ಪ್ರೇಮಿಗಳ ದಿನದಂದು ಹೆಂಡತಿಯನ್ನೇ ಮದುವೆಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ!

ಪ್ರೇಮಿಗಳ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವ ಪ್ರಕಾರ ಹಾರ್ದಿಕ್ ಪಾಂಡ್ಯ ಫೆಬ್ರವರಿ 14ರಂದು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ರನ್ನು ಮದುವೆಯಾಗುತ್ತಾರೆ ಎಂದು ಹೇಳಲಾಗಿದೆ.
ಇದೇನಪ್ಪ ವಿಚಿತ್ರ, ಮದುವೆಯಾಗಿ ಮಗು ಆದ ಮೇಲೆ ಹಾರ್ದಿಕ್ ಪಾಂಡ್ಯ ಹೀಗ್ಯಾಕೆ ಎಂದು ಅಚ್ಚರಿಯಾಗಬಹುದು. ಇದಕ್ಕೂ ಒಂದು ಕಾರಣವಿದೆ. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಮೇ 31ರಂದು 2020ರಲ್ಲಿ ವಿವಾಹವಾಗಿದ್ದರು. ಜುಲೈ 2020ರಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ಮಗನಿಗೆ ಅಗಸ್ತ್ಯ ಎಂದು ನಾಮಕರಣ ಮಾಡಿದ್ದಾರೆ.
ಸರಳವಾಗಿ ಕಾನೂನು ಬದ್ಧವಾಗಿ ಅಂದು ವಿವಾಹವಾಗಿದ್ದ ಜೋಡಿಗೆ ಅದ್ಧೂರಿಯಾಗಿ ಮದುವೆಯಾಗುವ ಕನಸಿತ್ತಂತೆ. ಅದಕ್ಕಾಗಿ ಈ ಬಾರಿಯ ಪ್ರೇಮಿಗಳ ದಿನಾಚರಣೆಯಂದು ಪಾಂಡ್ಯ ದಂಪತಿ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
2023ರ ಫೆಬ್ರವರಿ 14ರಂದು ಉದಯಪುರದಲ್ಲಿ ಮದುವೆ ನಡೆಯಲಿದೆ. ನತಾಶಾ ಸ್ಟಾಂಕೋವಿಕ್ ಆಗಿರುವ ಕಾರಣ ಮದುವೆಯಲ್ಲಿ ಅಲಂಕರಿಸುವ ಹೂಗಳಿಂದ ಹಿಡಿದು ದಂಪತಿಯ ಉಡುಗೆ ತೊಡುಗೆಗಳು ಬಿಳಿಯ ಬಣ್ಣದಲ್ಲಿರುವಂತೆ ವಿನ್ಯಾಸ ಮಾಡಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಾಂಪ್ರದಾಯಿಕವಾಗಿ ನಡೆಯಲಿದೆ ಮದುವೆ
ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆಸಲಾಗುವುದು ಎಂದು ಹೇಳಲಾಗಿದೆ. ವಿವಾಹ ಕಾರ್ಯಕ್ರುಮ ಫೆಬ್ರವರಿ 13 ರಿಂದ ಫೆಬ್ರವರಿ 16ರವೆರೆಗೆ ನಡೆಯಲಿದೆ. ನತಾಶಾ ಸ್ಟಾಂಕೋವಿಕ್ ಬಿಳಿ ಡೌಲ್ಸ್ ಮತ್ತು ಗಬ್ಬಾನಾ ಗೌನ್ ಧರಿಸಲಿದ್ದಾರೆ ಎಂದು ವರದಿಯಾಗಿದೆ. ಮದುವೆಗೆ ಮೊದಲಿನ ಆಚರಣೆಗಳಾದ ಹಲ್ದಿ, ಸಂಗೀತ ಮತ್ತು ಮೆಹೆಂದಿ ಆಚರಣೆಗಳು ಕೂಡ ನಡೆಯಲಿವೆ. ಇದಕ್ಕಾಗಿ ಕಳೆದ ವರ್ಷ ನವೆಂಬರ್ ನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಕೂಡ ವರದಿಯಾಗಿದೆ.

ಸರಳ ವಿವಾಹವಾಗಿದ್ದ ಜೋಡಿ
ಮೂಲಗಳ ಪ್ರಕಾರ "ಪಾಂಡ್ಯ ಮತ್ತು ನತಾಶಾ ನ್ಯಾಯಾಲಯದಲ್ಲಿ ವಿವಾಹವಾದರು. ಅದು ಎಲ್ಲವೂ ಆತುರದಲ್ಲಿ ನಡೆದಿತ್ತು. ಅಂದಿನಿಂದ ದಂಪತಿಯಲ್ಲಿ ಅದ್ದೂರಿಯಾಗಿ ಮದುವೆಯಾಗಬೇಕೆಂಬ ಆಲೋಚನೆ ಇತ್ತು. ಈಗ ಅದು ನೆರವೇರುತ್ತಿರುವುದಕ್ಕೆ ಇಬ್ಬರೂ ಖುಷಿಯಲ್ಲಿದ್ದಾರೆ" ಎಂದು ಹೇಳಲಾಗಿದೆ.
ಇದೇ ಕಾರಣಕ್ಕೆ ವಿಶೇಷವಾದ ಪ್ರೇಮಿಗಳ ದಿನದಂದೇ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿದೆ ಈ ತಾರಾ ಜೋಡಿ.
ಸದ್ಯ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲಿ ಇಲ್ಲದೇ ಇರುವುದರಿಂದ ಇನ್ನು ಒಂದು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮತ್ತು ಐಪಿಎಲ್ ಆರಂಭವಾಗಲಿದ್ದು ಅವರು ಮತ್ತೆ ಕ್ರಿಕೆಟ್‌ಗೆ ಮರಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications