ಜಿಮ್ನಾಸ್ಟಿಕ್ ವರ್ಲ್ಡ್ ಕಪ್: ವಾಲ್ಟ್ ಫೈನಲ್‌ಗೆ ದೀಪಾ ಕರ್ಮಾಕರ್ ಆಯ್ಕೆ

ಕಾಟ್ಬಸ್, ನವೆಂಬರ್ 23: ಜರ್ಮನಿಯ ಕಾಟ್ಬಸ್ ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಕಪ್ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಮಹಿಳೆಯರ ವಾಲ್ಟ್ ವಿಭಾಗದಲ್ಲಿ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ಏಷ್ಯಾನ್ ಗೇಮ್ಸ್ ನಲ್ಲಿ ಗಾಯಕ್ಕೀಡಾಗಿದ್ದರಿಂದ ಕೇವಲ 14.100 ಅಂಕಗಳನ್ನಷ್ಟೇ ಸಂಪಾದಿಸಿ 16 ಸ್ಪರ್ಧಿಗಳಲ್ಲಿ 6ನೇ ಸ್ಥಾನಿಗರಾಗಿ ದೀಪಾ ಸ್ಪರ್ಧೆ ಮುಗಿಸಿದ್ದರು. ಇದೀಗ ದೀಪಾಗೆ ಪದಕ ಗೆಲ್ಲಲು ಅವಕಾಶ ಲಭಿಸಿದೆ. ಆದರೆ ಭಾರತದ ಇನ್ನೊಬ್ಬ ಸ್ಪರ್ಧಿ ಬಿ ಅರುಣಾ ರೆಡ್ಡಿ ಅವರು ಗಾಯಗೊಂಡು ಸ್ಪರ್ಧೆ ಅಂತ್ಯಗೊಳಿಸಿದ್ದಾರೆ.
'ಅರುಣಾ ಕೂಡ ವಾಲ್ಟ್ ವಿಭಾಗದಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಮೊದಲ ಸುತ್ತಿನ ಸ್ಪರ್ಧೆಯ ವೇಳೆ ಅವರು ಮೊಣಕಾಲಿಗೆ ಗಾಯ ಮಾಡಿಕೊಂಡಿರುವುದರಿಂದ ಸ್ಪರ್ಧೆ ನಿಲ್ಲಿಸಿ ಅರುಣಾ ಎಂಆರ್‌ಐ ಸ್ಕ್ಯಾನಿಂಗ್‌ಗೆ ತೆರಳಲಿದ್ದಾರೆ' ಎಂದು ಜಿಮ್ನಾಸ್ಟಿಕ್ ಫೆಡರೇಶನ್ ಆಫ್ ಇಂಡಿಯಾದ (ಜಿಎಫ್‌ಐ) ಉಪಾಧ್ಯಕ್ಷೆ ರಿಯಾಝ್ ಅಹ್ಮದ್ ಭಾಟಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications