Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶೂಟಿಂಗ್ ಚಾಂಪಿಯನ್ ಶಿಪ್: ಚಿನ್ನಕ್ಕೆ ಗುರಿಯಿಟ್ಟ ಹೃದಯ್, ಮಹಿಳಾ ತಂಡ

Hriday Hazarika Win Gold Medals At ISSF World Championships

ಚಾಂಗ್ಒನ್, ಸೆಪ್ಟೆಂಬರ್ 7: ದಕ್ಷಿಣ ಕೊರಿಯಾದ ಚಾಂಗ್ಒನ್ ನಲ್ಲಿ ನಡೆದ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಹೃದಯ್ ಹಜಾರಿಕ ಅವರು ಚಿನ್ನ ಜಯಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ 10 ಮೀ. ಏರ್ ರೈಫಲ್ ನಲ್ಲಿ ಹೃದಯ್ ಬಂಗಾರ ತನ್ನದಾಗಿಸಿಕೊಂಡರು. ಹಜಾರಿಕ ಅವರು 627 ಅಂಕಗಳೊಂದಿಗೆ ಅಂತಿಮ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದರು. ಅಂತಿಮ ಸುತ್ತಿನಲ್ಲಿ ಹೃದಯ್ ಇನ್ನೂ ಉತ್ತಮ ಪ್ರದರ್ಶನ ತೋರುವುದರೊಂದಿಗೆ ಚಿನ್ನ ಗೆದ್ದರು.

ಎಳವೇನಿಲ್ ವಲಾರಿವನ್ (631), ಶ್ರೇಯಾ ಅಗರ್ವಾಲ್ (628.5) ಮತ್ತು ಮಾನಿನಿ ಕೌಶಿಕ್ (621.2) ಅವರನ್ನೊಳಗೊಂಡ ಮಹಿಳಾ ತಂಡಕ್ಕೂ ಚಿನ್ನದ ಪದಕ ಲಭಿಸಿದೆ. ಮಹಿಳಾ ವಿಭಾಗದ 10 ಮೀ. ಏರ್ ರೈಫಲ್ ನಲ್ಲಿ ಸ್ಪರ್ಧಿಸಿ ಒಟ್ಟು 1880.7 ಅಂಕ ಕಲೆ ಹಾಕಿದ ತಂಡಕ್ಕೆ ಬಂಗಾರ ಒಲಿಯಿತು.

ಹಜಾರಿಕ, ದಿವ್ಯಾಂಶ್ ಪಾನ್ವಾರ್, ಅರ್ಜುನ ಬಬುತ ಅವರನ್ನೊಳಗೊಂಡ ಪುರುಷರ ತಂಡ ಒಟ್ಟು 1872.3 ಅಂಕ ಕಲೆ ಹಾಕುವುದರೊಂದಿಗೆ ನಾಲ್ಕನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದೆ. ಇಂಡೋನೇಷ್ಯಾ ಏಷ್ಯನ್ ಗೇಮ್ಸ್ 50 ಮೀ. ರೈಫಲ್ ತ್ರಿ ಪೊಸಿಷನ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ಸಂಜೀವ್ ರಜಪೂತ್ ಅವರು 58ನೇ ಸ್ಥಾನ ಪಡೆಯುವುದರೊಂದಿಗೆ ನಿರಾಸೆ ಮೂಡಿಸಿದರು.

Story first published: Friday, September 7, 2018, 19:27 [IST]
Other articles published on Sep 7, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+