ಸಿಎಲ್ಟಿ20: ಚೆನ್ನೈಗೆ ಚಳ್ಳೆಹಣ್ಣು ತಿನ್ನಿಸಿ ಗೆದ್ದ ಕೆಕೆಆರ್
ಹೈದರಾಬಾದ್, ಸೆ.18: ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಟೂರ್ನಿಯ ಮೊದಲ ಪಂದ್ಯದಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಮೋಘ ಜಯ ದಾಖಲಿಸುವ ಮೂಲಕ ಅಭಿಮಾನಿಗಳಿಗೆ ಕಿಚ್ಚು ಹಬ್ಬಿಸಿದ್ದಾರೆ. ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್‌ಗಳ ಗೆಲುವು ಸಾಧಿಸಿದೆ. ಕೊನೆಯ ಕ್ಷಣದವರೆಗೂ ರೋಚಕತೆ ಉಳಿಸಿಕೊಂಡ ಪಂದ್ಯದಲ್ಲಿ ಕೆಕೆಆರ್ ನ ಆಂಡ್ರೆ ರಸೆಲ್, ಟೆನ್ ಡೊಶಾಟ್ ಸಮಯೋಚಿತ ಆಟ ಧೋನಿ ಪಡೆಗೆ ಸೋಲಿನ ಕಹಿ ಉಣಿಸಿತು.
ಗೆಲುವಿಗೆ 158 ರನ್ ಮಾಡಬೇಕಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿ ಗೆಲುವಿನ ದಡ ತಲುಪಿತು. ಆದರೆ, 10 ಓವರೊಳಗೆ 51 ರನ್ ಸ್ಕೋರಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. [ಸಿಎಲ್ಟಿ20ವೇಳಾಪಟ್ಟಿ]
ಆದರೆ, ಆಂಡ್ರೆ ರಸೆಲ್ 25 ಎಸೆತಗಳಲ್ಲಿ 58 ರನ್ (4ಬೌ, 5ಸಿ) ಮತ್ತು ಟೆನ್ ಡೊಶಾಟ್ ಔಟಾಗದೆ 51 ರನ್(41ಎ, 3ಬೌ, 2ಸಿ) ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಚೆನ್ನೈ ಪರ ಆಶೀಶ್ ನೆಹ್ರಾ ಉತ್ತಮ ಬೌಲಿಂಗ್ (4-21) ನೀಡಿ ಕೆಕೆಆರ್ ಗೆ ಆರಂಭಿಕ ಹಿನ್ನಡೆ ನೀಡಿದರು. ರಸೆಲ್ ಮತ್ತು ಡೊಶಾಟ್ 6ನೆ ವಿಕೆಟ್‌ಗೆ 7.3 ಓವರ್‌ಗಳಲ್ಲಿ 10.66 ಸರಾಸರಿಯಂತೆ 80 ರನ್ ಸೇರಿಸಿ ಚೆನ್ನೈ ತಂಡದ ಗೆಲುವಿನ ಪ್ರಯತ್ನವನ್ನು ವಿಫಲಗೊಳಿಸಿದರು.

ಚೆನ್ನೈಗೆ ಧೋನಿ ಬ್ರಾವೊ ನೆರವು
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆಡುವ ಅವಕಾಶ ಪಡೆದ ಚೆನ್ನೈ ತಂಡ ಕೂಡಾ ಆರಂಭಿಕ ಆಘಾತ ಅನುಭವಿಸಿತು. ಐದನೇ ವಿಕೆಟ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಡ್ವೇಯ್ನ್ ಬ್ರಾವೊ 71 ರನ್ ಗಳ ಮುರಿಯದ ಜೊತೆ ಯಾಟದಿಂದ ತಂಡದ ಸ್ಕೋರ್‌ನ್ನು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 157ಕ್ಕೇರಿಸಿತು.

ಯಾರೂ ಇನ್ನಿಂಗ್ಸ್ ಕಟ್ಟಲಿಲ್ಲ
ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಆರಂಭಿಕ ದಾಂಡಿಗರಾದ ಡ್ವೇಯ್ನಾ ಸ್ಮಿತ್ (20) ಮತ್ತು ಬ್ರೆಂಡನ್ ಮೆಕಲಂ (22), ಸುರೇಶ್ ರೈನಾ (28), ಎಫ್‌ಡು ಪ್ಲೆಸಿಸ್ (14) ಕಳಪೆ ಮೊತ್ತಕ್ಕೆ ಕುಸಿದರು.

ಪಂದ್ಯ ವೀಕ್ಷಿಸಿದ ಶ್ರೀಮತಿ ಎಂಎಸ್ ಧೋನಿ
ಹೈದರಾಬಾದಿನಲ್ಲಿ ನಡೆದ ಪಂದ್ಯ ವೀಕ್ಷಿಸಿದ ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ

ಕೆಕೆಆರ್ ತಂಡದಿಂದ ಉತ್ತಮ ಬೌಲಿಂಗ್
ಪಿಯೂಷ್ ಚಾವ್ಲಾ (2-26), ಸುನಿಲ್ ನರೇನ್ (1-9) ಮತ್ತು ಯೂಸುಫ್ ಪಠಾಣ್(1-16) ಚೆನ್ನೈ ತಂಡ ದೊಡ್ಡ ಮೊತ್ತದ ಸ್ಕೋರ್ ದಾಖಲಿಸದಂತೆ ತಡೆದರು. ನರೇನ್ 4 ಓವರ್‌ಗಳಲ್ಲಿ ಕೇವಲ 9 ರನ್ ಬಿಟ್ಟು ಕೊಟ್ಟಿದ್ದರು.

ಉತ್ತಮ ಆಟ ಪ್ರದರ್ಶಿಸಿದ ಕೆಕೆಆರ್
ಗೆಲುವಿನ ನಿರೀಕ್ಷೆ ಹೊಂದಿದ್ದ ಚೆನ್ನೈ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದ ಕೆಕೆಆರ್. ರಸೆಲ್ ಹಾಗೂ ಟೆನ್ ಬ್ಯಾಟಿಂಗ್ ಹೊಗಳಿದ ಕೆಕೆಆರ್ ನಾಯಕ ಗೌತಮ್ ಗಂಭೀರ್

ರೋಚಕತೆ ಉಳಿಸಿಕೊಂಡ ಪಂದ್ಯ
ಕೆಕೆಆರ್ ನ ಆಂಡ್ರೆ ರಸೆಲ್, ಟೆನ್ ಡೊಶಾಟ್ ಸಮಯೋಚಿತ ಆಟ ಧೋನಿ ಪಡೆಗೆ ಸೋಲಿನ ಕಹಿ ಉಣಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications