ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಹಿಮಾದಾಸ್ ಮತ್ತೆ ಗಾಯದ ಸಮಸ್ಯೆ ತುತ್ತಾಗಿದ್ದಾರೆ. ಹೀಗಾಗಿ ಈ ವರ್ಷದ ಕೊನೆಯಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಿಂದ ಅವರು ಹೊರಗುಳಿಯಲಿದ್ದಾರೆ ಎಂದು ಭಾರತದ ಅಥ್ಲೆಟಿಕ್ಸ್ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಬುಧವಾರ ಮಾಹಿತಿ ನೀಡಿದ್ದಾರೆ. 23 ವರ್ಷದ ಹಿಮಾ ಅವರು ಏಪ್ರಿಲ್‌ನಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಇನ್ನೂ ಚೇತರಿಕೆ ಕಾಣದ ಅವರಿಗೆ ಇನ್ನೂ ಎರಡು ತಿಂಗಳ ಕಾಲ ವಿಶ್ರಾಂತಿಯ ಅಗತ್ಯವಿದೆ.
ಹಿಮಾ ದಾಸ್ ಅವರಿಗೆ ಮಂಡಿರಜ್ಜು ಗಾಯದ ಹೊರತಾಗಿ ಬೆನ್ನುನೋವಿನ ಸಮಸ್ಯೆ ಕೂಡ ಇದೆ ಎಂದು ಕೋಚ್ ರಾಧಾಕೃಷ್ಣನ್ ನಾಯರ್ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಆಯೋಜನೆಯಾಗಬೇಕಿದ್ದ ಏಷ್ಯನ್ ಮುಂದೂಡಿಕೆಯಾಗಿ ಕಾರಣ ಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಹ್ಯಾಂಗ್‌ಝೌನಲ್ಲಿ ನಡೆಯಲಿದೆ.

2018 ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಬೆಳ್ಳಿ ಗೆಲ್ಲುವ ಮೂಲಕ ಎಲ್ಲರ ಚಿತ್ತ ತಮ್ಮತ್ತ ಸೆಳೆದಿದ್ದರು. ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ 4x400 ಮಿಶ್ರ ರಿಲೇ ತಂಡದ ಭಾಗ ಕೂಡ ಆಗಿದ್ದರು ಹಿಮಾ ದಾಸ್. ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ 200 ಮೀಟರ್ ಸ್ಪರ್ಧೆಯಲ್ಲಿ ಫೈನಲ್ ಹಂತಕ್ಕೇರುವ ಅವಕಾಶವನ್ನು ಕೂದಲೆಳೆಯ ಅಂತರದಿಂದ ಕಳೆದುಕೊಂಡಿದ್ದರು.
''ಬೆಂಗಳೂರಿನಲ್ಲಿ (ಏಪ್ರಿಲ್ 15 ರಂದು) ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ IV ಗೆ ಒಂದು ದಿನ ಮೊದಲು ಹಿಮಾದಾಸ್ ಗಾಯಗೊಂಡಿರುವುದು ದುರದೃಷ್ಟಕರ. ಅಲ್ಲದೆ ಅಕೆಗೆ ಬೆನ್ನಿನ ಸಮಸ್ಯೆ ಕೂಡ ಕಾಡುತ್ತಿದೆ. ಹೀಗಾಗಿ ಈಗ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು ಚಿಕಿತ್ಸೆಗಾಗಿ ನೀಡಲಾಗುತ್ತಿದೆ. ಎಎಫ್‌ಐ ನೀತಿಯ ಪ್ರಕಾರ ಆಕೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ನಂಬುತ್ತೇನೆ,'' ಎಂದು ನಾಯರ್ ಹೇಳಿಕೆಯನ್ನು ಪಿಟಿಐ ಸುದ್ದಿಸಂಸ್ಥೆ ಉಲ್ಲೇಖಿಸಿ ವರದಿ ಮಾಡಿದೆ.