ರಸ್ಲಿಂಗ್ ವರ್ಲ್ಡ್‌ಕಪ್‌ನಲ್ಲಿ ಭಾರತದ ಅಂಶು ಮಲಿಕ್‌ಗೆ ಬೆಳ್ಳಿ ಪದಕ

ಬೆಲ್ಗ್ರೇಡ್: ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ನಡೆದ ವೈಯಕ್ತಿಕ ರಸ್ಲಿಂಗ್ ವರ್ಲ್ಡ್‌ಕಪ್‌ನಲ್ಲಿ ಭಾರತದ ಯುವ ರಸ್ಲರ್ ಅಂಶು ಮಲಿಕ್ ಬೆಳ್ಳಿ ಪದಕ ಜಯಿಸಿದ್ದಾರೆ. 57 ಕೆಜಿ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಏಕಮತ್ರ ರಸ್ಲರ್ ಅಂಶು, ದೇಶಕ್ಕೆ ಪದಕ ಗೆದ್ದಿದ್ದಾರೆ.
ರಸ್ಲಿಂಗ್ ಜೂನಿಯರ್ ಲೆವೆಲ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಶ್ರೇಯಾಂಕದಲ್ಲಿ ಗಮನಾರ್ಹ ಸಾಧನೆ ತೋರಿದ್ದ ಅಂಶು ಮಲಿಕ್, ಸೀನಿಯರ್ ಲೆವೆಲ್‌ನಲ್ಲಿ ಮೂರನೇ ಪದಕ ಜಯಿಸಿದ್ದಾರೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಅಂಶು ಅವರು ಮಾಲ್ಡೋವಾದ ಅನಸ್ತಾಸಿಯಾ ನಿಚಿತಾ ವಿರುದ್ಧ ಸೋತು ಬಂಗಾರದ ಪದಕ ಕೈ ತಪ್ಪಿಸಿಕೊಂಡರು.
ಇದೇ ವರ್ಷ ಆರಂಭದಲ್ಲಿ ಅಂಶು ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಆ ಬಳಿಕ ಜನವರಿಯಲ್ಲಿ ರೋಮ್‌ನಲ್ಲಿ ನಡೆದಿದ್ದ ಮ್ಯಾಟಿಯೊ ಪೆಲಿಕೋನ್ ರಸ್ಲಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ವರ್ಲ್ಡ್ ಚಾಂಪಿಯನ್‌ಶಿಪ್ ಮೆಡಲಿಸ್ಟ್ ಪೂಜಾ ಧಂಡ, ಅನುಭವಿ ರಸ್ಲರ್ ಸರಿತಾ ಮೋರ್ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೂ ಅದೇ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಅಂಶು ಸೈ ಎನಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications