
ಇದೇ ವಿಭಾಗದಲ್ಲಿ ಮತ್ತೊಬ್ಬ ಭಾರತೀಯ ಸ್ಪರ್ಧಿ ಪಿ. ಶ್ರೀ ನಿವೇತಾ ಅವರು ಕಂಚಿನ ಪದಕ ಜಯಿಸಿದ್ದಾರೆ.
ಫೈನಲ್ ಸ್ಪರ್ಧೆಯ ಒಂದು ಹಂತದಲ್ಲಿ ಹೀನಾ ಅವರು 239.8 ಅಂಕಗಳೊಂದಿಗೆ ಫ್ರಾನ್ಸಿನ ಮ್ಯಾಥಿಲ್ಡೆ ಲಾಮೋಲ್ ಅವರಿಗೆ ಸರಿಸಮಾನರಾಗಿದ್ದರು. ಆದರೆ ಮುನ್ನಡೆ ಸಾಧಿಸಿದ ಹೀನಾ ಅಂತಿಮವಾಗಿ ಚಿನ್ನ ತನ್ನದಾಗಿಸಿಕೊಂಡರು. ಶ್ರೀ ನಿವೇತಾ 219.2 ಅಂಕಗಳೊಂದಿಗೆ ಕಂಚು ಜಯಿಸಿದರು.
ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಹೀನಾ ಮುಂಬರುವ ಐ.ಎಸ್.ಎಸ್.ಎಫ್. ಕಪ್ ನಲ್ಲೂ ಉತ್ತಮ ಸಾಧನೆಯೊಂದಿಗೆ ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ.