ಅಬ್ಬಾ ಇಷ್ಟೊಂದಾ...! ವಿರಾಟ್ ಕೊಹ್ಲಿಯ ಕ್ಷೌರ ವೆಚ್ಚವನ್ನು ಬಹಿರಂಗಪಡಿಸಿದ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್
ಖ್ಯಾತ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರು ಬಾಲಿವುಡ್ ತಾರೆಗಳು ಮತ್ತು ಕ್ರೀಡಾ ಐಕಾನ್‌ಗಳ ವಿಭಿನ್ನ ಕೇಶ ವಿನ್ಯಾಸವನ್ನು ರೂಪಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅದೇ ರೀತಿ ಭಾರತ ಹಾಗೂ ಆರ್‌ಸಿಬಿ ತಂಡಗಳ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೂ ಇವರೇ ಕೇಶ ವಿನ್ಯಾಸ ಮಾಡುತ್ತಾರೆ.
ಇದೀಗ ಕ್ರಿಕೆಟ್ ಐಕಾನ್ ವಿರಾಟ್ ಅವರ ಹೇರ್‌ಕಟ್‌ನ ವೆಚ್ಚದ ಕುರಿತು ಆಲಿಮ್ ಹಕೀಮ್ ಬೆಳಕು ಚೆಲ್ಲಿದ್ದಾರೆ. ವಿರಾಟ್ ಕೊಹ್ಲಿ ಒಮ್ಮೆ ಕೇಶ ವಿನ್ಯಾಸ ಮಾಡಿಸಿಕೊಂಡರೆ, ತಾನು ಎಷ್ಟು ಶುಲ್ಕ ವಿಧಿಸುತ್ತೇನೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್ ನಟರಾದ ಹೃತಿಕ್ ರೋಷನ್, ರಣಬೀರ್ ಕಪೂರ್ ಮತ್ತು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರಂತಹ ಗ್ರಾಹಕರನ್ನು ಒಳಗೊಂಡಿರುವ ಆಲಿಮ್ ಹಕೀಮ್, ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ಹೇರ್ ಸ್ಟೈಲಿಸ್ಟ್‌ಗಳಲ್ಲಿ ಒಬ್ಬರಾಗಿ ಖ್ಯಾತಿ ಪಡೆದುಕೊಂಡಿದ್ದಾರೆ.
ಸೆಲೆಬ್ರಿಟಿಗಳು ಮತ್ತು ಕ್ರೀಡಾ ಐಕಾನ್‌ಗಳ ಲುಕ್ ಅನ್ನು ಪರಿವರ್ತಿಸುವ ಆಲಿಮ್ ಹಕೀಮ್ ಅವರ ಕುಶಲತೆಯು ಉದ್ಯಮದಲ್ಲಿ ಅವರ ಸ್ಥಾನಮಾನವನ್ನು ಎತ್ತರಕ್ಕೆ ಏರಿಸಿದೆ.
ವಿರಾಟ್ ಕೊಹ್ಲಿ ತಮಗೆ ಬೇಕಾದ ಹಾಗೆ ಕೇಶ ವಿನ್ಯಾಸ ಮಾಡಿಸಿಕೊಳ್ಳುತ್ತಾರೆ: ಆಲಿಮ್ ಹಕೀಮ್
ಇತ್ತೀಚಿನ ಸಂದರ್ಶನವೊಂದರಲ್ಲಿ ಆಲಿಮ್ ಹಕೀಮ್ ತನ್ನ ಕೇಶ ವಿನ್ಯಾಸ ಕರಕುಶಲತೆಯ ಕಷ್ಟವನ್ನು ಬಹಿರಂಗಪಡಿಸಿದರು. ವಿರಾಟ್ ಕೊಹ್ಲಿ ಅವರಿಗೆ ಒಮ್ಮೆ ಕ್ಷೌರ ಮಾಡಿದರೆ, ಒಂದು ಲಕ್ಷ ರೂಪಾಯಿಷ್ಟು ಮೊತ್ತವನ್ನು ತಂದುಕೊಡುತ್ತದೆ ಎಂದು ಬಹಿರಂಗಪಡಿಸಿದರು.
"ನನ್ನ ಶುಲ್ಕವು ತುಂಬಾ ಸರಳವಾಗಿದೆ ಮತ್ತು ನಾನು ಎಷ್ಟು ಶುಲ್ಕ ವಿಧಿಸುತ್ತೇನೆ ಎಂದು ಎಲ್ಲರಿಗೂ ತಿಳಿದಿದೆ. ಒಂದು ಲಕ್ಷ ರೂಪಾಯಿಂದ ಪ್ರಾರಂಭವಾಗುತ್ತದೆ. ಅದು ಕನಿಷ್ಠ ದರವಾಗಿದೆ," ಎಂದು ಆಲಿಮ್ ಹಕೀಮ್ ತಿಳಿಸಿದರು.
ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯೊಂದಿಗಿನ ತನ್ನ ಸಹಯೋಗದ ಬಗ್ಗೆ ಮಾತನಾಡಿದ ಆಲಿಮ್ ಹಕೀಮ್, ಕೊಹ್ಲಿಯ ಇತ್ತೀಚಿನ ಕ್ಷೌರದ ಒಳನೋಟಗಳನ್ನು ಹಂಚಿಕೊಂಡರು.
"ಐಪಿಎಲ್ ಹತ್ತಿರವಾಗುತ್ತಿದ್ದಂತೆ, ನಾವು ತಂಪಾದ ಮತ್ತು ವಿಭಿನ್ನವಾದದ್ದನ್ನು ಮಾಡಲು ನಿರ್ಧರಿಸಿದೆವು. ವಿರಾಟ್ ಕೊಹ್ಲಿ ಯಾವಾಗಲೂ "ನಾವು ಇದನ್ನು ಪ್ರಯತ್ನಿಸೋಣ, ನಾವು ಈ ರೀತಿ ವಿನ್ಯಾಸ ಪ್ರಯತ್ನಿಸೋಣ, ಮುಂದಿನ ಬಾರಿ ನಾವು ಬೇರೆ ವಿನ್ಯಾಸ ಪ್ರಯತ್ನಿಸೋಣ' ಎಂಬ ಉಲ್ಲೇಖಗಳನ್ನು ಹೊಂದಿರುತ್ತಾರೆ. ಈ ಬಾರಿ ನಾವು ಏನನ್ನಾದರೂ ವಿಭಿನ್ನವಾಗಿ ಮಾಡಲು ನಿರ್ಧರಿಸಿದ್ದೆವು. ನಾವು ಕೊಹ್ಲಿ ಹುಬ್ಬುಗಳಲ್ಲಿ ಸೀಳು ಮಾಡಿದ್ದೇವೆ," ಎಂದು ಆಲಿಮ್ ಹಕೀಮ್ ಬಹಿರಂಗಪಡಿಸಿದರು.
ಖ್ಯಾತ ನಟರಾದ ಹೃತಿಕ್ ರೋಷನ್, ರಣಬೀರ್ ಕಪೂರ್, ಶಾಹಿದ್ ಕಪೂರ್, ರಜನಿಕಾಂತ್ ಮತ್ತು ಪ್ರಭಾಸ್ ಸೇರಿದಂತೆ ಹಲವರಿಗೆ ಕೇಶ ವಿನ್ಯಾಸ ಕೆಲಸ ಮಾಡಿದ ಇತ್ತೀಚಿನ ಯೋಜನೆಗಳ ಬಗ್ಗೆ ಸ್ಟಾರ್ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ತಿಳಿಸಿದ್ದಾರೆ.
"ವಾರ್ ಸಿನಿಮಾದಲ್ಲಿ ಹೃತಿಕ್ ರೋಷನ್ ಲುಕ್, ಅನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಲುಕ್, ಕಬೀರ್ ಸಿಂಗ್ ಸಿನಿಮಾದಲ್ಲಿ ಶಾಹಿದ್ ಕಪೂರ್ ಲುಕ್, ಸ್ಯಾಮ್ ಬಹದ್ದೂರ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಲುಕ್, ಅನಿಮಲ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಲುಕ್, ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಲುಕ್, ಬಾಹುಬಲಿಯಲ್ಲಿ ಪ್ರಭಾಸ್ ಲುಕ್ ಅನ್ನು ಮೆಚ್ಚಿಕೊಂಡಿದ್ದಾರೆ. ಸುಮಾರು ಶೇ.98ರಷ್ಟು ಭಾರತೀಯ ಸಿನಿಮಾ ತಾರೆಗಳಿಗೆ ನನ್ನ ಕೇಶ ವಿನ್ಯಾಸವಾಗಿದೆ," ಎಂದು ಅಲಿಮ್ ಹಕೀಮ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications