ಮತ್ತೆ ವೃತ್ತಿಜೀವನಕ್ಕೆ ಮರಳಲು ಸಾಧ್ಯವಿಲ್ಲ: ಉಸೇನ್ ಬೋಲ್ಟ್
ಲಂಡನ್, ಆಗಸ್ಟ್ 14: ಜಮೈಕಾದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರು ತಮ್ಮ ನಿವೃತ್ತಿಯ ನಂತರ ಪುನಃ ತಮ್ಮ ವೃತ್ತಿಜೀವನಕ್ಕೆ ಕಾಲಿಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಉಸೇನ್ ಬೋಲ್ಟ್, ಈಗಾಗಲೇ ಇದೇ ಕ್ರೀಡಾಕೂಟ ತಮ್ಮ ವೃತ್ತಿಜೀವನದ ಕೊನೆಯ ಕ್ರೀಡಾಕೂಟವೆಂದು ಘೋಷಿಸಿದ್ದಾರೆ.

ಭಾನುವಾರ ಪತ್ರಕರ್ತರೊಂದಿಗೆ ಮುಖಾಮುಖಿಯಾದ ಅವರಿಗೆ, ನಿವೃತ್ತಿಯ ನಂತರ ಮನಸ್ಸು ಬದಲಿಗೆ ಮರಳಿ ವೃತ್ತಿಜೀವನಕ್ಕೆ ಕಾಲಿಡುವಿರಾ ಎಂಬ ಪ್ರಶ್ನೆ ಎದುರಾಯಿತು.
ಇದಕ್ಕೆ ಉತ್ತರಿಸಿದ ಅವರು, ''ನಾನು ಹಲವಾರು ಮಂದಿ ಅಥ್ಲೀಟ್ ಗಳು ನಿವೃತ್ತಿಯ ನಂತರ ವೃತ್ತಿಜೀವನಕ್ಕೆ ಮರಳಿದ್ದನ್ನು ನೋಡಿದ್ದೇನೆ. ಹಾಗೆ ಮರಳಿದವರಲ್ಲಿ ಬಹುತೇಕರು ತಮ್ಮ ಗತ ಸಾಧನೆಯನ್ನು ಪುನರಾವರ್ತಿಸುವಲ್ಲಿ ವಿಫಲರಾಗಿದ್ದರೆ. ಇನ್ನೂ ಕೆಲವರು ಏನನ್ನೂ ಸಾಧಿಸದೇ ಅಪಮಾನಗೊಂಡಿದ್ದಾರೆ. ನಾನು ಅಂಥವರ ಸಾಲಿನಲ್ಲ ನಿಲ್ಲಲು ಬಯಸುವುದಿಲ್ಲ'' ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
Story first published: Wednesday, January 3, 2018, 10:16 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications