Paralympics 2024: ಪದಕದ ಆಸೆಯನ್ನು ಚಿಗುರಿಸಿದ ಹರ್ವಿಂದರ್
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬುಧವಾರ ಭಾರತೀಯ ಅಥ್ಲೀಟ್‌ಗಳು ಪದಕದ ಬೇಟೆ ನಡೆಸಲು ಕಣಕ್ಕೆ ಇಳಿಯಲಿದ್ದಾರೆ. ಸೆಪ್ಟೆಂಬರ್ 4 ರಂದು ನಡೆಯುವ ಕ್ರೀಡಾಕೂಟದಲ್ಲಿ, ಒಟ್ಟು ಏಳು ಪದಕ ವಿಭಾಗಗಳಲ್ಲಿ ಭಾರತೀಯ ಅಥ್ಲೀಟ್‌ಗಳು ಅಂಗಳ ಪ್ರವೇಶಿಸಲಿದ್ದಾರೆ.
ಈಗಾಗಲೇ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಅಮೋಘ ಸಾಧನೆ ಮಾಡಿರುವ ಭಾರತ 16 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 3 ಚಿನ್ನ, 5 ಬೆಳ್ಳಿ, 8 ಕಂಚಿನ ಪದಕಗಳು ಸೇರಿದ್ದು, ಭಾರತ ಅಂಕ ಪಟ್ಟಿಯಲ್ಲಿ ಸದ್ಯ 18ನೇ ಸ್ಥಾನದಲ್ಲಿದೆ. ಇಂದು ಭಾರತೀಯ ಕ್ರೀಡಾಭಿಮಾನಿಗಳ ಕಣ್ಣು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಹರ್ವಿಂದರ್ ಸಿಂಗ್ ಅವರ ಮೇಲೆ ನೆಟ್ಟಿರುತ್ತದೆ. ಹರ್ವಿಂದರ್ ರಿಕರ್ವ್ ವಿಭಾಗದಲ್ಲಿ ಪದಕದ ಆಸೆಯ ಬೀಜ ಬಿತ್ತಿದ್ದಾರೆ.

ಇನ್ನು ಪವರ್‌ಲಿಫ್ಟ್ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಇಂದು ಅಖಾಡ ಪ್ರವೇಶಿಸಲಿದ್ದಾರೆ. ಮಹಿಳೆಯರ 45 ಕೆಜಿ ವಿಭಾಗದಲ್ಲಿಸಕಿನಾ ಖಾತುನ್, ಪುರುಷರ 49 ಕೆಜಿ ವಿಭಾಗದಲ್ಲಿ ಪರಮ್‌ಜೀತ್ ಕುಮಾರ್ ಸ್ಪರ್ಧೆ ನಡೆಸಲಿದ್ದು, ಪೋಡಿಯಂಗೆ ಏರುವ ಕನಸು ಕಾಣುತ್ತಿದ್ದಾರೆ.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಭಾರತೀಯ ಅಥ್ಲೀಟ್‌ಗಳ ಸ್ಪರ್ಧೆ
ಮಧ್ಯಾಹ್ನ 1ಕ್ಕೆ, ಶೂಟಿಂಗ್, ಪಿ4 ಮಿಕ್ಸ್ ಟೀಮ್ SH1, 50 ಮೀಟರ್ ಪಿಸ್ತೂಲ್
ಮಾಧ್ಯಾಹ್ನ 1.40ಕ್ಕೆ, ಅಥ್ಲೀಟಿಕ್ಸ್, F46, ಪುರುಷರ ಶಾಟ್‌ಪುಟ್,
ಮಧ್ಯಾಹ್ನ 2.15ಕ್ಕೆ, ಟೆಬಲ್ ಟೆನಿಸ್, ಮಹಿಳೆಯರ ಸಿಂಗಲ್ಸ್ WS4
ಮಧ್ಯಾಹ್ನ 3.15ಕ್ಕೆ, ಅಥ್ಲೇಟಿಕ್ಸ್, F46, ಮಹಿಳೆಯರ ಶಾಟ್‌ಪುಟ್
ಮಧ್ಯಾಹ್ನ 3.30ಕ್ಕೆ, ಪುರುಷರ ಪವರ್‌ಲಿಫ್ಟಿಂಗ್
ಸಂಜೆ 5.50ಕ್ಕೆ, ಆರ್ಚರಿ ಪುರುಷರ ವೈಯಕ್ತಿಕ ಆರ್ಚರಿ
ರಾತ್ರಿ 8.30ಕ್ಕೆ, ಮಹಿಳೆಯರ ಪವರ್‌ಲಿಫ್ಟಿಂಗ್
ರಾತ್ರಿ 10.50ಕ್ಕೆ, F51 ಪುರುಷರ ಕ್ಲಬ್ ಥ್ರೋ
ರಾತ್ರಿ 11.05ಕ್ಕೆ, ಅಥ್ಲೇಟಿಕ್ಸ್, ಮಹಿಳೆಯರ 100 ಮೀಟರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications