ವಿಶ್ವಕಪ್ ಜಿಮ್ನಾಸ್ಟಿಕ್ : ಇತಿಹಾಸ ಸೃಷ್ಟಿಸಿದ ಅರುಣಾ ರೆಡ್ಡಿ!

ಹೈದರಾಬಾದ್, ಫೆಬ್ರವರಿ 25: ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಜಿಮ್ನಾಸ್ಟಿಕ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಭಾರತದ ಅರುಣಾ ಬುದ್ದಾ ರೆಡ್ಡಿ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ರಚಿಸಿದರು. ಈ ಮೂಲಕ ಇಂಥದ್ದೊಂದು ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟಿಕ್ ಪಟು ಎಂಬ ಕೀರ್ತಿಗೆ ಪಾತ್ರರಾದರು.
ಹಿಸೆನ್ಸ್ ಅರೆನಾದಲ್ಲಿ ನಡೆದ ಮಹಿಳೆಯರ ವಾಲ್ಟ್ ವಿಭಾಗದಲ್ಲಿ ಅರುಣಾ ರೆಡ್ಡಿ, 13.649 ಪಾಯಿಂಟ್ಸ್ ಕಲೆಹಾಕಿ ಮೂರನೇ ಸ್ಥಾನ ಗಳಿಸಿದರು. 13.800 ಅಂಕಗಳನ್ನು ಕಲೆ ಹಾಕಿದ ಸ್ಲೊವೇನಿಯದ ತಜಾಸ ಕೈಸೆಫ್ ಗೆ ಚಿನ್ನ, ಆಸ್ಟ್ರೇಲಿಯಾದ ಎಮಿಲಿ ವೈಟ್ ಹೆಡ್ 13.699 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು.
ಇದಕ್ಕೂ ಮುನ್ನ ಭಾರತದ ಜಿಮ್ನಾಸ್ಟ್ ಗಳ ಪೈಕಿ 2016ರ ರಿಯೋ ಒಲಿಂಪಿಕ್ಸ್‌ನ ವಾಲ್ಟ್ ವಿಭಾಗದಲ್ಲಿ ದೀಪಾ ಕರ್ಮಾಕರ್ ನಾಲ್ಕನೇ ಸ್ಥಾನ ಗಳಿಸಿದ್ದರು. 2014ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು. ಆದರೆ, ವಿಶ್ವ ಕಪ್ ಟೂರ್ನಿಯಲ್ಲಿ ದೀಪಾ ಸೇರಿದಂತೆ ಯಾರೊಬ್ಬರೂ ಪದಕದ ಸಾಧನೆ ಮಾಡಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications