ಇದೇ ಜುಲೈ 25ರಂದು ಪ್ರಾರಂಭವಾಗಲಿರುವ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಒಟ್ಟು 117 ಭಾರತೀಯ ಅಥ್ಲೀಟ್‌ಗಳು ಸಜ್ಜಾಗುತ್ತಿದ್ದಾರೆ.
16 ಕ್ರೀಡಾ ವಿಭಾಗಗಳಲ್ಲಿ ಈ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, 70 ಪುರುಷ ಮತ್ತು 47 ಮಹಿಳಾ ಅಥ್ಲೀಟ್‌ಗಳು ಬಹುರಾಷ್ಟ್ರೀಯ ಕ್ರೀಡಾ ವೇದಿಕೆಯ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಯತ್ನಿಸಲಿದ್ದಾರೆ.

ಇನ್ನು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತದಿಂದ 117 ಕ್ರೀಡಾಪಟುಗಳ ಪೈಕಿ, ಯಾವ ರಾಜ್ಯದಿಂದ ಎಷ್ಟು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಇಂಡಿಯಾ ಸ್ಪೋರ್ಟ್ಸ್‌ಹಬ್‌ನಿಂದ ಇತ್ತೀಚೆಗೆ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಮತ್ತು ಬಾಕ್ಸರ್ ಅಮಿತ್ ಪಂಗಲ್ ಸೇರಿದಂತೆ ಹರ್ಯಾಣ ರಾಜ್ಯದಿಂದ (23) ಅತಿ ಹೆಚ್ಚಿನ ಅಥ್ಲೀಟ್‌ಗಳು ಸೇರಿದ್ದಾರೆ. ಇದೇ ವೇಳೆ ನೆರೆಯ ಪಂಜಾಬ್ ರಾಜ್ಯದಿಂದ 18 ಅಥ್ಲೀಟ್‌ಗಳು ಭಾಗವಹಿಸುತ್ತಿದ್ದು, ಎರಡನೇ ಸ್ಥಾನ ಪಡೆದಿದೆ.
ಬಿಡುಗಡೆಯಾದ ಡೇಟಾವನ್ನು ನೋಡಿದರೆ, ಇದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಹೋಗುವ ನಮ್ಮ ಭಾರತೀಯ ಕ್ರೀಡಾಪಟುಗಳು ಮತ್ತು ಅವರು ಪ್ರತಿನಿಧಿಸುವ ರಾಜ್ಯಗಳ ಸ್ಪಷ್ಟ ಚಿತ್ರವನ್ನು ನೀಡುತ್ತದೆ.
ಹರಿಯಾಣ - 23
ಪಂಜಾಬ್ - 18
ತಮಿಳುನಾಡು - 13
ಉತ್ತರ ಪ್ರದೇಶ - 9
ಕರ್ನಾಟಕ - 7
ಕೇರಳ - 5
ಮಹಾರಾಷ್ಟ್ರ - 5
ದೆಹಲಿ - 5
ಆಂಧ್ರ ಪ್ರದೇಶ - 4
ಉತ್ತರಾಖಂಡ - 4
ತೆಲಂಗಾಣ - 4
ಪಶ್ಚಿಮ ಬಂಗಾಳ - 3
ಒಡಿಶಾ - 2
ಮಧ್ಯಪ್ರದೇಶ - 2
ಮಣಿಪುರ - 2
ಛತ್ತೀಸ್‌ಗಢ -2
ರಾಜಸ್ಥಾನ - 2
ಗುಜರಾತ್ - 2
ಸಿಕ್ಕಿಂ - 1
ಜಾರ್ಖಂಡ್ - 1
ಗೋವಾ - 1
ಅಸ್ಸಾಂ - 1
ಬಿಹಾರ - 1
ಹರಿಯಾಣ ರಾಜ್ಯವು ಹಲವು ಉನ್ನತ ದರ್ಜೆಯ ಅಥ್ಲೀಟ್‌ಗಳನ್ನು ನಿರ್ಮಿಸಿದೆ. ಅವರಲ್ಲಿ ನೀರಜ್ ಚೋಪ್ರಾ ಒಂದು ಪ್ರಮುಖ ಉದಾಹರಣೆಯಾಗಿದ್ದಾರೆ.
2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಜಾವೆಲಿನ್ ಥ್ರೋವರ್ ಚಿನ್ನದ ಪದಕವನ್ನು ಗೆದ್ದಾಗ, ನೀರಜಾ ಚೋಪ್ರಾ ತನ್ನ ಚಿನ್ನದ ತೋಳಿನಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎನಿಸಿದರು.
ನೀರಜ್ ಚೋಪ್ರಾ ಹೊರತಾಗಿ, ಮಹಿಳೆಯರ 400 ಮೀ ಮತ್ತು 4x400 ಮೀ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುವ ಕಿರಣ್ ಪಹಲ್ ಮತ್ತು ಕುಸ್ತಿಪಟು ವಿನೇಶ್ ಫೋಗಟ್ ಕೂಡ ಹರಿಯಾಣ ರಾಜ್ಯದವರಾಗಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಜಾರ್ಖಂಡ್, ಬಿಹಾರ, ಗೋವಾ, ಒಡಿಶಾ ಮತ್ತು ಅಸ್ಸಾಂನಂತಹ ರಾಜ್ಯಗಳು ಇನ್ನೂ ಅನೇಕ ಕ್ರೀಡಾಪಟುಗಳನ್ನು ಅಭಿವೃದ್ಧಿಪಡಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಈ ರಾಜ್ಯಗಳಿಂದ ತಲಾ ಒಬ್ಬ ಅಥ್ಲೀಟ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದಿದ್ದಾರೆ.
2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ಎಲ್ಲಾ ಉನ್ನತ ದರ್ಜೆಯ ಪ್ರದರ್ಶನಗಳೊಂದಿಗೆ ಎಷ್ಟು ಪದಕಗಳನ್ನು ಗೆಲ್ಲಬಹುದು ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.