Paralympics 2024: ಅಂದು ಆತ್ಮಹತ್ಯೆಗೆ ಮುಂದಾಗಿದ್ದ ರಾಕೇಶ್ ಕುಮಾರ್ ಇಂದು ಪ್ಯಾರಾಲಿಂಪಿಕ್ಸ್ ಕಂಚಿನ ಪದಕ ವಿಜೇತ
ಭಾರತದ ಪ್ಯಾರಾ ಆರ್ಚರಿ ಅಥ್ಲೀಟ್‌ಗಳು ಪ್ಯಾರಿಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಸೋಮವಾರ ನಡೆದ ಮಿಶ್ರ ತಂಡ ಈವೆಂಟ್‌ನಲ್ಲಿ ಭಾರತದ ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಿದ್ದಾಜಿದ್ದಿನಿಂದ ಕೂಡಿದ್ದ ಕಂಚಿನ ಹೋರಾಟದ ಪಂದ್ಯದಲ್ಲಿ ಭಾರತದ ಜೋಡಿ ಅಮೋಘ ಪ್ರದರ್ಶನ ನೀಡಿತು.
ಸೋಮವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಶೀತಲ್ ದೇವಿ, ರಾಕೇಶ್ ಜೊತೆಗೂಡಿ 156-155 ರಿಂದ ಇಟಲಿಯ ಮ್ಯಾಟಿಯೊ ಬೊನಾಸಿನಾ ಮತ್ತು ಎಲಿಯೊನೊರಾ ಸರ್ಟಿ ಅವರನ್ನು ಸೋಲಿಸಿ, ಇತಿಹಾಸ ನಿರ್ಮಿಸಿದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಗೆದ್ದ ಎರಡನೇ ಪದಕ ಇದಾಗಿದೆ. ಇದಕ್ಕೂ ಮೊದಲು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹರ್ವಿಂದರ್ ಸಿಂಗ್ ಮಾತ್ರ ಈ ಸಾಧನೆ ಮಾಡಿದ್ದರು.

ಕಂಚು ಗೆದ್ದ ರಾಕೇಶ್ ಯಾರು?
ಪ್ಯಾರಿಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಅಥ್ಲೀಟ್‌ಗಳ ಬಗ್ಗೆ ಹುಡುಕಾಟ ನಡೆದಿದೆ. ಹಾಗಿದ್ದರೆ, ಶೀತಲ್ ದೇವಿ ಜೊತೆಗೆ ಕಾಣಿಸಿಕೊಂಡ ಅಥ್ಲೀಟ್ ರಾಕೇಶ್ ಕುಮಾರ್ ಯಾರು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರದ ಕತ್ರಾ ಜಿಲ್ಲೆಯ ನಿವಾಸಿ ರಾಕೇಶ್ ಕುಮಾರ್. ಇವರು ಕಂಪೌಂಡ್ ಓಪನ್ ಪ್ಯಾರಾ ಆರ್ಚರಿ ಅಥ್ಲೀಟ್. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಾಕೇಶ್, ತಂದೆ ಕಟ್ಟಿಗೆಯ ಕೆಲಸವನ್ನು ಮಾಡುತ್ತಿದ್ದರು. ರಾಕೇಶ್ ತಾಯಿ ಗೃಹಿಣಿ. 2010ರಲ್ಲಿ ನಡೆದ ಅಪಘಾತ ಒಂದರಲ್ಲಿ ರಾಕೇಶ್ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡವು. ನಂತರ ಇವರು ಗಾಲಿ ಕುರ್ಚಿಯನ್ನೇ ಆಸರೆಯಾಗಿಸಿಕೊಂಡರು.

ಆತ್ಮಹತ್ಯೆಯ ಮನಸ್ಸು ಮಾಡಿದ್ದರು..
ಅಪಘಾತದ ಬಳಿಕ ರಾಕೇಶ್ ಒತ್ತಡಕ್ಕೆ ಒಳಗಾದರು. ಜೀವನವನ್ನು ಸಾಗೀಸಲು ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಜೀವನ ಬೇಜಾರಿಗೆ ಅವರು ಆತ್ಮಹತ್ಯೆಗೆ ಸಹ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಆತ್ಮಹತ್ಯೆಯ ವಿಚಾರಗಳಿಂದ ಇವರಿಗೆ ದೂರ ಸರಿಯಲು ನೆರವಾಗಿದ್ದೇ, ಆರ್ಚರಿ.
ರಾಕೇಶ್ ಆರ್ಚರಿ ಕ್ರೀಡೆಯತ್ತ ಮನಸ್ಸು ಮಾಡುತ್ತಿದ್ದಂತೆ ಅವರ ಬದುಕು ಬದಲಾಯಿತು. ತಮ್ಮ ಚಿತ್ತವನ್ನು ಎಲ್ಲ ಅವರು ಬಿಲ್ಲುಗಾರಿಕೆಗೆ ಸಮರ್ಪಣೆ ಮಾಡಿದರು. ಹೀಗಾಗಿ ಇವರು ಒಂದು ದೇಶದ ಅಗ್ರ ಪ್ಯಾರಾ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಾರೆ.
ಶೂಟಿಂಗ್‌ನಲ್ಲೂ ರಾಕೇಶ್ ಕಮಾಲ್...
ರಾಕೇಶ್ ಅವರಲ್ಲಿನ ಕಲೆಯನ್ನು ಗುರುತಿಸುವ ಗುರವಾಗಿ ಕೋಚ್ ಕುಲದೀಪ್ ಕಾಣಿಸಿಕೊಂಡರು. ಇವರಿಗೆ ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ರಾಕೇಶ್ ಆರ್ಚರಿಯ ವಿದ್ಯೆಯನ್ನು ಕಲೆತರು. ಇದಾದ ಬಳಿಕ ರಾಕೇಶ್ ಹಿಂತಿರುಗಿ ನೋಡಿದ್ದೇ ಇಲ್ಲ. ಹಣಕಾಸಿನ ತೊಂದರೆಗಳು ಅವರನ್ನು ಬಹುವಾಗಿ ಕಾಡಿತು. ಆದರೆ ಸ್ಥಳೀಯರು ರಾಕೇಶ್‌ರನ್ನು ಬಿಟ್ಟು ಕೊಡಲಿಲ್ಲ. ಹೀಗಾಗಿಯೇ ಅವರು ಆರ್ಚರಿಯಲ್ಲಿ ಹೆಸರು ಮಾಡಲು ಸಾಧ್ಯವಾಯಿತು.
ರಾಕೇಶ್ ಆರ್ಚರಿ ಕ್ರೀಡೆಗೂ ಮುನ್ನ ಶೂಟಿಂಗ್‌ನಲ್ಲೂ ಕಮಾಲ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಶೂಟಿಂಗ್‌ನಲ್ಲಿ ಇವರು ಪದಕ ಗೆದ್ದಿದ್ದಾರೆ. 2023ರಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ರಾಕೇಶ್ ಸಿಂಗಲ್ಸ್ ಮತ್ತು ಮಿಶ್ರ ತಂಡದಲ್ಲಿ ಚಿನ್ನ ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications