ಭರವಸೆಯ ಓಟಗಾರ್ತಿ ಹಿಮಾ ದಾಸ್ ಹೆಸರು ಖೇಲ್ ರತ್ನಕ್ಕೆ ಶಿಫಾರಸು

ನವದೆಹಲಿ, ಜೂನ್ 16: ಭಾರತದ ಸ್ಪ್ರಿಂಟರ್ ಹಿಮಾ ದಾಸ್ ಹೆಸರು ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸಾಗಿದೆ. ಭರವಸೆಯ ಓಟಗಾರ್ತಿ ಹಿಮಾ ಹೆಸರನ್ನು ಅಸ್ಸಾಂ ಸರ್ಕಾರ 'ಖೇಲ್ ರತ್ನ'ಕ್ಕೆ ನಾಮ ನಿರ್ದೇಶಿಸಿದೆ.
ಅಸ್ಸಾಂನ ಧಿಂಗ ಗ್ರಾಮದಲ್ಲಿರುವ 20ರ ಹರೆಯದ ಹಿಮಾ ದಾಸ್, ಖೇಲ್ ರತ್ನಕ್ಕೆ ಶಿಫಾರಸಾದ ಅತೀ ಕಿರಿಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ. ಅಸ್ಸಾ ಕ್ರೀಡಾ ಕಾರ್ಯದರ್ಶಿ ದುಲಾಲ್ ಚಂದ್ರ ದಾಸ್ ಅವರು ಜೂನ್ 5ರಂದು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಪತ್ರ ರವಾನಿಸಿದ್ದಾರೆ.
2018ರಲ್ಲಿ ಫಿನ್‌ಲ್ಯಾಂಡ್‌ನ ಟ್ಯಾಂಪೆರೆಯಲ್ಲಿ ನಡೆದಿದ್ದ ಯು20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಟ್ರ್ಯಾಕ್ ಅಥ್ಲೀಟ್ ಗೌರವಕ್ಕೆ ಹಿಮಾ ಪಾತ್ರರಾಗಿದ್ದರು. ಆ ಕ್ರೀಡಾಕೂಟದಲ್ಲಿ ಹಿಮಾ, 400 ಮೀ. ಓಟದಲ್ಲಿ ಬೆಳ್ಳಿ, 4X400 ಮೀ. ಮಿಕ್ಸ್ಡ್ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ಅಲ್ಲದೆ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4X400 ಮೀ. ರಿಲೇಯಲ್ಲಿ ಬಂಗಾರ ಜಯಿಸಿದ್ದರು.
ಹಿಮಾ ದಾಸ್ ಅಲ್ಲದೆ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ, ರಸ್ಲರ್ ವಿನೇಶ್ ಫೋಗಟ್, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಕ್ರಿಕೆಟಿಗ ರೋಹಿತ್ ಶರ್ಮಾ ಹೆಸರುಗಳು ಈ ವರ್ಷ ಖೇಲ್ ರತ್ನಕ್ಕೆ ಶಿಫಾರಸಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications