Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೊಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್: ಹಿಮಾ ದಾಸ್‌ಗೆ ಬಂಗಾರದ ಪದಕ

Hima Das wins 200m gold at Poznan Athletics Grand Prix

ವಾರ್ಸಾ, ಜುಲೈ 4: ಭಾರತದ ಸ್ಟಾರ್ ಸ್ಟ್ರಿಂಟರ್ ಹಿಮಾ ದಾಸ್ ಅವರು ಪೋಲೆಂಡ್ ನಲ್ಲಿ ನಡೆದ ಪೊಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಟದ 200 ಮೀ. ಓಟದಲ್ಲಿ ಬಂಗಾರ ಗೆದ್ದಿದ್ದಾರೆ. ಶಾಟ್ ಪುಟ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅಥ್ಲೀಟ್ ತೇಜೀಂದರ್ ಪಾಲ್ ಸಿಂಗ್‌ ತೂರ್ ಕಂಚಿನ ಪದಕ ಜಯಿಸಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

400 ಮೀಟರ್ ಓಟದಲ್ಲಿ ವಿಶ್ವ ಜೂನಿಯರ್ ಚಾಂಪಿಯನ್ ಮತ್ತು ರಾಷ್ಟ್ರೀಯ ದಾಖಲೆ ಹೊಂದಿರುವ ಹಿಮಾ ದಾಸ್, ಕಳೆದ ಕೆಲ ತಿಂಗಳಿನಿಂದ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ದಾಸ್, 23.65 ಸೆಕೆಂಡ್‌ಗಳಲ್ಲಿ 200 ಮೀ. ಗುರಿ ತಲುಪಿದರು.

ಈ ವರ್ಷ ಹಿಮಾ ಸ್ಪರ್ಧಿಸಿದ ಮೊದಲ 200 ಮೀ. ರೇಸ್ ಇದು. ಈ ಓಟವನ್ನು 23.10 ಸೆಕೆಂಡ್‌ಗಳಲ್ಲಿ ಮುಗಿಸಿದ ದಾಖಲೆ ದಾಸ್ ಹೆಸರಿನಲ್ಲಿದೆ. ಇದೇ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಭಾರತದ ಮತ್ತೊಬ್ಬ ಅಥ್ಲೀಟ್ ವಿಕೆ ವಿಸ್ಮಯ 23.75 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿದರು.

ಏಷ್ಯನ್ ಚಾಂಪಿಯನ್ ತೂರ್, ಪುರುಷರ ವಿಭಾಗದ ಶಾಟ್ ಪುಟ್‌ನಲ್ಲಿ 19.62 ಮೀಟರ್ ಸಾಧನೆಯೊಂದಿಗೆ ಕಂಚಿಗೆ ಕೊರಳೊಡ್ಡಿದರು. ಪುರುಷರ 400 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಮುಹಮ್ಮದ್ ಅನಾಸ್, 200 ಮೀ.ನಲ್ಲಿ ತೃತೀಯ (20.75 ಸೆ.) ಪಡೆದರೆ, ಪುರುಷರ 400 ಮೀ. ಸ್ಪರ್ಧೆಯ ಕಂಚು (47.25 ಸೆ.) ಕೆಎಸ್ ಜೀವನ್ ಪಾಲಾಯಿತು.

Story first published: Thursday, July 4, 2019, 18:24 [IST]
Other articles published on Jul 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+