For Quick Alerts
ALLOW NOTIFICATIONS  
For Daily Alerts

Paris Olympics 2024: ಒಲಿಂಪಿಕ್ಸ್‌ನ ಎರಡನೇ ದಿನದ ಭಾರತದ ಸಂಪೂರ್ಣ ವೇಳಾಪಟ್ಟಿ ತಿಳಿಯಿರಿ

ಜುಲೈ 28 ಭಾನುವಾರ, ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ದಿನ ಭಾರತದ ಪ್ರದರ್ಶನವು ಮಿಶ್ರವಾಗಿದೆ. ಮನು ಭಾಕರ್ ಅವರು ಮೊದಲ ದಿನ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ಗೆ ಪ್ರವೇಶಿಸಿದರೆ, ಬ್ಯಾಡ್ಮಿಂಟನ್ ಪದಕ ಸ್ಪರ್ಧಿಗಳಾದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಮತ್ತು ಲಕ್ಷ್ಯ ಸೇನ್ ಅವರೂ ಗೆಲುವಿನ ನಗೆ ಬೀರಿದ್ದಾರೆ.

ಇನ್ನೊಂದೆಡೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದ ಹಾಕಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ತಂಡ ಗೆದ್ದಿದೆ. ಇಂದು ಅಂದರೆ ಎರಡನೇ ದಿನವಾದ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತದ ಯಾವ ಕ್ರೀಡಾಪಟುಗಳು ಯಾರ ವಿರುದ್ಧ ಮತ್ತು ಯಾವಾಗ ಯಾವ ಕ್ರೀಡೆ ಆಡಲಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

India schedule for second day of Paris Olympics 2024

ಜುಲೈ 28 ರಂದು ಭಾರತೀಯ ಅಥ್ಲೀಟ್‌ಗಳ ಸ್ಪರ್ಧೆ

ರೋಯಿಂಗ್ : ಬಲರಾಜ್ ಪನ್ವಾರ್ ಭಾರತಕ್ಕಾಗಿ ರೋಯಿಂಗ್ ಈವೆಂಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಯಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ರೆಪಿಚೇಜ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಬಾಲರಾಜ್ 7:07.11 ನಿಮಿಷದಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದರು. ಈಗ ಅವರು ಕಂಚಿನ ಪದಕಕ್ಕೆ ತಮ್ಮ ಹೋರಾಟ ನಡೆಸುವುದನ್ನು ಕಾಣಬಹುದು. ಮಧ್ಯಾಹ್ನ- 12:30

ಶೂಟಿಂಗ್ : ಭಾರತದ ವಲರಿವನ್ ಎಲವೆನಿಲ್ ಮತ್ತು ರಮಿತಾ ರಮಿತಾ ಅವರು 10 ಮೀಟರ್ ಏರ್ ರೈಫಲ್ ಶೂಟಿಂಗ್ ಮಹಿಳೆಯರ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಸಂದೀಪ್ ಸಿಂಗ್ ಮತ್ತು ಅರ್ಜುನ್ ಬಾಬುತಾ 10 ಮೀಟರ್ ಏರ್ ರೈಫಲ್ ಶೂಟಿಂಗ್ ಪುರುಷರ ಅರ್ಹತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವರಿಬ್ಬರೂ ಭಾರತಕ್ಕೆ ಪದಕದ ಭರವಸೆ ಕಾಯ್ದುಕೊಳ್ಳಲಿದ್ದಾರೆ. ನಂತರ ಬೇರೆ ಬೇರೆ ಸಮಯದಲ್ಲಿ ಅಂತಿಮ ಪಂದ್ಯಗಳು ನಡೆಯಲಿವೆ.

10ಮೀ ಏರ್ ರೈಫಲ್ (ಮಹಿಳೆಯರ ಅರ್ಹತೆ) - ಮಧ್ಯಾಹ್ನ 12:45
10 ಮೀ ಏರ್ ಪಿಸ್ತೂಲ್ (ಪುರುಷರ ಅರ್ಹತೆ) - ಮಧ್ಯಾಹ್ನ 1
10ಮೀ ಏರ್ ರೈಫಲ್ (ಪುರುಷರ ಫೈನಲ್) - ಮಧ್ಯಾಹ್ನ 2:45
10ಮೀ ಏರ್ ಪಿಸ್ತೂಲ್ (ಮಹಿಳೆಯರ ಫೈನಲ್) - ಮಧ್ಯಾಹ್ನ 3:30

ಬ್ಯಾಡ್ಮಿಂಟನ್ : ಪ್ಯಾರಿಸ್ ಒಲಿಂಪಿಕ್ಸ್‌ನ ಎರಡನೇ ದಿನ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಆಕ್ಷನ್ ಪ್ಯಾಕ್ಡ್ ದಿನವಾಗಲಿದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಜರ್ಮನಿಯ ರೋತ್ ಫ್ಯಾಬಿಯನ್ ಅವರೊಂದಿಗೆ ಆಡಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಕಣಕ್ಕೀಳಿಯುತ್ತಿದ್ದಾರೆ.

ಮಹಿಳಾ ಸಿಂಗಲ್ಸ್ - ಪಿವಿ ಸಿಂಧು: ಮಧ್ಯಾಹ್ನ 12
ಪುರುಷರ ಸಿಂಗಲ್ಸ್ - ಎಚ್.ಎಸ್.ಪ್ರಣೋಯ್: ರಾತ್ರಿ 8.30

ಟೇಬಲ್ ಟೆಅಸ್ : ಟೇಬಲ್ ಟೆನಿಸ್‌ ಮಹಿಳಾ ಸಿಂಗಲ್ಸ್‌ನಲ್ಲಿ ಸ್ವೀಡನ್‌ನ ಕಲ್ಬರ್ಗ್ ಕ್ರಿಸ್ಟಿನಾ ವಿರುದ್ಧ ಭಾರತದ ಅಕುಲಾ ಶ್ರೀಜಾ ಅವರು ಆಡಲಿದ್ದಾರೆ. ಭಾರತದ ಮಣಿಕಾ ಬಾತ್ರಾ ಅವರು ಗ್ರೇಟ್ ಬ್ರಿಟನ್‌ನ ಹರ್ಸಿ ಅನ್ನಾ ಅವರೊಂದಿಗೆ 64 ರ ಮಹಿಳೆಯರ ಸುತ್ತಿನಲ್ಲಿ ಆಡಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಅಚಂತಾ ಶರತ್ ಕಮಲ್ ಸ್ಲೊವೇನಿಯಾದ ಕೊಝುಲ್ ಡೆನಿ ಅವರೊಂದಿಗೆ ತಮ್ಮ ಪಂದ್ಯವನ್ನು ಆಡಲಿದ್ದಾರೆ.

ಟೇಬಲ್ ಟೆನ್ನಿಸ್ - ಮಹಿಳೆಯರ 64ರ ಸುತ್ತಿನ ಪಂದ್ಯ - ಮಧ್ಯಾಹ್ನ 2:15
ಟೇಬಲ್ ಟೆನ್ನಿಸ್ - ಪುರುಷರ 64ರ ಸುತ್ತಿನ ಪಂದ್ಯ - ಮಧ್ಯಾಹ್ನ 3
ಟೇಬಲ್ ಟೆನಿಸ್ - ಮಹಿಳೆಯರ 64ರ ಸುತ್ತಿನ ಪಂದ್ಯ - ಸಂಜೆ 4:30 pm

ಬಾಕ್ಸಿಂಗ್ : ಭಾರತದ ಬಾಕ್ಸರ್ ನಿಖತ್ ಜರೀನ್ ಅವರು ಮಹಿಳೆಯರ 50 ಕೆಜಿ ವಿಭಾಗದ 32 ರ ಸುತ್ತಿನಲ್ಲಿ ಜರ್ಮನಿಯ ಕ್ಲೋಟ್ಜರ್ ಮ್ಯಾಕ್ಸಿ ಕ್ಯಾರಿನಾ ಅವರೊಂದಿಗೆ ಆಡಲಿದ್ದಾರೆ.

ಮಹಿಳೆಯರ 50 ಕೆಜಿ - ಮಧ್ಯಾಹ್ನ 3:50

ಆರ್ಚರಿ : ದೀಪಿಕಾ ಕುಮಾರಿ ನಾಯಕತ್ವದ ಭಾರತ ತಂಡ ಆರ್ಚರಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಭಾರತ ಪರ ಅಂಕಿತಾ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಇರಲಿದ್ದಾರೆ.

ಮಹಿಳಾ ತಂಡ- ಆರ್ಚರಿ- ಸಂಜೆ 5.45

ಈಜು : ಈಜು ಸ್ಪರ್ಧೆಯಲ್ಲಿ ಭಾರತದ ಶ್ರೀಹಿರ್ ನಟರಾಜ್ ಮತ್ತು ಧನಿಧಿ ದೇಸಿಂಗು ಭಾರತ ಪರ ಭಾಗವಹಿಸುತ್ತಿದ್ದಾರೆ.

ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ (ಹೀಟ್ 2): ಶ್ರೀಹರಿ ನಟರಾಜ್ -- ಮಧ್ಯಾಹ್ನ 3.16
ಮಹಿಳೆಯರ 200 ಮೀ ಫ್ರೀಸ್ಟೈಲ್ (ಹೀಟ್ 1): ಧಿನಿಧಿ ದೇಸಿಂಗು -- ಮಧ್ಯಾಹ್ನ 3.30

Story first published: Sunday, July 28, 2024, 11:30 [IST]
Other articles published on Jul 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+