Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಒಲಿಂಪಿಕ್ಸ್‌ನಲ್ಲಿ ಆಗಸ್ಟ್‌ 1ರಂದು ಭಾರತದ ಸಂಪೂರ್ಣ ವೇಳಾಪಟ್ಟಿ ತಿಳಿಯಿರಿ

ಆಗಸ್ಟ್‌ 1 ಗುರುವಾರ, ಇಂದು ಪ್ಯಾರಿಸ್ ಒಲಿಂಪಿಕ್ಸ್‌ನ ಆರನೇ ದಿನ. ಕಳೆದ 5 ದಿನಗಳಲ್ಲಿ ಶೂಟಿಂಗ್‌ನಲ್ಲಿ ಬಂದ ಎರಡು ಪದಕಗಳನ್ನು ಮಾತ್ರ ಭಾರತ ಪಡೆದುಕೊಂಡಿದೆ.

ಇಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಗೆಲ್ಲುವ ಸನಿಹ ಭಾರತದ ಅಥ್ಲೀಟ್ಸ್‌ ಹೆಜ್ಜೆ ಇಡಲಿದ್ದಾರೆ. ಶೂಟಿಂಗ್‌ನಲ್ಲಿ ಪದಕ ಗೆದ್ದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ನಂತರ, ಈಗ ಭಾರತೀಯ ಅಭಿಮಾನಿಗಳು ಬಾಕ್ಸಿಂಗ್ ಮತ್ತು ಬ್ಯಾಡ್ಮಿಂಟನ್ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಮತ್ತು ಲಕ್ಷ್ಯಸೇನ್ ಪ್ರಿ ಕ್ವಾರ್ಟರ್‌ಗೆ ಅರ್ಹತೆ ಪಡೆದರೆ, ಶ್ರೀಜಾ ಅಕುಲಾ ಕೂಡ ಟೇಬಲ್ ಟೆನಿಸ್‌ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿ ಅರ್ಹತೆ ಪಡೆದಿದ್ದಾರೆ. ಬಾಕ್ಸಿಂಗ್‌ನಲ್ಲಿ ಲೊವ್ಲಿನಾ ಬರ್ಗೊಹೈನ್ ಅಸಾಮಾನ್ಯ ಪ್ರದರ್ಶನದೊಂದಿಗೆ ಕ್ವಾರ್ಟರ್ ಫೈನಲ್‌ಗೆ ತಲುಪುವ ಮೂಲಕ ಪದಕದಿಂದ ಒಂದು ಹೆಜ್ಜೆ ದೂರ ಹಿಂದೆ ಇದ್ದಾರೆ.

ಸ್ವಪ್ನಿಲ್ ಕುಸಾಲೆ ಶೂಟಿಂಗ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದು, ಪುರುಷರ 50 ಮೀಟರ್ ರೈಫಲ್ 3 ಸ್ಥಾನಗಳ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್‌ ತಮ್ಮ ಸಾಮರ್ಥ್ಯ ತೋರಿಸಿದರು. ಇನ್ನೊಂದೆಡೆ ಭಾರತದ ಮಹಿಳಾ ಆರ್ಚರಿ ದೀಪಿಕಾ ಕುಮಾರಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಭಾರತದ ಪುರುಷರ ಹಾಕಿ ತಂಡವು ಬೆಲ್ಜಿಯಂ ವಿರುದ್ಧ ನಿರ್ಣಾಯಕ ಪಂದ್ಯವನ್ನು ಆಡಲಿದೆ.

India schedule for 2024 Paris Olympics on August 1

ಆಗಸ್ಟ್‌ 1 ರಂದು ಭಾರತೀಯ ಅಥ್ಲೀಟ್‌ಗಳ ಸ್ಪರ್ಧೆ

ಆರ್ಚರಿ: ಪುರುಷರ ಮತ್ತು ಮಹಿಳೆಯರ ಎಲಿಮಿನೇಷನ್ ಸುತ್ತು- ಮಧ್ಯಾಹ್ನ 1 ಗಂಟೆಗೆ

ಅಥ್ಲೆಟಿಕ್ಸ್: ಪುರುಷರ 20 ಕಿಮೀ ಓಟದ ನಡಿಗೆ- ಬೆಳಿಗ್ಗೆ 11 ಗಂಟೆಗೆ
ಮಹಿಳೆಯರ 20 ಕಿಮೀ ಓಟದ ನಡಿಗೆ - ಮಧ್ಯಾಹ್ನ 12.50 ಗಂಟೆಗೆ

ಬ್ಯಾಡ್ಮಿಂಟನ್: ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ 16ನೇ ಸುತ್ತಿನ ಪಂದ್ಯ ಹಾಗು ಪುರುಷರ ಮತ್ತು ಮಹಿಳೆಯರ ಡಬಲ್ಸ್ ಕ್ವಾರ್ಟರ್-ಫೈನಲ್- ಮಧ್ಯಾಹ್ನ 12 ಗಂಟೆಗೆ

ಬಾಕ್ಸಿಂಗ್: ಮಹಿಳೆಯರ 50 ಮತ್ತು 54 ಕೆಜಿ 16ನೇ ಸುತ್ತಿನ ಕ್ವಾರ್ಟರ್-ಫೈನಲ್- ಮಧ್ಯಾಹ್ನ 2.30 ಗಂಟೆಗೆ

ಗಾಲ್ಫ್: ಪುರುಷರ ಮೊದಲ ಸುತ್ತು -ಮಧ್ಯಾಹ್ನ 12.30 ಗಂಟೆಗೆ

ಹಾಕಿ: ಭಾರತ vs ಬೆಲ್ಜಿಯಂ -ಮಧ್ಯಾಹ್ನ 1.30 ಗಂಟೆಗೆ

ಜೂಡೋ: ಮಹಿಳೆಯರ 78 ಕೆಜಿ + 32ರ ಸುತ್ತಿನ ಫೈನಲ್‌ವರೆಗೆ- ಮಧ್ಯಾಹ್ನ 1.30 ಗಂಟೆಗೆ

ರೋಯಿಂಗ್: ಪುರುಷರ ಸಿಂಗಲ್ಸ್ ಸ್ಕಲ್ಸ್ ಸೆಮಿ-ಫೈನಲ್ A/B- ಮಧ್ಯಾಹ್ನ 1.20 ಗಂಟೆಗೆ

ನೌಕಾಯಾನ: ಪುರುಷರ ಮತ್ತು ಮಹಿಳೆಯರ ಡಿಂಗಿ ಓಟ- ಮಧ್ಯಾಹ್ನ 3.30 ಗಂಟೆಗೆ

ಶೂಟಿಂಗ್: 50 ಮೀ ರೈಫಲ್ 3 ಪೊಸಿಷನ್ ಪುರುಷರ ಫೈನಲ್ - ಮಧ್ಯಾಹ್ನ 1 ಗಂಟೆಗೆ
50 ಮೀ ರೈಫಲ್ 3 ಪೊಸಿಷನ್ ಮಹಿಳೆಯರ ಅರ್ಹತೆ - ಮಧ್ಯಾಹ್ನ 3.30 ಗಂಟೆಗೆ

ಟೇಬಲ್ ಟೆನಿಸ್: ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್-ಫೈನಲ್- ಮಧ್ಯಾಹ್ನ 1.30 ಗಂಟೆಗೆ

Story first published: Wednesday, July 31, 2024, 19:20 [IST]
Other articles published on Jul 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+