For Quick Alerts
ALLOW NOTIFICATIONS  
For Daily Alerts

Vinesh Phogat Win: ಒಲಿಪಿಂಕ್ಸ್‌ನಲ್ಲಿ ಪದಕ ಕೈ ಕೊಟ್ಟಿತ್ತು, ಚುನಾವಣೆಯಲ್ಲಿ ಮತದಾರ 'ಕೈ' ಹಿಡಿದ

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಸ್ಟಾರ್ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಪದಕ ಗೆಲ್ಲಲ್ಲು ಸಾಧ್ಯವಾಗಿರಲಿಲ್ಲ. ಅವರು 50 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್‌ ತಲುಪಿದರೂ, ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದಿದ್ದರಿಂದ ಆರ್ನಹಗೊಂಡಿದ್ದರು. ಇದರೊಂದಿಗೆ ಅವರ ಬಂಗಾರ ಪದಕ ಗೆಲ್ಲುವ ಕನಸು ನುಚ್ಚುನೂರಾಗಿತ್ತು.

ಈಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಳೆದುಕೊಂಡಿದ್ದನ್ನು ವಿನೇಶ್ ಫೋಗಟ್ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಡೆದುಕೊಂಡಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನೇಶ್ ಭರ್ಜರಿ ಜಯ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಯೋಗೇಶ್‌ಕುಮಾರ್ ಬೈರಾಗಿ ಮತ್ತು ವಿನೇಶ್ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಆದರೆ ಯೋಗೇಶ್ ಕುಮಾರ್ ಬೈರಾಗಿ ಅವರನ್ನು 5961 ಮತಗಳಿಂದ ಹಿಂದಿಕ್ಕುವ ಮೂಲಕ ವಿನೇಶ್ ಭಾರೀ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.

Harayana Assembly Election Results 2024 Star women wrestler Vinesh Phogat Victory in Jhulana

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಕುಸ್ತಿ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಪ್ಯಾರಿಸ್‌ನಿಂದ ಭಾರತಕ್ಕೆ ಹಿಂದಿರುಗಿದ ನಂತರ, ವಿನೇಶ್ ಅವರಿಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿತ್ತು. ಈ ವೇಳೆ ನೆರದಿದ್ದ ಜನ ಸಮೂಹವನ್ನು ನೋಡಿ ವಿನೇಶ್ ಕಣ್ಣಿರಿಟ್ಟಿದ್ದರು. ಇದಾದ ನಂತರ ಇತ್ತೀಚೆಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಪಕ್ಷವು ಅವರಿಗೆ ಜೂಲಾನಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಕಣಕ್ಕೀಳಿಸಿತ್ತು. ಇದೀಗ ಹರಿಯಾಣ ಮತ್ತು ಜೂಲಾನಾ ಕ್ಷೇತ್ರದ ಜನರು ವಿನೇಶ್ ಫೋಗಟ್ ಅವರನ್ನು 5961 ಮತಗಳಿಂದ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ.

ಈ ಹಿಂದೆ ಜಂತರ್ ಮಂತರ್‌ನಲ್ಲಿ ಮಾಜಿ ಬಿಜೆಪಿ ಸಂಸದ ಮತ್ತು ಡಬ್ಲ್ಯೂಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಇತರ ಆರೋಪಗಳನ್ನು ಮಾಡಿದ ವಿನೇಶ್ ಫೋಗಟ್ ಪ್ರತಿಭಟನೆ ನಡೆಸಿದ್ದರು. ಅವರೊಂದಿಗೆ ಸ್ಟಾರ್ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಂತರ್ ಮಂತರ್‌ನಲ್ಲಿ ಅವರ ಪ್ರತಿಭಟನೆ ಹಲವು ದಿನಗಳ ಕಾಲ ಮುಂದುವರೆದಿತ್ತು. ಪ್ರತಿಭಟನೆ ಇಡೀ ದೇಶದೆಲ್ಲಡೆ ಹೆಚ್ಚು ಚರ್ಚೆಯಾಗಿತ್ತು. ಈ ಮೂಲಕ ವಿನೇಶ್ ಸಾಕಷ್ಟು ದಿನಗಳಿಂದ ಸುದ್ದಿಯಲ್ಲಿದ್ದರು.

Story first published: Tuesday, October 8, 2024, 13:40 [IST]
Other articles published on Oct 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+