ಡಿವೋರ್ಸ್ ಬಳಿಕವೂ ನತಾಸಾಗೆ ಪ್ರೀತಿ ತೋರಿದ ಹಾರ್ದಿಕ್ ಪಾಂಡ್ಯ; ಮಗನಿಗಾಗಿ ಮತ್ತೆ ಒಂದಾಗ್ತಾರಾ?
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಜುಲೈ 18ರಂದು ಅಧಿಕೃತವಾಗಿ ಡಿವೋರ್ಸ್ ಘೋಷಿಸಿದ ಬಳಿಕ, ಮೊದಲ ಬಾರಿಗೆ ಮಾಜಿ ಪತ್ನಿ ನತಾಸಾ ಸ್ಟಾಂಕೋವಿಕ್ ಅವರ ಫೋಟೋಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಭಾರತದಿಂದ ಸರ್ಬಿಯಾದಲ್ಲಿರುವ ತನ್ನ ಮನೆಗೆ ತೆರಳಿದ ನಂತರ, ನತಾಸಾ ಸ್ಟಾಂಕೋವಿಕ್ ಜುಲೈ 24ರ ಬುಧವಾರದಂದು ತಮ್ಮ ಮಗ ಅಗಸ್ತ್ಯನೊಂದಿಗಿನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳಿಗೆ ಹಾರ್ದಿಕ್ ಪಾಂಡ್ಯ ಪ್ರೀತಿಯ ಮಳೆಗರೆದರು.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ತಾಯಿ ಮತ್ತು ಮಗ ಜೋಡಿಯ ಫೋಟೋಗಳಿಗೆ ಹಾರ್ದಿಕ್ ಪಾಂಡ್ಯ ಪ್ರೀತಿಯ ಮತ್ತು ಸೂಪರ್ ಎನ್ನುವ ಇಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಭಾರತೀ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನಾಲ್ಕು ವರ್ಷಗಳ ವೈವಾಹಿಕ ಸಂಬಂಧದ ನಂತರ, ಪತ್ನಿ ನತಾಸಾ ಸ್ಟಾಂಕೋವಿಕ್ ಅವರೊಂದಿಗೆ ಬೇರ್ಪಡುವುದಾಗಿ ಘೋಷಿಸಿದರು. ಎರಡು ತಿಂಗಳ ಊಹಾಪೋಹಗಳ ನಂತರ ಹಾರ್ದಿಕ್ ಪಾಂಡ್ಯ ಗುರುವಾರ, ಜುಲೈ 18ರಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ಸಂಗಾತಿಯೊಂದಿಗಿನ ಜಂಟಿ ಹೇಳಿಕೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಮಾಧ್ಯಮದ ಮೂಲಕ ವಿಚ್ಚೇದನ ನಿರ್ಧಾರವನ್ನು ಪ್ರಕಟಿಸಿದರು.
2024ರ ಇಂಡಿಯನ್ಸ್ ಪ್ರೀಮಿಯರ್ ಲೀಗ್‌ನ ಆವೃತ್ತಿಯಿಂದಲೇ ಊಹಾಪೋಹಗಳು ಹರಿದಾಡಿದ್ದವು. ಆಗ ನತಾಸಾ ಸ್ಟಾಂಕೋವಿಕ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ತಮ್ಮ ವೈಯಕ್ತಿಕ ಫೋಟೋಗಳನ್ನು ಅಳಿಸಿದ್ದಾರೆ ಎಂದು ರೆಡ್ಡಿಟ್ ಪೋಸ್ಟ್ ಗಮನಸೆಳೆದಿತ್ತು. ಅಲ್ಲದೆ, ಆ ಸಮಯದಲ್ಲಿ ನತಾಸಾ ಸ್ಟಾಂಕೋವೊಕ್ ತನ್ನ ಪ್ರೊಫೈಲ್‌ನಿಂದ ಹಾರ್ದಿಕ್ ಹೆಸರನ್ನು ತೆಗೆದುಹಾಕಿದ್ದಳು.
ತಮ್ಮ ಅಧಿಕೃತ ಹೇಳಿಕೆಯಲ್ಲಿ, ಮಾಜಿ ದಂಪತಿ ಪರಸ್ಪರ ಬೇರೆಯಾದರು ಮತ್ತು ಅವರು ಮಗ ಅಗಸ್ತ್ಯನಿಗೆ ಸಹ-ಪೋಷಕರಾಗುತ್ತಾರೆ ಎಂದು ಬಹಿರಂಗಪಡಿಸಿದರು.
"4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ನತಾಸಾ ಸ್ಟಾಂಕೋವಿಕ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಮತ್ತು ನಮ್ಮೆಲ್ಲವನ್ನೂ ನೀಡಿದ್ದೇವೆ ಮತ್ತು ಇದು ನಮ್ಮಿಬ್ಬರಿಗೂ ಉತ್ತಮ ಹಿತಾಸಕ್ತಿಯಾಗಿದೆ ಎಂದು ನಾವು ನಂಬುತ್ತೇವೆ".
"ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟ ಮತ್ತು ನಾವು ಕುಟುಂಬವನ್ನು ಬೆಳೆಸಿದಾಗ ನಾವು ವಿಚ್ಚೇದನ ಪಡೆಯಲು ಕಠಿಣ ನಿರ್ಧಾರವಾಗಿತ್ತು," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
"ನಾವು ಅಗಸ್ತ್ಯನಿಗೆ ಜನ್ಮ ನೀಡಿದ್ದೇವೆ, ಅವನು ನಮ್ಮಿಬ್ಬರ ಜೀವನದ ಕೇಂದ್ರದಲ್ಲಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನೀಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಹ-ಪೋಷಕರಾಗಿರುತ್ತೇವೆ," ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದರು.
"ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮಗೆ ಗೌಪ್ಯತೆಯನ್ನು ಕಾಪಾಡಲು ನಿಮ್ಮ ಬೆಂಬಲ ಮತ್ತು ಸಹಕಾರವನ್ನು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ," ಎಂದು ಹಾರ್ದಿಕ್ ಪಾಂಡ್ಯ ತಮ್ಮ ಹೇಳಿಕೆಯಲ್ಲಿ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications