ಬುಧವಾರ, ನವೆಂಬರ್ 15ರಂದು ಮುಂಬೈನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಸೆಮಿಫೈನಲ್ ಪಂದ್ಯ ಇದೀಗ ಇತಿಹಾಸದ ಪುಟ ಸೇರಿದೆ. ಇಲ್ಲಿ ಕಿವೀಸ್ ತಂಡವನ್ನು 70 ರನ್‌ಗಳಿಂದ ಮಣಿಸಿದ ಭಾರತ ತಂಡ 2023ರ ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದರು.
ಅಲ್ಲದೆ, ಈ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಚೇಸಿಂಗ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕ ಬಾರಿಸಿ ಅಬ್ಬರಿಸಿದರು.

ಇದೇ ವೇಳೆ ಮೈದಾನದಲ್ಲಿ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿತ್ ತೆಂಡೂಲ್ಕರ್ ಹಾಗೂ ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಮೇಲೆ ಕ್ಯಾಮೆರಾಗಳು ಫೋಕಸ್ ಆದವು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹು ಸದ್ದು ಮಾಡುತ್ತಿರುವ ವಿಷಯವೇ ಇದು.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ತಮ್ಮ ಪತಿ ಮತ್ತು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿದ್ದಾರೆ.
ಈ ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಟ್ರೆಂಡಿ ಕೋ-ಆರ್ಡ್ ಸೆಟ್ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಬೇಬಿ ಬಂಪ್ ಕಾಣಬಾರದೆಂದು ಕೊಹ್ಲಿ ಪತ್ನಿ ವಿಭಿನ್ನ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಮಿಂಚಿದರು. ನಟಿಯ ಈ ಉಡುಗೆ ತುಂಬಾ ದುಬಾರಿಯಾಗಿದ್ದು, ಇದರ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ.

ಅನುಷ್ಕಾ ಶರ್ಮಾ ಅವರ ಈ ವೈರಲ್ ವಿಡಿಯೋ ವಾಂಖೆಡೆ ಸ್ಟೇಡಿಯಂನಲ್ಲಿನ ಪಂದ್ಯದ ವೇಳೆಯದ್ದಾಗಿದೆ. ನವೆಂಬರ್ 15ರಂದು ಭಾರತ ಮತ್ತು ನ್ಯೂಜಿಲೆಂಡ್ ಏಕದಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಅದ್ಭುತ ಜಯ ಸಾಧಿಸಿತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ದಾಖಲಿಸಿದರು. ಪತಿಯ ಶತಕದ ನಂತರ ಅನುಷ್ಕಾ ಶರ್ಮಾ ಬಹಿರಂಗವಾಗಿ ಡ್ಯಾನ್ಸ್ ಮಾಡಿದ್ದು ಕಂಡುಬಂತು. ಇದೇ ವೇಳೆ ಪತಿ ಪರಮೇಶ್ವರ ವಿರಾಟ್ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ಕೂಡ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಪಂದ್ಯದ ವೇಳೆ ಬಿಳಿ ಬಣ್ಣದ ಬಟ್ಟೆಯ ಮೇಲೆ ಹಳದಿ ಬಣ್ಣದ ಹೂವಿನ ಕೋ-ಆರ್ಡ್ ಸೆಟ್ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ತೆರೆದ ಕೂದಲು ಮತ್ತು ನೆಲೆಸಿದ ಮೇಕ್ ಅಪ್‌ನೊಂದಿಗೆ ನಟಿ ತನ್ನ ನಗುಮುಖದೊಂದಿಗೆ ಸೊಗಸಾಗಿ ಕಂಡುಬಂದರು.

ಸೆಮಿಫೈನಲ್ ನೋಡಲು ತೀರಾ ಸಿಂಪಲ್ ಆಗಿ ಬಂದ ಅನುಷ್ಕಾ ಶರ್ಮಾ ಧರಿಸಿದ ಈ ಕೋ-ಆರ್ಡರ್ ಸೆಟ್ ಬೆಲೆಯ ಬಗ್ಗೆ ಹೇಳುವುದಾದರೆ, ಇದು ಬರೋಬ್ಬರಿ 27,500 ರೂಪಾಯಿ.
ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಶರ್ಮಾ ತನ್ನ ಎರಡನೇ ಮಗುವಿಗೆ ತಾಯಿ ಆಗುವ ಸಂತಸದಲ್ಲಿದ್ದಾರೆ. ನಟಿಯ ವಿಡಿಯೋ ಕೂಡ ವೈರಲ್ ಆಗಿದೆ. ಇದರಲ್ಲಿ ಆಕೆ ತನ್ನ ಬೇಬಿ ಬಂಪ್ ಅನ್ನು ದುಪಟ್ಟಾದಿಂದ ಮರೆಮಾಡಿರುವುದು ಕಂಡುಬಂದಿದೆ. ಈ ವಿಡಿಯೋ ಟೀಮ್ ಇಂಡಿಯಾದ ದೀಪಾವಳಿ ಪಾರ್ಟಿಯ ವೇಳೆ ಕಂಡು ಬಂದಿದೆ. ಇದರಲ್ಲಿ ನಟಿ ತನ್ನ ಪತಿ ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡಿದ್ದಾಳೆ.