ಸಂಸಾರ ಚದುರಂಗಕ್ಕೆ ಅಡಿಯಿಟ್ಟ ಕೋನೇರು ಹಂಪಿ
ಸಂಸಾರ ಎಂಬುದು ಒಂದು ಚದುರಂಗದಾಟವಿದ್ದಂತೆ ಎನ್ನುತ್ತಾರೆ ಬಲ್ಲವರು. ಅಸಲಿ ಚದುರಂಗದಾಟದಲ್ಲೇ ವಿಶ್ವ ಚಾಂಪಿಯನ್ ಅನ್ನಿಸಿಕೊಂಡಿರುವ ಆಂಧ್ರಪ್ರದೇಶದ ಖ್ಯಾತ ಚದುರಂಗ ಚತುರೆ ಕೋನೇರು ಹಂಪಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ಇತ್ತೀಚೆಗೆ ವಿಜಯವಾಡದಲ್ಲಿ ನಡೆದ ಅವರ ಮದುವೆ ಫೋಟೋಗಳು ಇಲ್ಲಿವೆ ಕಣ್ತುಂಬಿಕೊಳ್ಳಿ. ಕೋನೇರು ಹಂಪಿ ಅವರು ವಿಶ್ವದಲ್ಲೇ ಮೂರನೇ ಶ್ರೇಯಾಂಕದಲ್ಲಿರುವ ಚದುರಂಗ ಚತುರೆ. ಎಫ್ ಟ್ರಾನಿಕ್ಸ್ ಸಿಸ್ಟಂಸ್ ಪ್ರೈ.ಲಿ. ಪ್ರಾಜೆಕ್ಟ್ ಮ್ಯಾನೇಜರ್ (ಆರ್ & ಡಿ) ದಾಸರಿ ಅವಿನಾಶ್ ಅವರ ಕೈಹಿಡಿದರು ಹಂಪಿ.
ಚದುರಂಗ ಚತುರೆ ಎಂದರೆ ಅವರ ಮದುವೆಗೆ ಹಲವಾರು ಚೆಸ್ ಆಟಗಾರರು ಆಗಮಿಸಿ ನೂತನ ದಂಪತಿಗಳಿಗೆ ಶುಭ ಕೋರಿದರು. ಗ್ರ್ಯಾಂಡ್ ಮಾಸ್ಟರ್ ನೀಲೋಪ್ಟಲ್ ದಾಸ್, ಇಂಟರ್ ನ್ಯಾಶನಲ್ ಮಾಸ್ಟರ್ ಗಳಾದ ಕೊಂಗುವೇಲ್, ಲಂಕರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೋನೇರು ಹಂಪಿ ಕೈಹಿಡಿದ ದಾಸರಿ ಅವಿನಾಶ್
ಕೋನೇರು ಹಂಪಿ ಕೈಹಿಡಿರುವ ದಾಸರಿ ಅವಿನಾಶ್ ಅವರು ಎಫ್ ಟ್ರಾನಿಕ್ಸ್ ಸಿಸ್ಟಂಸ್ ಪ್ರೈ.ಲಿ.ನ ಮ್ಯಾನೇಜಿಂಗ್ ಡೈರೆಕ್ಟರ್ ದಾಸರಿ ರಾಮಕೃಷ್ಣ ಅವರ ಪುತ್ರ.

ಶಾಸ್ತ್ರೋಕ್ತವಾಗಿ ನಡೆದ ಮದುವೆ
ಶಾಸ್ತ್ರೋಕ್ತವಾಗಿ ನಡೆದ ಈ ಮದುವೆಗೆ ಗುರುಹಿರಿಯರು, ಬಂಧುಬಳಗ, ಸ್ನೇಹಿತರು ಸಾಕ್ಷಿಯಾದರು.

ಶುಭಕೋರಿದ ಚಂದ್ರಬಾಬು ನಾಯ್ಡು
ಈ ಮದುವೆಗೆ ಖುದ್ದಾಗಿ ಹಾಜರಾಗಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಜರಾಗಲು ಸಾಧ್ಯವಾಗದಿದ್ದ ಕಾರಣ ದೂರವಾಣಿ ಮೂಲಕ ಶುಭಕೋರಿದರು.

ಆಂಧ್ರಪ್ರದೇಶದ ಗುಡಿವಾಡದ ಹಂಪಿ
ಆಂಧ್ರಪ್ರದೇಶದ ಗುಡಿವಾಡದಲ್ಲಿ ಜನಿಸಿದ ಕೋನೇರು ಹಂಪಿ ಪ್ರಾಯ ಇದೀಗ ಇನ್ನೂ 27 ವರ್ಷಗಳು.

ಎಲ್ಲರ ಕಣ್ಮನ ಸೆಳೆದ ನೂತನ ದಂಪತಿಗಳು
ಮದುವೆಗೆ ನೂತನ ದಂಪತಿಗಳು ಸಾಂಪ್ರದಾಯಿಕವಾಗಿ ಸಿಂಗಾರಗೊಂಡು ಎಲ್ಲರ ಕಣ್ಮನ ಸೆಳೆದರು.

ಹೇಳಿ ಮಾಡಿಸಿದ ಜೋಡಿ
ಇಬ್ಬರನ್ನೂ ನೋಡುತ್ತಿದ್ದರೆ ಹೇಳಿ ಮಾಡಿಸಿದ ಜೋಡಿ ಎಂದು ಎಲ್ಲರಿಗೂ ಅನ್ನಿಸುತ್ತದೆ.

ಇದು ಪಕ್ಕಾ ಅರೇಂಜ್ಡ್ ಮದುವೆ
ಅಂದಹಾಗೆ ಇದು ಪಕ್ಕಾ ಅರೇಂಜ್ಡ್ ಮದುವೆ. ಇಬ್ಬರ ಕುಟುಂಬಿಕರೂ ಪರಸ್ಪರ ಒಪ್ಪಿ ಮದುವೆಯಾಗುತ್ತಿದ್ದಾರೆ.

ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ.... ಈ ಏಳು ಹೆಜ್ಜೆಗಳ ಈ ಸಂಬಂಧ.

ಬಾಳ ಚದುರಂಗದಾಟ ಚೆನ್ನಾಗಿರಲಿ
ಇವರಿಬ್ಬರ ಬಾಳ ಚದುರಂಗದಾಟ ಚೆನ್ನಾಗಿರಲಿ ಎಂದು ಹಾರೈಸೋಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications