Paris Olympics 2024: ಒಲಿಂಪಿಕ್ಸ್‌ನ ನಾಲ್ಕನೇ ದಿನದ ಭಾರತದ ಸಂಪೂರ್ಣ ವೇಳಾಪಟ್ಟಿ ತಿಳಿಯಿರಿ
ಜುಲೈ 30 ಮಂಗಳವಾರ, ಪ್ಯಾರಿಸ್ ಒಲಿಂಪಿಕ್ಸ್ 202ರ ಮೂರನೇ ದಿನ ಭಾರತಕ್ಕೆ ಉತ್ತಮವಾಗಿರಲಿಲ್ಲ. ಶೂಟಿಂಗ್‌ನಲ್ಲಿ ಭಾರತ ಎರಡು ಪದಕಗಳನ್ನು ಗೆಲ್ಲಬಹುದಿತ್ತು. ಆದರೆ ರಮಿತಾ ಜಿಂದಾಲ್ ಮತ್ತು ಅರ್ಜುನ್ ಬಾಬುತಾ ತಮ್ಮ ತಮ್ಮ ಪಂದ್ಯಗಳನ್ನು ಫೈನಲ್‌ನಲ್ಲಿ ಕಳೆದುಕೊಂಡರು.
ಇದಾದ ಬಳಿಕ ಭಾರತ ಎರಡು ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿತು. ಆದರೆ ಜುಲೈ 30 ರ ಪ್ಯಾರಿಸ್ ಒಲಿಂಪಿಕ್ಸ್‌ನ ನಾಲ್ಕನೇ ದಿನ, ಭಾರತವು ತನ್ನ ಕ್ರೀಡಾಪಟುಗಳಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಭಾರತದ ನಾಲ್ಕನೇ ದಿನದ ಸಂಪೂರ್ಣ ವೇಳಾಪಟ್ಟಿಯ ಇಲ್ಲಿದೆ ಮಾಹಿತಿ.

ಶೂಟಿಂಗ್ : ಈಗಾಗಲೇ ಮಹಿಳೆಯರ ಸಿಂಗಲ್ಸ್ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ಇದೀಗ ತನ್ನ ಪಾಲುದಾರ ಸರಬ್ಜೋತ್ ಸಿಂಗ್ ಅವರೊಂದಿಗೆ ಮನು ಭಾಕರ್ ಇಂದು (ಜುಲೈ 30) 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಇದಲ್ಲದೆ, ಟ್ರ್ಯಾಪ್ ಮಹಿಳೆಯರ ಅರ್ಹತಾ ಪಂದ್ಯದಲ್ಲಿ ಭಾರತದ ಪರ ಶ್ರೇಯಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ ತಮ್ಮ ಎದುರಾಳಿಗಳೊಂದಿಗೆ ಕಣಕ್ಕಿಳಿಯಲಿದ್ದಾರೆ. ಟ್ರ್ಯಾಪ್ ಪುರುಷರ ಅರ್ಹತೆಯ ಎರಡನೇ ದಿನದಲ್ಲಿ ಪೃಥ್ವಿರಾಜ್ ತೊಂಡೈಮಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಟ್ರ್ಯಾಪ್ ಮಹಿಳೆಯರ ಅರ್ಹತೆ (ಶ್ರೇಯಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ) - ಮಧ್ಯಾಹ್ನ 12:30
ಟ್ರ್ಯಾಪ್ ಪುರುಷರ ಅರ್ಹತಾ ದಿನ 2 (ಪೃಥ್ವಿರಾಜ್ ತೊಂಡೈಮಾನ್) - ಮಧ್ಯಾಹ್ನ 12:30
10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಪದಕ ಪಂದ್ಯ (ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್) - ಮಧ್ಯಾಹ್ನ 1 PM
ಹಾಕಿ : ಭಾರತ ಪುರುಷರ ಹಾಕಿ ತಂಡ ಇಂದು ಗುಂಪು ಹಂತದ ತನ್ನ ಮೂರನೇ ಪಂದ್ಯದಲ್ಲಿ ಆಡಲಿದೆ. ಬಿ ಗುಂಪಿನಲ್ಲಿರುವ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಕಣಕ್ಕೀಳಿಯಲಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದರೆ, ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೋಲನುಭವಿಸಬೇಕಾಯಿತು.
ಪುರುಷರ ಹಾಕಿ ಗುಂಪು ಹಂತದ ಪಂದ್ಯ (ಭಾರತ ವಿರುದ್ಧ ಐರ್ಲೆಂಡ್) - ಸಂಜೆ 4:45
ಆರ್ಚರಿ: ಭಾರತದ ಅಂಕಿತಾ ಭಕ್ತ ಮತ್ತು ಭಜನ್ ಕೌರ್ ಮಹಿಳೆಯರ ಸಿಂಗಲ್ಸ್‌ನ 32ನೇ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ. 41ನೇ ಪಂದ್ಯದಲ್ಲಿ ಅಂಕಿತಾ ಪೋಲೆಂಡ್‌ನ ವಯೊಲೆಟಾ ಮಸ್ಜೋರ್ ಅವರೊಂದಿಗೆ ಆಡಲಿದ್ದರೆ, ಭಜನ್ ಇಂಡೋನೇಷ್ಯಾದ ಕಮಾಲ್ ಸೈಫಾ ನುರಾಫಿಫಾ ಅವರೊಂದಿಗೆ ಸೆಣಸಾಡಲಿದ್ದಾರೆ.
ಭಾರತದ ಇಬ್ಬರು ಅಥ್ಲೀಟ್‌ಗಳಿಗೆ ಇದು ಎಲಿಮಿನೇಷನ್ ಪಂದ್ಯಗಳಾಗಿದ್ದು, ಸೋತ ತಂಡ ಇಲ್ಲಿಂದ ಹೊರಬೀಳಲಿದೆ. ಪುರುಷರ ಸಿಂಗಲ್ಸ್ 32ನೇ ಸುತ್ತಿನ ಎಲಿಮಿನೇಷನ್ ಪಂದ್ಯದಲ್ಲಿ, ಧೀರಜ್ ಬೊಮ್ಮದೇವರ ಅವರು ಜೆಕಿಯಾದ ಆಡಮ್ ಲೀ ಅವರೊಂದಿಗೆ ಆಡಲಿದ್ದಾರೆ.
ಮಹಿಳೆಯರ ಸಿಂಗಲ್ಸ್ 32ನೇ ಸುತ್ತಿನ ಪಂದ್ಯ (ಅಂಕಿತಾ ಭಕ್ತ) - ಸಂಜೆ 5:14 PM
ಮಹಿಳೆಯರ ಸಿಂಗಲ್ಸ್ 32ನೇ ಸುತ್ತಿನ ಎಲಿಮಿನೇಷನ್ ಪಂದ್ಯ (ಭಜನ್ ಕೌರ್) - ಸಂಜೆ 5:27
ಪುರುಷರ ಸಿಂಗಲ್ಸ್ 32ನೇ ಸುತ್ತಿನ ಎಲಿಮಿನೇಷನ್ ಪಂದ್ಯ (ಧೀರಜ್ ಬೊಮ್ಮದೇವರ) - ರಾತ್ರಿ 10:46
ಬ್ಯಾಡ್ಮಿಂಟನ್ : ಭಾರತದ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನ ಗುಂಪು ಹಂತದಲ್ಲಿ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಅವರೊಂದಿಗೆ ತಮ್ಮ ಪಂದ್ಯವನ್ನು ಆಡಬೇಕಾಗಿದೆ.
ಭಾರತದ ಪರ ಮಹಿಳೆಯರ ಡಬಲ್ಸ್‌ನ ಗುಂಪು ಹಂತದ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರು ಆಸ್ಟ್ರೇಲಿಯಾದ ಸೆಟಿಯಾನಾ ಮಪಾಸಾ ಮತ್ತು ಅಜೆಲ್ ಯು ಜೊತೆ ಹೋರಾಡಲಿದ್ದಾರೆ.
ಪುರುಷರ ಡಬಲ್ಸ್ ಗುಂಪು ಹಂತ - (ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ) - ಸಂಜೆ 5:30
ಮಹಿಳೆಯರ ಡಬಲ್ಸ್ ಗುಂಪು ಹಂತ - (ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ) - ಸಂಜೆ 6:20
ಬಾಕ್ಸಿಂಗ್ : ಭಾರತದ ಪರ ಪುರುಷರ 51 ಕೆಜಿ ಬಾಕ್ಸಿಂಗ್ ಪಂದ್ಯದ 16ನೇ ಸುತ್ತಿನ ಪಂದ್ಯದಲ್ಲಿ ಅಮಿತ್ ಪಂಘಲ್ ಕಾಣಿಸಿಕೊಳ್ಳಲಿದ್ದಾರೆ. ಪಂಘಲ್ ಅವರು ಜಾಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ ಅವರೊಂದಿಗೆ ಸೆಣಸಾಡಲಿದ್ದಾರೆ.
ಮಹಿಳೆಯರ 57 ಕೆಜಿ ವಿಭಾಗದ 32ನೇ ಸುತ್ತಿನ ಪಂದ್ಯದಲ್ಲಿ ಜಾಸ್ಮಿನ್ ಲಂಬೋರಿಯಾ ಅವರು ಫಿಲಿಪ್ಪೀನ್ಸ್‌ನ ನೆಸ್ತಿ ಪೆಟೆಸಿಯೊ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
ದಪುರುಷರ 51 ಕೆಜಿ 16ನೇ ಸುತ್ತಿನ ಪಂದ್ಯ - (ಅಮಿತ್ ಪಂಘಲ್) - ಸಂಜೆ 7:16
ಮಹಿಳೆಯರ 57 ಕೆಜಿ 32ನೇ ಸುತ್ತಿನ ಪಂದ್ಯ - (ಜಾಸ್ಮಿನ್ ಲಂಬೋರಿಯಾ) - ರಾತ್ರಿ 9:24
ಬಾಕ್ಸಿಂಗ್ ದಿನದ ಅಂತಿಮ ಪಂದ್ಯದಲ್ಲಿ, ಪ್ರೀತಿ ಪವಾರ್ ಮಹಿಳೆಯರ 54 ಕೆಜಿ ಸುತ್ತಿನ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಅರಿಯಾಸ್ ಕ್ಯಾಸ್ಟನೆಡಾ ಯೆನಿ ಮಾರ್ಸೆಲಾ ಅವರೊಂದಿಗೆ ಆಡಲಿದ್ದಾರೆ. ಇದು ಜುಲೈ 30 ರ ವೇಳಾಪಟ್ಟಿಯ ಕೊನೆಯ ಪಂದ್ಯವಾಗಿದ್ದು, ಜುಲೈ 31 ರಂದು ಮಧ್ಯಾಹ್ನ 1:22 ಕ್ಕೆ ನಡೆಯಲಿದೆ.
ಮಹಿಳೆಯರ 54 ಕೆಜಿ 16ನೇ ಸುತ್ತಿನ ಪಂದ್ಯ (ಪ್ರೀತ್ ಪವಾರ್) - ಮಧ್ಯಾಹ್ನ 1:22
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications