರಿಯಲ್ಲಿ ಐಫೆಲ್ ಟವರ್‌ಗೆ ಭೇಟಿ ನೀಡಿದರು. ಇದೇ ವೇಳೆ ಇವರ ಗೆಳೆಯ ವಿಲ್ಸನ್ ಸ್ಟ್ಯಾಥಮ್ ಸಾಥ್ ನೀಡಿದ್ದಾರೆ. ಇವರು 12 ಗಂಟೆಯಾಗುವ ಮೊದಲು ಪೋಸ್ ನೀಡುತ್ತಿರುವುದನ್ನು ಕಾಣಬಹುದು. 12 ಗಂಟೆ ಆಗುತ್ತಿದ್ದಂತೆ ಗ್ರೇಸ್, ಗೆಳೆಯ ವಿಲ್ಸನ್ ಅಪ್ಪಿಕೊಂಡು ಮುತ್ತಿಟ್ಟರು.
ಈ ವಿಡಿಯೋವನ್ನು ಗ್ರೇಸ್ ಹೇಡನ್ ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಹುಟ್ಟುಹಬ್ಬವನ್ನು ಐಫೆಲ್ ಟವರ್ ಎದುರು ಆಚರಿಸಿಕೊಳ್ಳುವ ಆಸೆ ಇತ್ತು. ಈ ಕನಸು ನನಸಾಗಿದೆ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಗ್ರೇಸ್, ಸದ್ಯ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ನಿರೂಪಕಿಯಾಗಿದ್ದಾರೆ. ಇವರ ಈ ಪ್ಯಾರಿಸ್ ಪ್ರವಾಸದ ರೋಮ್ಯಾಂಟಿಕ್ ಫೋಟೋಗಳು ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ.
ವಿಲ್ಸನ್ ಸ್ಟ್ಯಾಥಮ್ ಯಾರು?
ಗ್ರೇಸ್ ಹೇಡನ್ ಅವರ ಗೆಳೆಯ ವಿಲ್ಸನ್ ಸ್ಟ್ಯಾಥಮ್, ವ್ಯಾಪಾರ ಕುಟುಂಬದಿಂದ ಬಂದವರು. ಇಬ್ಬರೂ ಈ ಹಿಂದೆ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಗ್ರೇಸ್ ಹೇಡನ್ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅವರ ಹುಟ್ಟುಹಬ್ಬದ ಬೆಳಿಗ್ಗೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಹೋಟೆಲ್ ಕೋಣೆಯಲ್ಲಿ ಗುಲಾಬಿಗಳ ಪುಷ್ಪಗುಚ್ಛವನ್ನು ಹಿಡಿದುಕೊಂಡು ಪೋಸ್ ನೀಡಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications