ಜ.6 ರಂದು ಆಸೀಸ್ ಸರಣಿ, ವಿಶ್ವಕಪ್ ಗೆ ತಂಡ ಪ್ರಕಟ
ಮುಂಬೈ, ಜ.2: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಸರಣಿ ಹಾಗೂ ಮುಂಬರುವ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ 15 ಜನ ಸದಸ್ಯರ ತಂಡವನ್ನು ಜ.6ರಂದು ಪ್ರಕಟಿಸಲಾಗುವುದು ಎಂದು ಐದು ಸದಸ್ಯರಿರುವ ಬಿಸಿಸಿಐ ಆಯ್ಕೆ ಸಮಿತಿ ಹೇಳಿದೆ.
ಜ.6ರಂದು ಮುಂಬೈನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ತ್ರಿಕೋನ ಸರಣಿ ಹಾಗೂ ವಿಶ್ವಕಪ್ ಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಪಿಟಿಐ ಸುದ್ದಿಗಾರರಿಗೆ ಹೇಳಿದ್ದಾರೆ.

ತ್ರಿಕೋನ ಏಕದಿನ ಸರಣಿ: ಅತಿಥೇಯ ಆಸ್ಟ್ರೇಲಿಯಾ ಜೊತೆಗೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ಜ.16ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಫೆ.1ರಂದು ಅಂತಿಮ ಹಣಾಹಣಿ ನಿಗದಿಯಾಗಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜ.18ರಂದು ಆಡಲಿದೆ. [30 ಮಂದಿ ಟೀಂ ಇಂಡಿಯಾ ಪ್ರಕಟ]
ವಿಶ್ವಕಪ್ 2015 ಟೂರ್ನಿ: ಫೆ.14ರಿಂದ ಮಾರ್ಚ್ 29ರ ತನಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಭಾರತದ ತನ್ನ ಅಭ್ಯಾಸ ಪಂದ್ಯಗಳನ್ನು ಫೆ.8ರಿಂದ ಆಡಲಿದೆ. [ಭಾರತಕ್ಕೆ ಆಸ್ಟ್ರೇಲಿಯಾ ಮೊದಲ ಎದುರಾಳಿ]
ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ 30 ಮಂದಿ ಸಂಭಾವ್ಯ ಆಟಗಾರರನ್ನು ವಿಶ್ವಕಪ್ ತಂಡಕ್ಕಾಗಿ ಈಗಾಗಲೇ ಆಯ್ಕೆ ಮಾಡಿದ್ದಾರೆ. ಈಗ 15 ಜನ ಸದಸ್ಯರನ್ನು ಆಯ್ಕೆ ಮಾಡಲಿದ್ದು 2011ರ ಚಾಂಪಿಯನ್ ಶಿಪ್ ಅನ್ನು ಉಳಿಸಿಕೊಳ್ಳಲು ಯತ್ನಿಸಲಿದ್ದಾರೆ.
ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಎಂಎಸ್ ಧೋನಿ ಅವರು ಆಸ್ಟ್ರೇಲಿಯಾ ತೊರೆಯುತ್ತಿಲ್ಲ, ಅವರು ಸಿಡ್ನಿಯಲ್ಲೇ ತಂಡದ ಜೊತೆ ಇರಲಿದ್ದಾರೆ. ಜ.10ಕ್ಕೆ ಟೆಸ್ಟ್ ಸರಣಿ ಮುಕ್ತಾಯವಾಗಲಿದೆ ನಂತರ ಏಕದಿನ ತಂಡದ ಜೊತೆ ಅಭ್ಯಾಸದಲ್ಲಿ ನಿರತರಾಗಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications