Paralympics 2024: ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ
ಭಾರತ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಪ್ರಸಕ್ತ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಬಾಚಿಕೊಂಡ ಪದಕಗಳ ಸಂಖ್ಯೆ 20ಕ್ಕೆ ಏರಿಕೆ ಆಗಿದೆ. ಇದು ಕಳೆದ ಬಾರಿಗಿಂತಲೂ ಹೆಚ್ಚು ಎನ್ನುವುದು ಹೆಮ್ಮೆಯ ಸಂಗತಿ. ಭಾರತ ಈ ವರೆಗೆ 3 ಚಿನ್ನ, 7 ಬೆಳ್ಳಿ, ಟೊ ಕಂಚಿನ ಪದಕವನ್ನು ಪಡೆದುಕೊಂಡಿದೆ.
ಪ್ಯಾರಿಸ್‌ಗಿಂತ ಮೊದಲು, ಟೋಕಿಯೊ 2020 ರಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಅತಿ ಹೆಚ್ಚು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. 2020ರಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾರತ ಒಟ್ಟು 19 ಪದಕಗಳ ಬೇಟೆ ನಡೆಸಿತ್ತು. ಆದರೆ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತ ಮೊದಲಾರುದಿನವೇ ಈ ಪದಕದ ಸಂಖ್ಯೆಯನ್ನು ದಾಟಿ ಮುಂದೆ ಸಾಗಿದೆ. ಈ ಮೂಲಕ ಭಾರತ ಇತಿಹಾಸದ ಪುಟದಲ್ಲಿ ತನ್ನ ಹೆಸರನ್ನು ನಮೂದಿಸಿಕೊಂಡಿದೆ.

ಅಥ್ಲೇಟಿಕ್ಸ್‌ನಿಂದ 10 ಪದಕ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೀಟಿಕ್ಸ್ ವಿಭಾಗದಲ್ಲಿ ಅಥ್ಲೀಟ್‌ಗಳು ಅಮೋಘ ಸಾಧನೆ ಮಾಡಿದ್ದಾರೆ. ಭಾರತ ಈವರೆಗೆ ಕ್ರೀಡಾ ಕೂಟದಲ್ಲಿ 20 ಪದಕವನ್ನು ಗೆದ್ದಿದ್ದು, ಇದರಲ್ಲಿ 10 ಪದಕಗಳನ್ನು ಅಥ್ಲೇಟಿಕ್ಸ್ ವಿಭಾಗದಲ್ಲಿ ಗೆದ್ದಿದೆ. ಇನ್ನು ಬ್ಯಾಡ್ಮಿಂಟನ್ ವಿಭಾಗದಲ್ಲಿ 5, ಶೂಟಿಂಗ್‌ನಲ್ಲಿ ನಾಲ್ಕು, ಆರ್ಚರಿಯಲ್ಲಿ ಒಂದು ಪದಕ ಬಂದಿದೆ.
ಮಂಗಳವಾರ ದೀಪ್ತಿ ಜೀವನಜಿ, ಶರದ್ ಕುಮಾರ್, ಮರಿಯಪ್ಪನ್ ತಂಗವೇಲು, ಅಜಿತ್ ಸಿಂಗ್ ಮತ್ತು ಸುಂದರ್ ಗುರ್ಜರ್ ಪದಕದ ಸಾಧನೆ ಮಾಡಿದ್ದಾರೆ.
1968ರಿಂದ ಭಾರತ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಆದರೆ ಭಾರತ 1972ರಲ್ಲಿ ಮೊದಲ ಪದಕ ಗೆದ್ದಿತು. 1984 ರಲ್ಲಿ, ಭಾರತೀಯ ಪ್ಯಾರಾಅಥ್ಲೀಟ್‌ಗಳು 4 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. 2004ರಲ್ಲಿ ಭಾರತ 4, 2012ರಲ್ಲಿ 1, 2016ರಲ್ಲಿ 4 ಹಾಗೂ 2020ರಲ್ಲಿ ಭಾರತ ಒಟ್ಟು 19 ಪದಕಗಳ ಬೇಟೆ ನಡೆಸಿದೆ.
ಶರದ್ ಕುಮಾರ್ ಬೆಳ್ಳಿ
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿರುವ ಶರದ್ ಕುಮಾರ್ ಮತ್ತೊಮ್ಮೆ ಪದಕದ ಬೇಟೆ ನಡೆಸುವಲ್ಲಿ ಸಫಲರಾಗಿದ್ದಾರೆ. ಹೈ ಜಂಪ್ ಟಿ63 ವಿಭಾಗದಲ್ಲಿ ಈ ಬಾರಿ ಚಿನ್ನವನ್ನು ಪಡೆಯಲು ವಿಫಲರಾದ ಶರದ್ ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ. ಇವರು ಒಟ್ಟು 1.88 ಮೀಟರ್ ಜಿಗಿದರು. ಇನ್ನು ಮರಿಯಪ್ಪನ್ ತಂಗವೇಲು 1.85 ಮೀಟರ್ ಜಿಗಿದು ಕಂಚಿಗೆ ಕೊರಳೊಡ್ಡಿದರು. ಈ ವಿಭಾಗದ ಚಿನ್ನ ಅಮೆರಿಕದ ಎಜ್ರಾ ಫ್ರೆಶ್ 1.94 ಮೀಟರ್ ಜಿಗಿದು ಚಿನ್ನದ ಸಾಧನೆ ಮಾಡಿದರು.
ಮರಿಯಪ್ಪನ್ ತಂಗವೇಲು ಅವರು ಪ್ಯಾರಾಲಿಂಪಿಕ್ಸ್ 2016 ರಲ್ಲಿ ಚಿನ್ನದ ಪದಕ, 2020 ರಲ್ಲಿ ಬೆಳ್ಳಿ ಪದಕ ಮತ್ತು ಈ ಬಾರಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಸತತ ಮೂರು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಹೆಮ್ಮೆ ಇವರದ್ದಾಗಿದೆ. ಪದಕದ ರೇಸ್‌ನಲ್ಲಿ ತಂಗವೇಲು ಮತ್ತು ಶರದ್ ಕುಮಾರ್ ಅವರನ್ನು ಹೊರತುಪಡಿಸಿದರೆ ಮತ್ತೊಬ್ಬ ಭಾರತೀಯ ಅಥ್ಲೀಟ್ ಸಹ ಇದ್ದರು. ಶೈಲೇಶ್ ಕುಮಾರ್ ಈ ರೇಸ್‌ನಲ್ಲಿ 1.85 ಮೀಟರ್ ಜಿಗಿದು ನಾಲ್ಕನೇ ಸ್ಥಾನ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications