ಮಲ್ಯ ಒಡೆತನದ 'ಫೋರ್ಸ್ ಇಂಡಿಯಾ ಎಫ್-1' ಕೋರ್ಟ್ ಆಡಳಿತಕ್ಕೆ

ಲಂಡನ್, ಜುಲೈ 28: ವಿಚಾರಣೆಯ ಬಳಿಕ ಲಂಡನ್ ನಲ್ಲಿರುವ ಹೈಕೋರ್ಟ್, ಫೋರ್ಸ್ ಇಂಡಿಯಾ ಫಾರ್ಮುಲ ಒನ್ ಗೆ ನಿರ್ವಹಣಾಧಿಕಾರಿಯನ್ನು ನೇಮಿಸಿರುವುದಾಗಿ ಫೋರ್ಸ್ ಇಂಡಿಯಾ ಫಾರ್ಮುಲ ಒನ್ ನ ಉಪ ಮುಖ್ಯಾಧಿಕಾರಿ ಬಾಬ್ ಫರ್ನ್ಲಿ ಖಾತರಿಪಡಿಸಿದ್ದಾರೆ. ಫೋರ್ಸ್ ಇಂಡಿಯಾವು ಕೋರ್ಟ್ ಆಡಳಿತಕ್ಕೆ ಒಳಪಡುತ್ತಿರುವುದಕ್ಕೆ ಕಾರಣ ಆರ್ಥಿಕ ಸಮಸ್ಯೆ ಎಂದು ಬಾಬ್ ತಿಳಿಸಿದ್ದಾರೆ.
ಫೋರ್ಸ್ ಇಂಡಿಯಾದ ಮುಂದಿನ ಭವಿಷ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆದರೆ ಆರ್ಥಿಕ ಸಮಸ್ಯೆಗೆ ಸಿಲುಕಿದ್ದ ಫೋರ್ಸ್ ಇಂಡಿಯಾ ಎಫ್-1ಗೆ ಬಾಕಿ ಹಣ ಪಾವತಿಸಲು ಶುಕ್ರವಾರ ಅಂತಿಮ ಗಡುವು ನೀಡಲಾಗಿತ್ತು. ಹಣಪಾವತಿಸಲು ಸಾಧ್ಯವಾಗದ ವಿಜಯ ಮಲ್ಯ ಒಡೆತನದ ಫೋರ್ಸ್ ಇಂಡಿಯಾ ಕೋರ್ಟ್ ಆಡಳಿತಕ್ಕೆ ಒಳಪಟ್ಟಿದೆ.

ಈ ಬಗ್ಗೆ ಮೊದಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಫೋರ್ಸ್ ಇಂಡಿಯಾ ಎಫ್-1 ತಂಡದ ಮುಖ್ಯ ಕಾರ್ಯ ನಿರ್ವಾಹಕ ಓಟ್ಮಾರ್ ಸ್ಜಫ್ನರ್, 'ಆರ್ಧಿಕ ಬೆಂಬಲ ದೊರೆಯಬೇಕಾದರೆ ತಂಡ ಯಾವುದಾರರೊಂದು ರೀತಿಯ ಆಡಳಿತಕ್ಕೆ ಒಳಪಡುವ ಅಗತ್ಯವಿದೆ' ಎಂದಿದ್ದರು.
ಸದ್ಯ ಫೋರ್ಸ್ ಇಂಡಿಯಾವು ಹಂಗೇರಿಯಾದ ಬುಡಾಪೆಸ್ಟ್ ನಲ್ಲಿದ್ದು, ಆಗಸ್ಟ್ ತಿಂಗಳ ಬಿಡುವಿಗೂ ಮುನ್ನ ಜುಲೈ 29ರ ಭಾನುವಾರ ನಡೆಯಲಿರುವ ಈ ತಿಂಗಳ ಕೊನೆಯ ರೇಸ್, ಹಂಗೇರಿಯನ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಪಾಲ್ಗೊಳ್ಳಲು ಬೇಕಾದ ತಯಾರಿ ನಡೆಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications