For Quick Alerts
ALLOW NOTIFICATIONS  
For Daily Alerts

ವಿಶ್ವಕಪ್ ಇತಿಹಾಸದಲ್ಲಿ ದಾಖಲೆ ಬರೆದ 2023ರ ಭಾರತದ ಆವೃತ್ತಿ; ಅತಿ ಹೆಚ್ಚು ಪ್ರೇಕ್ಷಕರಿಂದ ವೀಕ್ಷಣೆ

ಭಾರತದಲ್ಲಿ ಮುಕ್ತಾಯಗೊಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯು ಇತಿಹಾಸವನ್ನು ಬರೆದಿದೆ. ಏಕೆಂದರೆ ಇದು 1.25 ಮಿಲಿಯನ್‌ಗಿಂತಲೂ ಅಧಿಕ ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸುವ ಮೂಲಕ ಅತಿ ಹೆಚ್ಚು ಜನರು ಭಾಗವಹಿಸಿದ ಕ್ರಿಕೆಟ್ ಪಂದ್ಯಾವಳಿಯಾಗಿದೆ.

2023ರ ಆವೃತ್ತಿಯು 2015ರ ಪುರುಷರ ಏಕದಿನ ವಿಶ್ವಕಪ್‌ನ ಹಾಜರಾತಿ ದಾಖಲೆಯನ್ನು ಮೀರಿಸಿದೆ. ಏಕೆಂದರೆ ಭಾರತವು ದೇಶದಲ್ಲಿ ಕ್ರಿಕೆಟ್ ಬಗ್ಗೆ ಉತ್ಸಾಹಭರಿತ ಅಭಿಮಾನ ಪ್ರದರ್ಶಿಸಿದೆ.

ICC World Cup 2023: Record-Breaking Viewership of Indias 2023 World Cup Edition

ಆತಿಥೇಯ ಭಾರತ ಮತ್ತು ನೂತನ ಚಾಂಪಿಯನ್ ಆಸ್ಟ್ರೇಲಿಯಾ ನಡುವೆ ನಡೆದ ಹೈ-ವೋಲ್ಟೇಜ್ ಫೈನಲ್‌ಗಾಗಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1 ಲಕ್ಷ ಪ್ರೇಕ್ಷಕರ ಅಧಿಕೃತ ಹಾಜರಾತಿ ಇತ್ತು. 2023ರ ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ, ಭಾರತದ ಪ್ರಮುಖ ಹತ್ತು ಮೈದಾನಗಳು ನಡೆದ ಪಂದ್ಯಗಳಿಗೆ ಕಿಕ್ಕಿರಿದ ಪ್ರೇಕ್ಷಕರಿಗೆ ಸಾಕ್ಷಿಯಾಯಿತು.

ಈ ಆವೃತ್ತಿಯ ವಿಶ್ವಕಪ್ ಪಂದ್ಯಾವಳಿಯ ಪ್ರಾರಂಭದಲ್ಲಿ ಕೆಲವು ಖಾಲಿ ಸ್ಟ್ಯಾಂಡ್‌ಗಳನ್ನು ಪ್ರಶ್ನಿಸಿದ ಟೀಕಾಕಾರರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮುಚ್ಚಿದ್ದರಿಂದ ಭಾರತೇತರ ಪಂದ್ಯಗಳಿಗೂ ಪ್ರೇಕ್ಷಕರು ಹರಿದುಬಂದಿದ್ದು ಆಕರ್ಷಕವಾಗಿತ್ತು.

ಒಟ್ಟು 1,250,307 ಪ್ರೇಕ್ಷಕರು 2023ರ ವಿಶ್ವಕಪ್ ಪಂದ್ಯಗಳನ್ನು ಭಾರತದ 10 ಸ್ಥಳಗಳಲ್ಲಿ ನೇರ ಮೈದಾನಗಳ ಸ್ಟ್ಯಾಂಡ್‌ಗಳಿಂದ ವೀಕ್ಷಿಸಿದ್ದಾರೆ.

ICC World Cup 2023: Record-Breaking Viewership of Indias 2023 World Cup Edition

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆದ ಪಂದ್ಯಾವಳಿಯು, 2019ರ ಫೈನಲ್‌ನ ಪುನರಾವರ್ತನೆಯಲ್ಲಿ ಇಂಗ್ಲೆಂಡ್ ನ್ಯೂಜಿಲೆಂಡ್ ತಂಡವನ್ನು ಎದುರಿಸಿದಾಗ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯವು ಅತಿ ಹೆಚ್ಚು ಹಾಜರಾತಿಯನ್ನು ದಾಖಲಿಸಿತು.

ಆನಂತರ ಅಕ್ಟೋಬರ್ 14 ರಂದು ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪಂದ್ಯವನ್ನು ವೀಕ್ಷಿಸಲು ಅತಿ ಹೆಚ್ಚು ಪ್ರೇಕ್ಷಕರು ಭಾಗವಹಿಸಿದ್ದರು.

ಉದ್ಘಾಟನಾ ಪಂದ್ಯದಿಂದ ಫೈನಲ್ ಪಂದ್ಯದವರೆಗೆ ಒಟ್ಟಾರೆ 1.25 ಮಿಲಿಯನ್ ಅಭಿಮಾನಿಗಳ ಸಂಖ್ಯೆಯು ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ. ಇದು ಯಾವುದೇ ಐಸಿಸಿ ಪಂದ್ಯಾವಳಿಯ ಹಾಜರಾತಿ ಅಂಕಿಅಂಶಗಳನ್ನು ಮೀರಿಸಿದೆ.

2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಪಂದ್ಯಾವಳಿಯು 1,016,420 ಪ್ರೇಕ್ಷಕರಿಗೆ ಸಾಕ್ಷಿಯಾಗಿತ್ತು. ಆದರೆ, ನಂತರ 2019ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದ ವಿಶ್ವಕಪ್ 752,000 ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದು ಏಕದಿನ ವಿಶ್ವಕಪ್ ಟೂರ್ನಿಯನ್ನು ವೀಕ್ಷಿಸಿದರು.

ನಿರೀಕ್ಷೆಯಂತೆ, ಭಾರತದಲ್ಲಿ ನಡೆದ ವಿಶ್ವಕಪ್ ಹಲವಾರು ಪ್ರಸಾರ ಮತ್ತು ಡಿಜಿಟಲ್ ವೀಕ್ಷಕರ ದಾಖಲೆಗಳನ್ನು ಮುರಿಯಿತು. ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಸಮಯದಲ್ಲಿ ಅಧಿಕೃತ ಪ್ರಸಾರವಾದ ಸ್ಟಾರ್ ಸ್ಪೋರ್ಟ್ಸ್‌ನ ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ 4.3 ಕೋಟಿ ವೀಕ್ಷಕರ ಏಕಕಾಲದಲ್ಲಿ ಗರಿಷ್ಠ ಮಟ್ಟವನ್ನು ತಲುಪಿತು.

ಇದು ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಲ್ಲಿ ಮತ್ತಷ್ಟು ಉತ್ತಮಗೊಂಡು ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ವೇಳೆ 5.4 ಕೋಟಿ ಏಕಕಾಲದ ವೀಕ್ಷಕರ ದಾಖಲೆ ನಿರ್ಮಿಸಿದೆ.

ಅಹಮದಾಬಾದ್‌ನಲ್ಲಿ ಭಾನುವಾರ, ನವೆಂಬರ್ 19ರಂದು ನಡೆದ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು. ಆತಿಥೇಯ ತಂಡದ ಅಜೇಯ ಓಟಕ್ಕೆ ಆಸೀಸ್ ಬ್ರೇಕ್ ಹಾಕಿತು.

ನಿಖರ ಮತ್ತು ಶಿಸ್ತಿನ ಬೌಲಿಂಗ್ ಪ್ರದರ್ಶನ ಮತ್ತು ಟ್ರಾವಿಸ್ ಹೆಡ್ ಅವರ ಅಮೋಘ ಶತಕವು ಆಸ್ಟ್ರೇಲಿಯಾ ತಂಡ ಕ್ರಿಕೆಟ್‌ ಇತಿಹಾಸದಲ್ಲಿ 6ನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯಲು ನೆರವಾಯಿತು.

ಏಕದಿನ ವಿಶ್ವಕಪ್‌ನ ಮುಂದಿನ ಆವೃತ್ತಿಯು 2027ರಲ್ಲಿ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆ ಸಹಯೋಗದಲ್ಲಿ ನಡೆಯಲಿದ್ದರೆ, ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಮುಂದಿನ ವರ್ಷ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿವೆ.

Story first published: Tuesday, November 21, 2023, 16:29 [IST]
Other articles published on Nov 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+