ರಾಹುಲ್ ದ್ರಾವಿಡ್ ಮತ್ತು ವಿಜೇತಾ ಪೆಂಡಾರ್ಕರ್ ಅವರ ಪ್ರೇಮಕಥೆ: ಸ್ನೇಹಿತರಾಗುವುದರಿಂದ ದಂಪತಿಗಳವರೆಗೆ ಭಾರತ ಪುರುಷರ ಕ್ರಿಕೆಟ್ ತಂಡದ ಹಾಲಿ ಮುಖ್ಯ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಇಂದು ಗುರುವಾರ, ಜನವರಿ 11ರಂದು 51ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಮತ್ತು ಅಂಡರ್-19 ಮತ್ತು ಭಾರತ ಎ ತಂಡಗಳ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ 2021ರ ನವೆಂಬರ್‌ನಲ್ಲಿ ರವಿಶಾಸ್ತ್ರಿ ಅವರಿಂದ ಕೋಚ್ ಹುದ್ದೆ ವಹಿಸಿಕೊಂಡರು.
ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯು ಅವರು ಮತ್ತು ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದಷ್ಟು ಆದರ್ಶವಾಗಿಲ್ಲ.

ಭಾರತ ತಂಡವು 2022ರ ಟಿ20 ಏಷ್ಯಾ ಕಪ್, 2022ರ ಟಿ20 ವಿಶ್ವಕಪ್ ಫೈನಲ್‌ಗೆ ತಲುಪಲು ವಿಫಲವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಸೋತಿತು. ಬಾಂಗ್ಲಾದೇಶದಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿತು ಮತ್ತು ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಸೋತಿತು.
ನಂತರ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋಲು ಅನುಭವಿಸಿತು. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಐಸಿಸಿ ಟ್ರೋಫಿ ಗೆಲ್ಲದಿರುವುದು ನಿರಾಸೆ ಮೂಡಿಸಿದೆ.
ಸಕಾರಾತ್ಮಕವಾಗಿ ಹೇಳುವುದಾದರೆ, ಭಾರತವು ತನ್ನ ಎಲ್ಲಾ ಸ್ವದೇಶಿ ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದೆ, ಜೊತೆಗೆ ಇಂಗ್ಲೆಂಡ್‌ನಲ್ಲಿ ವೈಟ್-ಬಾಲ್ ಸರಣಿ ಗೆಲುವು ಮತ್ತು ಬಾಂಗ್ಲಾದೇಶದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದೆ.
ಇದೀಗ ರಾಹುಲ್ ದ್ರಾವಿಡ್ ಅವರ ಜನ್ಮದಿನದ ಬಗ್ಗೆ ಮಾತನಾಡುವಾಗ, ನಾವು ರಾಹುಲ್ ದ್ರಾವಿಡ್ ಮತ್ತು ಅವರ ಸಂಗಾತಿ ವಿಜೇತಾ ಪೆಂಢಾರ್ಕರ್ ನಡುವಿನ ಪ್ರೇಮಕಥೆಯ ಬಗ್ಗೆ ಮಾತನಾಡಬೇಕು.
ರಾಹುಲ್ ದ್ರಾವಿಡ್‌ಗಿಂತ ಮೂರು ವರ್ಷ ಚಿಕ್ಕವರಾಗಿರುವ ವಿಜೇತಾ ಪೆಂಢಾರ್ಕರ್ ನಿವೃತ್ತ ವಿಂಗ್ ಕಮಾಂಡರ್‌ನ ಮಗಳಾಗಿದ್ದು, ಅವರ ತಂದೆಯ ನಿವೃತ್ತಿಯ ನಂತರ, ಕುಟುಂಬವು ನಾಗ್ಪುರದಲ್ಲಿ ನೆಲೆಸಿತು. ಅಲ್ಲಿ ವಿಜೇತಾ 2002ರಲ್ಲಿ ವೈದ್ಯಕೀಯ ಶಸ್ತ್ರಚಿಕಿತ್ಸಕ (ಜನರಲ್) ಆಗಲು ಅಭ್ಯಾಸ ಆರಂಭಿಸಿದರು.

ರಾಹುಲ್ ದ್ರಾವಿಡ್ ಮತ್ತು ವಿಜೇತಾ ಪೆಂಡಾರ್ಕರ್ ಬಹಳ ಹಿಂದಿನಿಂದಲೂ ಪರಸ್ಪರ ಪರಿಚಿತರು. 1968 ಮತ್ತು 1971ರ ನಡುವೆ ಪೆಂಡಾರ್ಕರ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು ಮತ್ತು ಆಗ ಎರಡು ಕುಟುಂಬಗಳ ನಡುವೆ ಸ್ನೇಹ ಪ್ರಾರಂಭವಾಯಿತು.
ರಾಹುಲ್ ದ್ರಾವಿಡ್ ತಂದೆ ಶರದ್ ಸ್ವಲ್ಪ ದಿನಗಳ ಕಾಲ ನಾಗ್ಪುರದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಆಗ ಯುವಕ ರಾಹುಲ್ ಮತ್ತು ವಿಜೇತಾ ಉತ್ತಮ ಸ್ನೇಹಿತರಾಗಿದ್ದರು.
ಅವಕಾಶ ಸಿಕ್ಕಾಗಲೆಲ್ಲಾ ರಾಹುಲ್ ದ್ರಾವಿಡ್ ನಾಗ್ಪುರಕ್ಕೆ ಭೇಟಿ ನೀಡುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು. ಪರಸ್ಪರರ ನಡುವಿನ ಪ್ರೀತಿಯನ್ನು ಎರಡು ಕುಟುಂಬಗಳು ಅರ್ಥಮಾಡಿಕೊಂಡರು ಮತ್ತು ಶೀಘ್ರವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು ಮತ್ತು ಇಬ್ಬರೂ ವಿವಾಹವಾದರು.
ರಾಹುಲ್ ದ್ರಾವಿಡ್ ಅವರ ಖಾಸಗಿ ಮತ್ತು ಸಂಭಾವಿತ ಸ್ವಭಾವದ ಹೊರತಾಗಿಯೂ, ಭಾರತೀಯ ಕ್ರಿಕೆಟಿಗನಾಗಿ ಅವರ ವೃತ್ತಿಜೀವನ ಯಾವಾಗಲೂ ಗಮನ ಸೆಳೆಯುತ್ತದೆ. ಆದರೆ, ಅವರ ಪತ್ನಿ ವಿಜೇತಾ ಎಲ್ಲೂ ಕಾಣಿಸಿಕೊಳ್ಳಲ್ಲ ಮತ್ತು ಪ್ರಚಾರದಿಂದ ದೂರವುಳಿಯಲು ಬಯಸುತ್ತಾರೆ.

ಇನ್ನು ರಾಹುಲ್ ದ್ರಾವಿಡ್ ಮತ್ತು ವಿಜೇತಾ ಅವರ ಮದುವೆಯನ್ನು ಆರಂಭದಲ್ಲಿ 2002ಕ್ಕೆ ನಿಗದಿಪಡಿಸಲಾಗಿತ್ತು, ಆದರೆ 2003ರಲ್ಲಿ ಏಕದಿನ ವಿಶ್ವಕಪ್ ನಡೆಯಲಿರುವ ಕಾರಣ ಮತ್ತು ರಾಹುಲ್ ಅಭ್ಯಾಸದಲ್ಲಿ ನಿರತರಾಗಿದ್ದರಿಂದ, ಕುಟುಂಬಗಳು ಮದುವೆಯನ್ನು ಮುಂದೂಡಲು ನಿರ್ಧರಿಸಿದವು.
ಪಂದ್ಯಾವಳಿ ಆರಂಭವಾಗುವ ಮೊದಲು ರಾಹುಲ್ ದ್ರಾವಿಡ್ ಮತ್ತು ವಿಜೇತಾ ಉಂಗುರ (ನಿಶ್ಚಿತಾರ್ಥ) ಬದಲಾಯಿಸಿಕೊಂಡಿದ್ದರು. ವಿಜೇತಾ ತನ್ನ ಅಂದಿನ ನಿಶ್ಚಿತ ವರ ರಾಹುಲ್ ದ್ರಾವಿಡ್ ಅವರೊಂದಿಗೆ ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು.
ಅಂತಿಮವಾಗಿ ಮೇ 2003ರಲ್ಲಿ ಜೋಡಿಗಳಿಗೆ ಮದುವೆ ಮಾಡಿಸಿದರು ಮತ್ತು ದಂಪತಿಯಾದರು. ಈ ವಿವಾಹ ಮಹಾರಾಷ್ಟ್ರದ ಸಾಂಪ್ರದಾಯಿಕ ವಿವಾಹವಾಗಿದ್ದು, ಬೆಂಗಳೂರಿನ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತರಬೇತಿ ಕೇಂದ್ರದಲ್ಲಿ ನಡೆಯಿತು.
ರಾಹುಲ್ ದ್ರಾವಿಡ್ ಮತ್ತು ವಿಜೇತಾ ದಂಪತಿ 2005ರಲ್ಲಿ ತಮ್ಮ ಮೊದಲ ಮಗ ಸಮಿತ್ ಮತ್ತು 2009ರಲ್ಲಿ ಅವರ ಎರಡನೇ ಮಗ ಅನ್ವಯ್ ಅವರಿಗೆ ಜನ್ಮ ನೀಡಿದರು. ಇಬ್ಬರು ಮಕ್ಕಳೂ ಕ್ರಿಕೆಟಿಗರಾಗಿ ಬೆಳೆಯುತ್ತಿದ್ದಾರೆ.