ಖೇಲ್ ರತ್ನಕ್ಕೆ ಶೂಟಿಂಗ್ ಫೆಡರೇಶನ್‌ನಿಂದ ಹೀನಾ, ಅಂಕುರ್ ಹೆಸರು ಶಿಫಾರಸು

ನವದೆಹಲಿ, ಏಪ್ರಿಲ್ 30: ಖ್ಯಾತ ಶೂಟರ್‌ಗಳಾದ ಹೀನಾ ಸಿಧು ಮತ್ತು ಅಂಕುರ್ ಮಿತ್ತಲ್ ಹೆಸರುಗಳನ್ನು ಶೂಟಿಂಗ್ ಫೆಡರೇಶನ್ ಸೋಮವಾರ (ಏಪ್ರಿಲ್ 29) ಭಾರತ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು ಮಾಡಿದೆ.
ಪಿಸ್ತೂಲ್ ವಿಭಾಗದ ಸಾಧಕಿ ಹೀನಾ ಮತ್ತು ಟ್ರ್ಯಾಪ್ ಶೂಟರ್ ಅಂಕುರ್ ಹೆಸರುಗಳು ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸಾಗಿದ್ದರೆ, ಅಂಜುಮ್ ಮೌಡ್ಗಿಲ್ (ರೈಫಲ್), ಶಹಝರ್ ರಿಝ್ವಿ (ಪಿಸ್ತೂಲ್), ಓಂ ಪ್ರಕಾಶ್ ಮಿಥರ್ವಾಲ್ (ಪಿಸ್ತೂಲ್) ಹೆಸರುಗಳು ಅರ್ಜುನ ಪ್ರಶಸ್ತಿಗೆ ಶಿಫಾರಸಾಗಿವೆ.
ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್‌ಎಸ್‌ಎಫ್) ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ (ಪಿಸ್ತೂಲ್) ಶೂಟರ್ ಹೀನಾ ಸಿಧು. 29ರ ಹರೆಯದ ಸಿಧು ವಿಶ್ವಕಪ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಚಾಂಪಿಯನ್‌ಷಿಪ್ ಹೀಗೆ ಹಲವಾರು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಾಕೆ.
Story first published: Tuesday, April 30, 2019, 0:30 [IST]
Other articles published on Apr 30, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications