Paralympics 2024: ಹರ್ವಿಂದರ್, ಮೋನಾ ಮೇಲೆ ಪದಕದ ನಿರೀಕ್ಷೆ
ಭಾರತದ ಕ್ರೀಡಾ ಪಟುಗಳು ತಮ್ಮ ಮೇಲೆ ಅಭಿಮಾನಿಗಳು ಇಟ್ಟ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ದಾಖಲೆಯ ಪದಕದ ಬೇಟೆ ನಡೆಸಿ ಮುನ್ನಡೆದಿರುವ ಭಾರತ, ಗುರುವಾರವೂ ಪದಕದ ಬೇಟೆ ನಡೆಸಲಿದೆ. ಇಂದು ನಡೆಯಲಿರುವ ಸ್ಪರ್ಧೆಯಲ್ಲಿ ಭಾರತೀಯ ಅಥ್ಲೀಟ್‌ಗಳು ಮೂರು ಪದಕ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಿದ್ದಾರೆ.
ಬುಧವಾರ ಪುರುಷರ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿರುವ ಹರ್ವಿಂದರ್ ಸಿಂಗ್, ಮತ್ತೆ ಅಂಗಳ ಪ್ರವೇಶಿಸಲಿದ್ದಾರೆ. ಇವರ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹರ್ವಿಂದರ್ ಮಿಶ್ರ ತಂಡ ವಿಭಾಗದಲ್ಲಿ ಪೂಜಾ ಜಟಾಯನ್ ಜೊತೆ ಪದಕ ಬೇಟೆ ನಡೆಸಲಿದ್ದಾರೆ. ಇನ್ನು 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಗ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಮೋನಾ ಅಗರ್‌ವಾಲ್ ಮಿಶ್ರ ತಂಡ ವಿಭಾಗದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಭಾರತೀಯ ಅಥ್ಲೀಟ್‌ಗಳ ಇಂದಿನ ವೇಳಾಪಟ್ಟಿ
ಮಧ್ಯಾಹ್ನ 1:00 : ಶೂಟಿಂಗ್ , ಶೂಟಿಂಗ್, ಮಿಶ್ರ 50 ಮೀ ರೈಫಲ್ ಪ್ರೋನ್ SH1 ಅರ್ಹತೆ
ಮಧ್ಯಾಹ್ನ 1:30: ಜೂಡೋ , ಮಹಿಳೆಯರ 48kg J2 ಪ್ರಾಥಮಿಕ ಸುತ್ತು
ಮಧ್ಯಾಹ್ನ 1:30: ಜೂಡೋ , ಪುರುಷರ 60kg J1 ಪ್ರಾಥಮಿಕ ಸುತ್ತು
ಮಧ್ಯಾಹ್ನ 1:50 : ಆರ್ಚರಿ , ಮಿಶ್ರ ತಂಡ ರಿಕರ್ವ್ ಓಪನ್
ಮಧ್ಯಾಹ್ನ 3:10 : ಅಥ್ಲೆಟಿಕ್ಸ್, ಮಹಿಳೆಯರ 100m T12 ಸೆಮಿಫೈನಲ್
ಮಧ್ಯಾಹ್ನ 3:15 : ಶೂಟಿಂಗ್ , ಮಿಶ್ರ 50m ರೈಫಲ್ ಪ್ರೋನ್ SH1 ಫೈನಲ್
ಸಂಜೆ 6:30 : ಆರ್ಚರಿ, ಮಿಶ್ರ ತಂಡ ರಿಕರ್ವ್ ಓಪನ್ ಕ್ವಾರ್ಟರ್ ಫೈನಲ್ಸ್
ಸಂಜೆ 7:50 : ಆರ್ಚರಿ , ಮಿಶ್ರ ತಂಡ ರಿಕರ್ವ್ ಓಪನ್ ಸೆಮಿಫೈನಲ್
ರಾತ್ರಿ 8:45 : ಆರ್ಚರಿ , ಮಿಶ್ರ ತಂಡ ರಿಕರ್ವ್ ಓಪನ್ ಕಂಚಿನ ಪದಕ ಪಂದ್ಯ
ರಾತ್ರಿ 9:05 : ಆರ್ಚರಿ , ಮಿಶ್ರ ತಂಡ ರಿಕರ್ವ್ ಓಪನ್ ಫೈನಲ್
ರಾತ್ರಿ 10:05 : ಪವರ್‌ಲಿಫ್ಟಿಂಗ್, ಪುರುಷರ 65 ಕೆಜಿ ಫೈನಲ್
ರಾತ್ರಿ 10:47 : ಅಥ್ಲೆಟಿಕ್ಸ್, ಮಹಿಳೆಯರ 100m T12 ಫೈನಲ್
ರಾತ್ರಿ 11:49 : ಅಥ್ಲೆಟಿಕ್ಸ್, ಪುರುಷರ ಶಾಟ್ ಪುಟ್ F35 ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications