ಅಥ್ಲೆಟಿಕ್ಸ್: ಭಾರತಕ್ಕೆ 5ನೇ ಬಂಗಾರ ಗೆದ್ದ ಚಿನ್ನದ ಹುಡುಗಿ ಹಿಮಾ ದಾಸ್

ಪ್ರೇಗ್, ಜುಲೈ 20: ಝೆಕ್ ಗಣರಾಜ್ಯದಲ್ಲಿ ಶನಿವಾರ (ಜುಲೈ 20) ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಹುಡುಗಿ ಹಿಮಾ ದಾಸ್ ಮತ್ತೊಂದು ಬಂಗಾರ ಗೆದ್ದಿದ್ದಾರೆ. 400 ಮೀಟರ್ ಓಟದಲ್ಲಿ ಹಿಮಾಗೆ ಚಿನ್ನ ಲಭಿಸಿದೆ. ಇದು ಈ ತಿಂಗಳಿನಲ್ಲಿ ದಾಸ್‌ಗೆ ಲಭಿಸುತ್ತಿರುವ 5ನೇ ಚಿನ್ನದ ಪದಕ.
ಮಹಿಳಾ ವಿಭಾಗದ 400 ಮೀ. ಓಟವನ್ನು 52.09 ಸೆಕೆಂಡ್‌ಗಳಲ್ಲಿ ಮುಗಿಸಿದ ಹಿಮಾ, ಈ ಸೀಸನ್ ಉತ್ತಮ ಕಾಲಾವಧಿ ದಾಖಲಿಸಿದರು. ಆದರೆ ಇದು ಹಿಮಾಳ ವೈಯಕ್ತಿಕ ದಾಖಲೆ 50.79 ಸೆಕೆಂಡ್‌ಗಿಂತ ಕೊಂಚ ಹೆಚ್ಚೆನಿಸಿತು. ಆದರೆ ಇದೇ ರುತುವಿನಲ್ಲಿ ದಾಸ್ ಓಡಿದ್ದ 52.88 ಸೆಕೆಂಡ್ ದಾಖಲೆಗಿಂತ ಸುಧಾರಿಸಿದೆ.
ಈ ಹಿಂದಿನ 4 ಬಂಗಾರದ ಪದಕಗಳು 200 ಮೀಟರ್ ಓಟದಲ್ಲಿ ಲಭಿಸಿದ್ದು. ಮತ್ತೆ ತನ್ನ ನೆಚ್ಚಿನ 400 ಮೀಟರ್ ಓಟದ ಸ್ಪರ್ಧೆಗೆ ಬಂದ ಹಿಮಾ ಅಲ್ಲೂ ಚಿನ್ನ ಬಾಚಿಕೊಂಡಿದ್ದಾರೆ. ಕ್ಲಾಡೋ ಅಥ್ಲೆಟಿಕ್ಸ್ ಮೀಟ್, ಪೊಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್, ಕುಂಟೋ ಅಥ್ಲೆಟಿಕ್ಸ್ ಮೀಟ್, ಟ್ಯಾಬರ್ ಅಥ್ಲೆಟಿಕ್ಸ್ ಮೀಟ್ ಹೀಗೆ ಒಟ್ಟು 5 ಬಂಗಾರದ ಪದಕಗಳು ಹಿಮಾಗೆ ಲಭಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications