ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಚೆಸ್ ಟೂರ್ನಿಯಲ್ಲಿ ಭಾರತರದ ಡಿ ಗುಕೇಶ್ ಅವರು ಸ್ಥಿರ ಪ್ರದರ್ಶನವನ್ನು ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ವಿಶ್ವದ ಮೂರನೇ ಕಿರಿಯ ಅಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಈ ಪ್ರಶಸ್ತಿಯನ್ನು ಪಡೆದ ಭಾರತದ ಎರಡನೇ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಭಾರತದ ಹೆಮ್ಮೆಯ ವಿಶ್ವನಾಥನ್ ಆನಂದ ಅವರು ಈ ಮೊದಲು ಈ ಸಾಧನೆ ಮಾಡಿದ್ದರು.
ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿದ ಆಟಗಾರನಿಗೆ ಶಭಾಷಯಗಳು ಹರಿದು ಬರುತ್ತಿವೆ. ಈ ಮಧ್ಯೆ ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆ ಅವರ ತವರು ರಾಜ್ಯವಾದ ತಮಿಳು ನಾಡಿನ ಸಂಭ್ರಮ ಕಳೆ ಕಟ್ಟಿದೆ. ಈ ವೇಳೆ ಪ್ರಶಸ್ತಿ ವಿಜೇತ ಕ್ರೀಡಾ ಪಟುವಿಗೆ ಹೃದಯ ಸ್ಪರ್ಶಿ ಸ್ವಾಗತಕ್ಕೆ ಪ್ಲ್ಯಾನ್ ಲಭಿಸಿದೆ.

ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತದ 18 ವರ್ಷದ ಗುಕೇಶ್ ಚೀನಾದ ಆಟಗಾರರನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಇವರ ಈ ಸಾಧನೆಯನ್ನು ಕಂಡು ತಮಿಳುನಾಡು ಸರ್ಕಾರ ಸಹ 5 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಘೋಷಿಸಿತು. ಇವರು ತಮಿಳುನಾಡಿಗೆ ಬರುತ್ತಿದ್ದಂತೆ ಇವರಿಗೆ ಅಭಿಮಾನಿಗಳು ಹುವುಗಳನ್ನು ಹಾಕಿ ಸ್ವಾಗತ ಕೋರಿದರು.
ಟ್ರೋಫಿಯನ್ನು ಮತ್ತೆ ಭಾರತಕ್ಕೆ ತಂದಿರುವುದು ಖುಷಿಯ ವಿಚಾರ. ಹೃದಯ ಸ್ಪರ್ಷಿ ಸ್ವಾಗತ ನೀಡಿದ್ದಕ್ಕೆ ಧನ್ಯವಾದಗಳು. ಈ ಸಂಭ್ರಮವನ್ನು ಆಚರಿಸಲು ಇನ್ನು ನಮಗೆ ಸಮಯವಿದೆ. ಎಲ್ಲರೂ ಸೇರಿ ಆಚರಿಸೋಣ ಎಂದು ಡಿ ಗುಕೇಶ್ ತಿಳಿಸಿದ್ದಾರೆ.
ಗುಕೇಶ್ ಕಾಮರಾಜ್ ಏರ್‌ಪೋರ್ಟ್‌ಗೆ ಬಂದು ಇಳಿಯುತ್ತಿದ್ದಂತೆ ತಮಿಳುನಾಡು ಸರ್ಕಾರದ ಕ್ರೀಡಾ ಸಚಿವರು ಹಾಗೂ ವೇಲಮ್ಮಲ್ ವಿದ್ಯಾಲಯದ ಸಿಬ್ಬಂದಿಗಳು ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು. ಗುಕೇಶ್ ಅವರು ಚೆಸ್ ಕ್ರೀಡೆಯನ್ನು ವೇಲಮ್ಮಲ್ ವಿದ್ಯಾಲಯದಲ್ಲಿ ಮೊದಲು ಆಡಲು ಆರಂಭಿಸಿದರು. ಇನ್ನು ಅಭಿಮಾನಿಗಳಿಂದ ಸ್ವಾಗತ ಪಡೆದ ಗುಕೇಶ್ ವಿಶೇಷ ಕಾರ್‌ನಲ್ಲಿ ಮನೆಗೆ ತೆರಳಿದರು.
ಮಂಗಳವಾರ ಡಿ.ಗುಕೇಶ್ ಅವರಿಗೆ ವಲ್ಲಾಜಾ ರಸ್ತೆಯಲ್ಲಿರುವ ಕಲೈವಾನರ್ ರಂಗಮಂದಿರದಲ್ಲಿ ಭವ್ಯ ಸ್ವಾಗತ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೇ ವೇಳೆ ವಿಶೇಷ ವಾಹನದಲ್ಲಿ ಅವರ ಮೆರವಣಿಗೆ ನಡೆಸಲಾಗುತ್ತದೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಗುಕೇಶ್ ಅವರಿಗೆ ಐದು ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಇನ್ನು ಡಿ ಗುಕೇಶ್ ವಿಶ್ವನಾಥನ್ ಆನಂದ್ ಬಳಿಕ ಈ ಪ್ರಶಸ್ತಿಯನ್ನು ಗೆದ್ದ ಚೆಸ್ ಕ್ರೀಡಾ ಪಟು ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಿಂಗಾಪುರದಲ್ಲಿ ಗುಕೇಶ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಇವರಿಗೆ ಭಾರಿ ಮೊತ್ತ ಪಡೆದಿದ್ದಾರೆ. ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು ಹಾಗೂ ಮೂರು ಗೆಲುವು ದಾಖಲಿಸಿದ್ದಕ್ಕೆ ಇವರಿಗೆ ಒಟ್ಟು 11.03 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ.