ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಈ ವರ್ಷವು ವೃತ್ತಿಜೀವನದಲ್ಲಿ ಕೆಟ್ಟದ್ದಕ್ಕಿಂತ ಕೆಟ್ಟದಾಗಿ ಸಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನಿರಾಶಾದಾಯಕ ಆವೃತ್ತಿ ಮತ್ತು ವೈಯಕ್ತಿಕ ಕಳಪೆ ಪ್ರದರ್ಶನಗಳು ಅವರನ್ನು ಕುಗ್ಗಿಸಿವೆ.
ಇದರ ನಡುವೆಯೇ ಹಾರ್ದಿಕ್ ಪಾಂಡ್ಯ ಪತ್ನಿ ನತಾಸಾ ಸ್ಟಾಂಕೋವಿಕ್ ಅವರೊಂದಿಗಿನ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದು ಖಚಿತವಾಗಿಲ್ಲ.

ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಮೇ 31, 2020ರಂದು ವಿವಾಹವಾದರು ಮತ್ತು ಅದೇ ವರ್ಷದ ಜುಲೈ 30ರಂದು ತಮ್ಮ ಮಗ ಅಗಸ್ತ್ಯನನ್ನು ಸ್ವಾಗತಿಸಿದರು.
ಮಾರ್ಚ್ 2024ರಲ್ಲಿ ಸರ್ಬಿಯಾದ ಮಾಡೆಲ್ ಕಂ ನಟಿ ನತಾಸಾ ಸ್ಟಾಂಕೋವಿಕ್ ಅವರು ಹಾರ್ದಿಕ್ ಪಾಂಡ್ಯ ಅವರ ಕಳಪೆ ಐಪಿಎಲ್ ಪ್ರದರ್ಶನಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗೆ ಒಳಗಾಗಿದ್ದರು. ಇದೀಗ ರೆಡ್ಡಿಟ್‌ನ 'ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಬೇರ್ಪಟ್ಟಿದ್ದಾರೆಯೇ?' ಪೋಸ್ಟ್ ಭಾರೀ ಗಮನ ಸೆಳೆಯುತ್ತಿದೆ.

ಈ ಹಿಂದೆ ನತಾಸಾ ಸ್ಟಾಂಕೋವಿಕ್ ಪಾಂಡ್ಯ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬಳಸಿದ್ದರು. ಮಂಗಳವಾರ ಪೋಸ್ಟ್ ಮಾಡಿದ ರೆಡ್ಡಿಟ್, "ಇದು ಕೇವಲ ಊಹಾಪೋಹ. ಆದರೆ ಇಬ್ಬರೂ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪರಸ್ಪರ ಟ್ಯಾಗ್ ಮಾಡುತ್ತಿಲ್ಲ. ಈ ಹಿಂದೆ, ನತಾಸಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನತಾಸಾ ಸ್ಟಾಂಕೋವಿಕ್ ಪಾಂಡ್ಯ ಎಂದು ಹೊಂದಿದ್ದಳು. ಆದರೆ ಇದೀಗ ಅವಳು ಪಾಂಡ್ಯ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾಳೆ," ಎಂದು ತಿಳಿಸಿದೆ.
ರೆಡ್ಡಿಟ್ ಪೋಸ್ಟ್‌ನಲ್ಲಿ, "ಮಾರ್ಚ್ 4ರಂದು ನತಾಸಾ ಸ್ಟಾಂಕೋವಿಕ್ ಜನ್ಮದಿನವಾಗಿತ್ತು. ಆ ದಿನ ಹಾರ್ದಿಕ್ ಪಾಂಡ್ಯರಿಂದ ಯಾವುದೇ ಪೋಸ್ಟ್ ಇರಲಿಲ್ಲ. ಮಗ ಅಗಸ್ತ್ಯನೊಂದಿಗೆ ಇದ್ದ ಪೋಸ್ಟ್ ಅನ್ನು ಹೊರತುಪಡಿಸಿ, ತನ್ನ ಮತ್ತು ಹಾರ್ದಿಕ್ ಪಾಂಡ್ಯ ಜೊತೆಗಿರುವ ಎಲ್ಲಾ ಇತ್ತೀಚಿನ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ," ಎಂದು ಬರೆದುಕೊಂಡಿದೆ.

"ಅಲ್ಲದೆ, ನತಾಸಾ ಸ್ಟಾಂಕೋವಿಕ್ 2024ರ ಐಪಿಎಲ್ ಅವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸಲು ಸ್ಟ್ಯಾಂಡ್‌ಗಳಲ್ಲಿ ಅಥವಾ ತಂಡದ ಬಗ್ಗೆ ಸ್ಟೋರಿಗಳಲ್ಲಿ ಕಾಣಿಸಿಕೊಂಡಿಲ್ಲ. ಕೃನಾಲ್ ಪಾಂಡ್ಯ ಮತ್ತು ಪಂಖುರಿ ಇನ್ನೂ ಅವರ ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ನತಾಸಾ ಮತ್ತು ಹಾರ್ದಿಕ್ ನಡುವೆ ಖಂಡಿತವಾಗಿಯೂ ಏನೋ ಕಡಿತಗೊಂಡಿದೆ," ಎಂದು ರೆಡ್ಡಿಟ್ ಪೋಸ್ಟ್ ಮಾಡಿದೆ.
ರೆಡ್ಡಿಟ್‌ನಲ್ಲಿ ಅನೇಕರು ಈ ಊಹಾಪೋಹ ವದಂತಿಗೆ ಪ್ರತಿಕ್ರಿಯಿಸಿದ್ದು, ಒಬ್ಬರು "ಇದರಲ್ಲಿ ಆಶ್ಚರ್ಯವಿಲ್ಲ' ಎಂದು ಬರೆದಿದ್ದಾರೆ. ಮತ್ತೊಬ್ಬರು, "ಸರಿ, ಹಾರ್ದಿಕ್ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಶುಭ್ಮನ್ ಗಿಲ್ ಹಾಕಿದ ಪೋಸ್ಟ್‌ನಲ್ಲಿ ಯಾರೋ ಒಬ್ಬರು ಕಾಮೆಂಟ್ ಮಾಡಿದ್ದಾರೆ ಮತ್ತು ಅವರು ಬೇರೆ ಹುಡುಗಿಯ ಜೊತೆ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ," ಎಂದು ಕಾಮೆಂಟ್ ಮಾಡಿದ್ದಾರೆ.

ಮಾಡೆಲ್ ಮತ್ತು ಕ್ರಿಕೆಟಿಗ ದಂಪತಿಯ ಪ್ರಸ್ತುತ ಸಂಬಂಧದ ಸ್ಥಿತಿಯನ್ನು ಅವಸರವಾಗಿ ಊಹಿಸಲಾಗುತ್ತಿದೆ ಎಂದು ಒಬ್ಬ ರೆಡ್ಡಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಆದರೆ ನತಾಸಾ ಹಾರ್ದಿಕ್ ಪಾಂಡ್ಯನೊಂದಿಗಿನ ಎಲ್ಲಾ ಚಿತ್ರಗಳನ್ನು ಅಳಿಸಿಲ್ಲ, ಹಾಗಾಗಿ ನಾನು ಮುಂಚೆಯೇ ಊಹಿಸುವುದು ತಪ್ಪು ಎಂದು ಭಾವಿಸುತ್ತೇನೆ," ಎಂದಿದ್ದಾರೆ.
ಐಪಿಎಲ್ ವಿಷಯಕ್ಕೆ ಸಂಬಂಧಿಸಿದಂತೆ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತನ್ನ ಸಂಗಾತಿ ಎಂಬ ಕಾರಣಕ್ಕಾಗಿ, ಕೆಲವರು ಟ್ರೋಲ್ ಮಾಡುತ್ತಿದ್ದರಿಂದ ಅದರ ಭಾಗವಾಗದಂತೆ ನತಾಸಾಗೆ ಹೇಳಿರಬೇಕು ಎಂದು ನಾನು ಭಾವಿಸುತ್ತೇನೆ. "ಐಪಿಎಲ್ ಟ್ರೋಲ್ ಮತ್ತು ದ್ವೇಷದಿಂದಾಗಿ ಹಾರ್ದಿಕ್ ಪಾಂಡ್ಯ ಬಹುಶಃ ಅವಳನ್ನು ಇದರಿಂದ ದೂರ ಉಳಿಯಲು ಕೇಳಿರಬಹುದು," ಎಂದು ಒಬ್ಬ ವ್ಯಕ್ತಿ ಹೀಗೆ ಬರೆದಿದ್ದಾರೆ.
"ಭಾರತದ ಜನರು ಕ್ರಿಕೆಟಿಗರ ಪತ್ನಿಯರನ್ನು ಅವಮಾನಿಸಲು ಅಥವಾ ಟ್ರೋಲ್ ಮಾಡುವ ಕೆಲಸವನ್ನು ಬಹಳ ಬೇಗನೆ ಮಾಡುತ್ತಾರೆ. ಆಗ ಜನರು ಎಂಎಸ್ ಧೋನಿಯ 5 ವರ್ಷದ ಮಗಳಿಗೆ ಕಿರುಕುಳ ನೀಡಿದ ರೀತಿ. ಬಹುಶಃ ಹಾರ್ದಿಕ್ ಪಾಂಡ್ಯ ದಂಪತಿ ಜಾಗರೂಕರಾಗಿರಬಹುದು," ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ, ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವ ಮತ್ತು ಪ್ರದರ್ಶನಕ್ಕಾಗಿ ಅವರ ಪತ್ನಿ ಸರ್ಬಿಯಾದ ಮಾಡೆಲ್ ಕಂ ನಟಿ ನತಾಸಾ ಸ್ಟಾಂಕೋವಿಕ್‌ರನ್ನು ಟ್ರೋಲ್ ಮಾಡಲಾಯಿತು.
ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್‌ನ ಕಳಪೆ ಆರಂಭದ ಕುರಿತು, ನತಾಸಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಾಮೆಂಟ್‌ಗಳ ವಿಭಾಗಗಳಲ್ಲಿ ಟ್ರೋಲರ್‌ಗಳು ಅವಳ ವಿರುದ್ಧ ಅವಮಾನ ಮತ್ತು ಅವಹೇಳನಕಾರಿ ಹೇಳಿಕೆಗಳೊಂದಿಗೆ ತುಂಬಿವೆ ಎಂಬುದು ಗಮನಿಸಬೇಕಾದ ಸಂಗತಿ.