Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಆಗಸ್ಟ್ 3 ರಂದು ಸ್ಫರ್ಧಿಸಲಿರುವ ಭಾರತದ ಅಥ್ಲೀಟ್ಸ್‌; ವೇಳಾಪಟ್ಟಿ ತಿಳಿಯಿರಿ

ಆಗಸ್ಟ್‌ 2 ಶುಕ್ರವಾರ, ಪ್ಯಾರಿಸ್‌ ಒಲಿಂಪಿಕ್ಸ್ 2024ರ ಎಂಟನೇ ದಿನದಂದು ಭಾರತದ ಸ್ಟಾರ್‌ ಶೂಟರ್‌ ಮನು ಭಾಕರ್‌ ತಮ್ಮ ಮೂರನೇ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಎರಡು ಕಂಚಿನ ಪದಕಗಳನ್ನು ಶೂಟಿಂಗ್‌ನಲ್ಲಿ ಮನು ಭಾಕರ್‌ ಗೆದ್ದಿದ್ದಾರೆ.

ಭಾರತ ಆಗಸ್ಟ್‌ 3 ರಂದು ಕೆಲವು ಕ್ರೀಡೆಗಳಲ್ಲಿ ಮಾತ್ರ ಸ್ಫರ್ಧೆ ಮಾಡುತ್ತಿದೆ. ರೋಯಿಂಗ್, ಶೂಟಿಂಗ್ ಮತ್ತು ಆರ್ಚರಿ ತಂಡಗಳು ಒಟ್ಟು ಆರು ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ.

India schedule for Eight day of Paris Olympics 2024

ಬಾಕಿಂಗ್ಸ್‌ನಲ್ಲಿ ಭಾರತದ ಸ್ಟಾರ್‌ ಬಾಕ್ಸರ್ ನಿಶಾಂತ್ ದೇವ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ತಂದು ಕೊಡಲು ರೆಡಿಯಾಗಿದ್ದಾರೆ. ಮತ್ತೊಂದೆಡೆ ಶುಕ್ರವಾರ (ಆಗಸ್ಟ್ 2) ರಾತ್ರಿ ನಡೆಯಲಿರುವ ಸ್ಪರ್ಧೆಯಲ್ಲಿ ಶಾಟ್‌ಪುಟ್‌ ಪಟು ತಜಿಂದರ್‌ಪಾಲ್‌ ಸಿಂಗ್‌ ತೂರ್‌ ಅವರು ಪದಕ ಸುತ್ತಿಗೆ ಅರ್ಹತೆ ಪಡೆದರೆ
ಫೈನಲ್‌ಗೆ ಪ್ರವೇಶಿಸುವ ಸಾಧ್ಯತೆ ಇದೆ.

ಆಗಸ್ಟ್‌ 3 ರಂದು ಭಾರತೀಯ ಅಥ್ಲೀಟ್‌ಗಳ ಸ್ಪರ್ಧೆ

ಗಾಲ್ಫ್: ಶುಭಂಕರ್ ಶರ್ಮಾ, ಗಗನ್ಜೀತ್ ಭುಲ್ಲಾರ್- ಮಧ್ಯಾಹ್ನ 12:30 ಗಂಟೆಗೆ

ಶೂಟಿಂಗ್‌: ರೈಜಾ ಧಿಲ್ಲೋನ್, ಮಹ್ವಶ್ವರಿ ಚೌಹಾಣ್- ಮಧ್ಯಾಹ್ನ 12:30 ಗಂಟೆಗೆ

ಶೂಟಿಂಗ್‌: ಅನಂತ್ ಜೀತ್ ಸಿಂಗ್ ನರುಕಾ- ಮಧ್ಯಾಹ್ನ 12:30 ಗಂಟೆಗೆ

ಶೂಟಿಂಗ್‌: ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್‌ - ಮನು ಭಾಕರ್- ಮಧ್ಯಾಹ್ನ 1 ಗಂಟೆಗೆ

ಆರ್ಚರಿ: ಭಜನ್ ಕೌರ್ vs ಮಿಚೆಲ್ ಕ್ರೊಪ್ಪೆನ್ (ಜರ್ಮನಿ) - ಮಧ್ಯಾಹ್ನ 1:52 ಗಂಟೆಗೆ

ಆರ್ಚರಿ: ದೀಪಿಕಾ ಕುಮಾರಿ vs ದಯಾನಂದ ಚೊಯಿರುನಿಸಾ (ಇಂಡೋನೇಷಿಯಾ)- ಮಧ್ಯಾಹ್ನ 2:05 ಗಂಟೆಗೆ

ಸೇಲಿಂಗ್‌: ವಿಷ್ಣು ಸರವಣನ್- ಮಧ್ಯಾಹ್ನ 3:45 ಗಂಟೆಗೆ

ಸೇಲಿಂಗ್‌: ನೇತ್ರಾ ಕುಮನನ್- ಸಂಜೆ 5:55 ಗಂಟೆಗೆ

ಬಾಕ್ಸಿಂಗ್: ಪುರುಷರ 71 ಕೆ.ಜಿ ಕ್ವಾರ್ಟರ್ ಫೈನಲ್ - ನಿಶಾಂತ್ ದೇವ್ vs ಮಾರ್ಕೊ ಅಲೋನ್ಸೊ ವರ್ಡೆ ಅಲ್ವಾರೆಜ್ (ಮೆಕ್ಸಿಕೊ)- ಆಗಸ್ಟ್‌ 4ರಂದು ಬೆಳಗಿನ ಜಾವ- 12:18 AM

Story first published: Friday, August 2, 2024, 19:59 [IST]
Other articles published on Aug 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+