ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ ಖೇಲ್ ರತ್ನ
ನವದೆಹಲಿ, ಆಗಸ್ಟ್ 17: ರಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಿರುವ ತ್ರಿಪುರಾದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ ಖೇಲ್ ರತ್ನ ಹಾಗೂ ದೀಪಾ ಅವರ ಕೋಚ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಬಂದಿದೆ. ಗುರುವಾರದಂದು ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.[ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲದಿದ್ದರೂ, ಭಾರತ ಗೆದ್ದ ದೀಪಾ!]
ಮೊಟ್ಟ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿದ್ದ ದೀಪಾ ಅವರು ಮೊದಲ ಪ್ರಯತ್ನದಲ್ಲೇ ಜಿಮ್ನಾಸ್ಟ್ ನ ಪ್ರುಡನೋವಾ ವಲ್ಟ್ ವಿಭಾಗದ ಫೈನಲ್ ಪ್ರವೇಶಿಸಿದ್ದರು. [ದೀಪಾ ಹಾಗೂ ಲಲಿತಾಗೆ ದೊಡ್ಡ ಸನ್ಮಾನ ಸಿಗಬೇಕು: ಸೆಹ್ವಾಗ್]

ಅಲ್ಲದೆ, ಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದುಕೊಂಡರು. ಈ ಸಾಧನೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್ ರತ್ನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಬಂದಿದೆ.[ಕ್ಷಮಿಸಿ, ಮುಂದಿನ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವೆ: ದೀಪಾ]
23 ವರ್ಷ ವಯಸ್ಸಿನ ದೀಪಾ ಅವರಿಗೆ 0.15 ಅಂಕಗಳಿಂದ ಕಂಚಿನ ಕೈತಪ್ಪಿ ಹೋಯಿತು. ಆದರೆ, ಕೋಟ್ಯಂತರ ಜನರ ಮನ ಗೆದ್ದರು. ಕಳೆದ ವರ್ಷ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿತ್ತು. ದೀಪಾ ಅವರಿಗೆ ಖೇಲ್ ರತ್ನ ಲಭಿಸಿದರೆ, ಈ ಗೌರವಕ್ಕೆ ಪಾತ್ರರಾದ ಮೊಟ್ಟ ಮೊದಲ ಜಿಮ್ನಾಸ್ಟ್ ಎನಿಸಿಕೊಳ್ಳುತ್ತಾರೆ. (ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications