Squash World Cup 2025: ಪ್ರಶಸ್ತಿ ಗೆದ್ದ ಭಾರತ ಇತಿಹಾಸ
ಸ್ಕ್ವಾಷ್ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಇತಿಹಾಸ ಬರೆದಿದೆ. ಈ ಹಿಂದೆ ಭಾರತೀಯ ಸ್ಕ್ವಾಷ್ ತಂಡ ಮಾಡದ ಸಾಧನೆಯನ್ನು ಇದೇ ಮೊದಲ ಬಾರಿಗೆ ಮಾಡಿ ಬೀಗಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ 3-0 ಯಿಂದ ಹಾಂಗ್ ಕಾಂಗ್ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟಿದೆ. ಈ ಮೂಲಕ ಸ್ಕ್ವಾಷ್ ವಿಶ್ವಕಪ್ ಗೆದ್ದ ಮೊದಲ ಏಷ್ಯಾದ ದೇಶ ಎಂಬ ಹಿರಿಮೆ ಭಾರತದ್ದಾಯಿತು. ವಿಶ್ವಕಪ್‌ನಲ್ಲಿ ಭಾರತ 2023ರಲ್ಲಿ ಕಂಚಿನ ಪದಕವನ್ನು ಗೆದ್ದಿರುವುದೇ ದೊಡ್ಡ ಸಾಧನೆಯ ಆಗಿತ್ತು.
ಈ ಪ್ರಶಸ್ತಿ ನಿಜಕ್ಕೂ ಭಾರತೀಯ ಸ್ಕ್ವಾಷ್ ಪಾಲಿಗೆ ಒಳ್ಳೆಯ ಸುದ್ದಿ. ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತೀಯ ತಂಡದ ಪ್ರದರ್ಶನ ಅತ್ಯುತ್ತಮ. ಗುಂಪು ಹಂತದಿಂದಲೇ ಭಾರತ ಸ್ಥಿರ ಪ್ರದರ್ಶನವನ್ನು ನೀಡಿ ಸ್ವಿಟ್ಜರ್‌ಲ್ಯಾಂಡ್ ಮತ್ತು ಬ್ರೆಜಿಲ್ ತಂಡವನ್ನು ಮಣಿಸಿತ್ತು. ಇನ್ನು ದಕ್ಷಿಣ ಆಫ್ರಿಕಾವನ್ನು ಮಣಿಸಿ ಅಬ್ಬರಿಸಿತ್ತು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಎರಡು ಬಾರಿ ಚಾಂಪಿಯನ್ ಈಜಿಪ್ಟ್ ತಂಡವನ್ನು ಮಣಿಸಿದ ಮೇಲೆ ಮಿಶ್ರ ತಂಡದ ಮೇಲೆ ವಿಶ್ವಾಸ ಹೆಚ್ಚಿತು.

ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತ ಎಲೈಟ್ ಗ್ರುಪ್‌ನಲ್ಲಿ ಸ್ಥಾನ ಪಡೆಯಿತು. ವಿಶ್ವ ಸ್ಕ್ವಾಷ್ ಪ್ರಶಸ್ತಿಯನ್ನು ಗೆದ್ದ ಆಸ್ಟ್ರೇಲಿಯಾ, ಈಜಿಪ್ತ್, ಇಂಗ್ಲೆಂಡ್, ಪಾಕಿಸ್ತಾನ ತಂಡಗಳ ಸಾಲಿಗೆ ಭಾರತ ಸೇರಿಕೊಂಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ಕ್ರೀಡೆಯನ್ನು ಸೇರ್ಪಡೆಗೊಂಡಿದೆ.
ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಗೆಲುವಿನ ಆರಂಭವನ್ನು ಮಾಡಿದರು. ಇವರು ಹಾಂಗ್ ಕಾಂಗ್ ತಂಡದ ಕಾ ಯಿ ಲೀ ಅವರನ್ನು 7-3, 2-7, 7-5, 7-1 ಮಣಿಸಿ ತಂಡಕ್ಕೆ ಅರ್ಹ ಮುನ್ನಡೆ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ವಿಶ್ವದ 29ನೇ ಶ್ರೇಯಾಂಕಿತ ಭಾರತದ ಅಭಯ್ ಸಿಂಗ್ ಸಹ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಟವನ್ನು ಆಡಿದರು. ಇವರು ಪ್ರಶಸ್ತಿ ಸುತ್ತಿನಲ್ಲಿ ಶಾರ್ಪ್ ಅಟ್ಯಾಕ್ ಮಾಡುತ್ತಾ ಸಾಗಿದರು. ಪರಿಣಾಮ ಭಾರತ ಕೇವಲ 19 ನಿಮಿಷಗಳಲ್ಲಿ 2-0 ಮುನ್ನಡೆ ಸಾಧಿಸಲು ಸಾಧ್ಯವಾಯಿತು.
ಅನಾಹತ್ ಸಿಂಗ್ ಕಮಾಲ್
17 ವರ್ಷದ ಅನಾಹತ್ ಸಿಂಗ್ ವಿಶ್ವದ 31ನೇ ಶ್ರೇಯಾಂಕದ ಟೊಮ್ಯಾಟೊ ಅವರ ಸವಾಲು ಮೀರಿ ನಿಲ್ಲುತ್ತಿದ್ದಂತೆ ಭಾರತೀಯರ ಪಾಳಯದಲ್ಲಿ ಖುಷಿ ಮನೆ ಮಾಡಿತು. ಡೆಲ್ಲಿಯ ಯುವ ಆಟಗಾರ 7-2, 7-2, 7-5 ಜಯ ಸಾಧಿಸಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ತಮ್ಮದೇ ಕಾಣಿಕೆ ನೀಡಿದರು.
ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಜೋಶ್ನಾ ಚಿನ್ನಪ್ಪ, ಚೆನ್ನೈನಲ್ಲಿ ತಂಡದ ಸಾಧನೆ ಅಮೋಘ. ನಾನು ಭಾರತ ತಂಡದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ದೇಶಕ್ಕಾಗಿ ಆಡುವುದೇ ಸಾಧನೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಈ ರೀತಿಯ ಪ್ರದರ್ಶನ ಖುಷಿ ನೀಡಿದೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications