Archery World Cup: 14 ವರ್ಷಗಳ ನಂತರ ಭಾರತ ರಿಕರ್ವ್ ತಂಡಕ್ಕೆ ಐತಿಹಾಸಿಕ ಗೆಲುವು
ಭಾನುವಾರ ಏಪ್ರಿಲ್ 28, ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಭಾರತ ಐತಿಹಾಸಕ ಗೆಲುವು ಸಾಧಿಸಿದೆ.
ಆರ್ಚರಿ ವಿಶ್ವಕಪ್‌ನಲ್ಲಿ 14 ವರ್ಷಗಳ ನಂತರ ಹಾಲಿ ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಸೋಲಿಸುವ ಮೂಲಕ ಭಾರತ ಪುರುಷರ ರಿಕರ್ವ್ ತಂಡವು ಸ್ವರ್ಣದ ಪದಕಕ್ಕೆ ಮುತ್ತಿಕ್ಕಿದೆ.

ಧೀರಜ್ ಬೊಮ್ಮದೇವರ, ತರುಣದೀಪ್ ರೈ ಮತ್ತು ಪ್ರವೀಣ್ ಜಾಧವ್ ಅವರನ್ನೊಳಗೊಂಡ ಭಾರತ ಪುರುಷರ ರಿಕರ್ವ್ ತಂಡವು ದಕ್ಷಿಣ ಕೊರಿಯಾದ ಕಿಮ್ ವೂಜಿನ್, ಲೀ ವೂ ಸಿಯೋಕ್ ಮತ್ತು ಕಿಮ್ ಜೆ ಡಿಯೋಕ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಆಘಾತ ನೀಡಿದೆ. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಭಾರತ ಪುರುಷರ ರಿಕರ್ವ್ ತಂಡದ ನಿರೀಕ್ಷೆಯನ್ನು ಹೆಚ್ಚಿಸಿದೆ.
ಧೀರಜ್, ತರುಣ್‌ದೀಪ್ ಮತ್ತು ಪ್ರವೀಣ್ ಅವರು ದಕ್ಷಿಣ ಕೊರಿಯ ಎದುರು ಒಂದು ಸೆಟ್ ಅನ್ನು ಬಿಟ್ಟು ಕೊಡದೆ ಪ್ರಬಲ ಪೈಪೋಟಿ ನೀಡಿ 5-1 (57-57, 57-55, 55-53) ಅಂತರದಿಂದ ಜಯಗಳಿಸಿದರು.
ಇದಕ್ಕೂ ಮೊದಲು ಗುರುವಾರ ಏಪ್ರಿಲ್ 25, ಭಾರತ ತಂಡವು 5-1 ಅಂತರದಿಂದ ಇಟಲಿಯನ್ನು ಸೋಲಿಸಿ ಆರ್ಚರಿ ವಿಶ್ವಕಪ್ ಹಂತ-1ರ ಫೈನಲ್‌ಗೆ ಪ್ರವೇಶಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications