Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympic 2024: ಒಲಿಂಪಿಕ್ಸ್‌ಗೂ ಮುನ್ನ ಭಾರತಕ್ಕೆ ಈ ಕ್ರೀಡೆಗಳಲ್ಲಿ ಪದಕದ ನಿರೀಕ್ಷೆ

ಜುಲೈ 16 ಮಂಗಳವಾರ, ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಕೇವಲ 10 ದಿನಗಳು ಉಳಿದಿದ್ದು, ಭಾರತದ ಸ್ಟಾರ್‌ ಅಥ್ಲೀಟ್‌ಗಳ ತಯಾರಿ ಅಂತಿಮ ಹಂತದಲ್ಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ಭಾರತ ಕೆಲವು ಕ್ರೀಡೆಗಳಲ್ಲಿ ಮಾತ್ರ ಪದಕದ ನಿರೀಕ್ಷೆಯಲ್ಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ, ಕಳೆದ ಟೋಕಿಯೊ ಒಲಿಂಪಿಕ್ಸ್ ಭಾರತಕ್ಕೆ ಅತ್ಯಂತ ಸ್ಮರಣೀಯವಾಗಿತ್ತು. ಈ ಕ್ರೀಡಾಕೂಟದಲ್ಲಿ ಭಾರತ ತಂಡ ಒಟ್ಟು 7 ಪದಕಗಳನ್ನು ಗೆದ್ದಿತ್ತು.

India hoping for medal in these games at Paris Olympics 2024

ಆದರೆ ಈ ಬಾರಿ ಕನಿಷ್ಠ ಪದಕಗಳ ಅಂಕಿಯನ್ನು ಎರಡಂಕಿಯನ್ನಾಗಿ ಪರಿವರ್ತಿಸಲು ಭಾರತದ ಆಥ್ಲೀಟ್‌ಗಳು ಸಜ್ಜಾಗಿದ್ದಾರೆ. ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡಂಕಿ ಮುಟ್ಟಲಿದೆ. ಈಗ ಈ ಕನಸು ಹೇಗೆ ನನಸಾಗಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ 100 ಕ್ಕೂ ಹೆಚ್ಚು ಭಾರತದ ಆಥ್ಲೀಟ್‌ಗಳು ಮತ್ತು ಇತರ ಸಿಬ್ಬಂದಿಯನ್ನು ಹೊಂದಿದೆ. ಈ ಕ್ರೀಡಾಕೂಟದಲ್ಲಿ ಕೆಲವು ಸ್ಪರ್ಧೆಗಳಲ್ಲಿ ಮಾತ್ರ ಭಾರತವು ಪ್ರಬಲವಾಗಿದೆ . ಅದರಲ್ಲೂ ಜಾವೆಲಿನ್ ಥ್ರೋ ಮತ್ತು ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಪದಕ ಗ್ಯಾರಂಟಿ ಆದರೆ, ಬಾಕ್ಸಿಂಗ್ ಮತ್ತು ಬ್ಯಾಡ್ಮಿಂಟನ್ ನಲ್ಲೂ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.

ಭಾರತಕ್ಕೆ ಈ ಸ್ಪರ್ಧೆಗಳಲ್ಲಿ ಪದಕದ ನಿರೀಕ್ಷೆ

1) ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ ಅವರು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲವ ಮೂಲಕ ಮೀರಾಬಾಯಿ ಭಾರತದ ಐತಿಹಾಸಿಕ ಪ್ರದರ್ಶನಕ್ಕೆ ಅಡಿಪಾಯ ಹಾಕಿದರು. ಹೀಗಾಗಿ ಭಾರತ ಈ ಬಾರಿ ಮೀರಾಬಾಯಿ ಅವರಿಂದ ಚಿನ್ನದ ನಿರೀಕ್ಷೆಯಲ್ಲಿದೆ.

2) ಈ ಬಾರಿಯೂ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 'ಗೋಲ್ಡನ್‌ ಬಾಯ್‌' ಖ್ಯಾತಿಯ ನೀರಜ್ ಚೋಪ್ರಾ ಅವರಿಂದ ಭಾರತ ರಜತ ಪದಕವನ್ನು ಬಯಸಿದೆ. ಆದರೆ, ಈ ಬಾರಿ ಎದುರಾಳಿಗಳು ಪ್ರಬಲವಾಗಿದ್ದರೂ ದೇಶ ನೀರಜ್‌ ಅವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದೆ.

3) ಈ ಬಾರಿ ಪ್ಯಾರಿಸ್‌ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮಹಿಳೆಯರಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು ಅವರಿಂದ ದೇಶವೇ ಪದಕದ ನಿರೀಕ್ಷೆಯಲ್ಲಿದೆ.

ಸಿಂಧು ಅವರನ್ನೂ ಹೊರೆತು ಪಡೆಸಿ ಬ್ಯಾಡ್ಮಿಂಟಸ್‌ನಲ್ಲಿ ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಕೂಡ ತಂಡದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲೂ ಎರಡು-ಮೂರು ಪದಕಗಳು ಭಾರತಕ್ಕೆ ಸೇರಲಿವೆ.

4) ಬಾಕ್ಸಿಂಗ್ ಬಗ್ಗೆ ನೋಡುವುದಾದರೆ, ಭಾರತವು ಪ್ರತಿ ಬಾರಿಯೂ ಈ ಆಟದಲ್ಲಿ ಪ್ರಬಲ ಪ್ರದರ್ಶನ ನೀಡಿದೆ. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಿಂದ ಬಾಕ್ಸಿಂಗ್‌ನಲ್ಲಿ ಕನಿಷ್ಠ ಎರಡು-ಮೂರು ಪದಕಗಳನ್ನು ನಿರೀಕ್ಷಿಸಲಾಗಿದೆ.

ಅನುಭವಿ ನಿಖತ್ ಜರೀನ್, ಲೊವ್ಲಿನಾ ಬೊರ್ಗೊಹೈನ್ ಮತ್ತು ಅಮಿತ್ ಪಂಗಲ್ ಅವರಂತಹ ಅನೇಕ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ.

5) ಶೂಟಿಂಗ್‌ನಲ್ಲಿ ತನ್ನ ಎರಡನೇ ಒಲಿಂಪಿಕ್ಸ್‌ನತ್ತ ಸಾಗುತ್ತಿರುವ ಮನು ಭಾಕರ್ ತಮ್ಮ ಅನುಭವ ಮತ್ತು ಇತ್ತೀಚಿನ ಅಮೋಘ ಪ್ರದರ್ಶನಗಳಿಂದ ಪಡೆದ ಆತ್ಮವಿಶ್ವಾಸದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಟೋಕಿಯೊದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಗುರಿ ತಪ್ಪಿದ ನಂತರ, 22 ವರ್ಷದ ಭಾಕರ್ ಅದ್ಭುತ ಪ್ರದರ್ಶನ ನೀಡಿದ್ದಾರೆ.

ವಿಶೇಷವಾಗಿ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 25 ಮೀ ಪಿಸ್ತೂಲ್ ತಂಡ ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು ಭಾಕರ್‌ ಅವರ ಸಾಮರ್ಥ್ಯವನ್ನು ತೋರಿಸುತ್ತದೆ. ಮಹಿಳೆಯರ 10ಮೀ ಏರ್ ಪಿಸ್ತೂಲ್ ಮತ್ತು ಮಹಿಳೆಯರ 25ಮೀ ಪಿಸ್ತೂಲ್ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಭಾಕರ್ ಏಕೈಕ ಅಥ್ಲೀಟ್ ಆಗಿದ್ದಾರೆ.

6) 2020ರ ಟೋಕಿಯೊ ಕ್ರೀಡಾಕೂಟದಲ್ಲ ಭಾರತೀಯ ಪುರುಷರ ಹಾಕಿ ತಂಡವು ಜರ್ಮನಿಯನ್ನು ಸೋಲಿಸಿ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕಕ್ಕಾಗಿ ತನ್ನ 41 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತ್ತು.

ಬಳಿಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರ ಅದ್ಭುತ ಪ್ರದರ್ಶನದೊಂದಿಗೆ ತಂಡವು 2022 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಈ ಲಯದೊಂದಿಗೆ ತಂಡವು ಒಲಿಂಪಿಕ್ ಪ್ರವೇಶಿಸಲಿದೆ.

44 ವರ್ಷಗಳ ಚಿನ್ನದ ಬರವನ್ನು ಕೊನೆಗೊಳಿಸುವುದು ಇದರ ಗುರಿಯಾಗಿದೆ. ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಅತಿಹೆಚ್ಚು ಪದಕಗಳು ( 8 ಚಿನ್ನ, 1 ಬೆಳ್ಳಿ ಮತ್ತು 3 ಕಂಚಿನ) ಹಾಕಿಯಿಂದ ಬಂದಿದೆ.

Story first published: Tuesday, July 16, 2024, 15:41 [IST]
Other articles published on Jul 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+