ಸ್ಕೇಟಿಂಗ್‌ನಲ್ಲಿ ಗಿನ್ನಿಸ್ ದಾಖಲೆ ಬರೆದ ಹುಬ್ಬಳ್ಳಿ ಬಾಲಕಿ ಓಜಲ್ ಎಸ್ ನಲವಡಿ

ಹುಬ್ಬಳ್ಳಿ, ನವೆಂಬರ್ 15: ಮಕ್ಕಳ ದಿನಾಚರಣೆ ಅಂಗವಾಗಿ, ಹುಬ್ಬಳ್ಳಿಯ 12 ವರ್ಷದ ಓಜಲ್ ಎಸ್. ನಲವಡಿ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್ ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ, ಗಿನ್ನಿಸ್ ದಾಖಲೆ ಬರೆದ್ದಾರೆ. 7ನೇ ತರಗತಿ ಕಲಿಯುತ್ತಿರುವ ಓಜಲ್, ನಗರದ ಜೆಎಸ್‌ಎಸ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿ.
ಹುಬ್ಬಳ್ಳಿಯ ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಓಜಲ್ ಅವರಿಂದಾದ ಈ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿ ವಿಕ್ಟರ್ ಫೆನೆಸ್ ದಾಖಲಿಸಿಕೊಂಡರು. ಬೆಳ್ಳಂಬೆಳಗ್ಗೆ ನಡೆದ ಈ ಸ್ಕೇಟಿಂಗ್ ದಾಖಲೆಗೆ ನೂರಾರು ಮಂದಿ ಸಾಕ್ಷಿಯಾದರು.

ವಿಆರ್ ಎಲ್ ಕಂಪನಿಯ ಸಿಎಫ್ಒ ಆಗಿರುವ ಸುನೀಲ ಎಸ್. ನಲವಡಿ ಹಾಗೂ ದೀಪಾ ಎಸ್. ನಲವಡಿ ಅವರ ಪುತ್ರಿಯಾದ ಓಜಲ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ, ಇದುವರೆಗೆ ಒಟ್ಟು 13 ದಾಖಲೆಗಳನ್ನು ನಿರ್ಮಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟ್ ಮಾಡುವ ಓಜಲ್ ಈ ಸಾಹಸಕ್ಕೆ ಅಕ್ಷಯ ಸೂರ್ಯವಂಶಿ ಎಂಬುವವರು ತರಬೇತಿ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications