Paris Olympics 2024: ಒಲಿಂಪಿಕ್ಸ್‌ನ 7ನೇ ದಿನದ ಭಾರತದ ಸಂಪೂರ್ಣ ವೇಳಾಪಟ್ಟಿ ತಿಳಿಯಿರಿ
ಆಗಸ್ಟ್ 1 ಗುರುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಏಳನೇ ದಿನವಾದ ನಾಳೆ (ಆಗಸ್ಟ್ 2) ಭಾರತೀಯ ಅಥ್ಲೀಟ್ಸ್ ಯಾವುದೇ ಪದಕದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿಲ್ಲ. ಆದರೆ ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತವು ಪದಕಗಳನ್ನು ಜೀವಂತವಾಗಿರಿಸುಕೊಳ್ಳುವ ಸ್ಪರ್ಧೆಗಳನ್ನು ಎದುರಿಸಲಿದೆ.
ಈವರೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಮೂರು ಕಂಚಿನ ಪದಕಗಳನ್ನು ಮಾತ್ರ ಗೆದ್ದಿದ್ದಾರೆ. ಅದು ಶೂಟಿಂಗ್ ಸ್ಪರ್ಧೆಯಲ್ಲಿ ಪದಕಗಳು ಬಂದಿರುವ ವಿಶೇಷವಾಗಿದೆ. ಆಗಸ್ಟ್ 2 ರಂದು ನಡೆಯಲಿರುವ ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಗಳ ವೇಳಾಪಟ್ಟಿ ಇಲ್ಲಿದೆ.

ಆಗಸ್ಟ್ 2 ರಂದು ಭಾರತೀಯ ಅಥ್ಲೀಟ್‌ಗಳ ಸ್ಪರ್ಧೆ
ಮಹಿಳೆಯರ 5000ಮೀ ಅಥ್ಲೆಟಿಕ್ಸ್: ಅಂಕಿತಾ ಧ್ಯಾನಿ, ಪಾರುಲ್ ಚೌಧರಿ- ಬೆಳಿಗ್ಗೆ 9.40 ಗಂಟೆಗೆ
ಪುರುಷರ ಶಾಟ್‌ಪುಟ್ ಸ್ಪರ್ಧೆ: ತಜಿಂದರ್‌ಪಾಲ್ ಸಿಂಗ್ ತೂರ್- ಬೆಳಿಗ್ಗೆ 11.40 ಗಂಟೆಗೆ
ಪುರುಷರ ಗಾಲ್ಫ್ : ಶುಭಂಕರ್ ಶರ್ಮಾ- ಮಧ್ಯಾಹ್ನ 12:30 ಗಂಟೆಗೆ
ಮಹಿಳೆಯರ 25 ಮೀ ಪಿಸ್ತೂಲ್ ಕ್ವಾಲಿಫೈಯರ್: ಇಶಾ ಸಿಂಗ್- ಮಧ್ಯಾಹ್ನ 12.30 ಗಂಟೆಗೆ
ಆರ್ಚರಿ ಮಿಶ್ರ ಡಬಲ್ಸ್: ಭಾರತ (ತಿರಜ್ ಪೊಮ್ಮರತೇವರ - ಅಂಕಿತಾ) vs ಇಂಡೋನೇಷ್ಯಾ (ಆರಿಫ್ - ದ್ಯಾನಂದ) - ಮಧ್ಯಾಹ್ನ 1.20 ಗಂಟೆಗೆ
ಪುರುಷರ ರೋಯಿಂಗ್ ಫೈನಲ್ : ಬಲರಾಜ್ ಪನ್ವಾರ್- 1:48 ಗಂಟೆಗೆ
ಜೂಡೋ: ಮಹಿಳೆಯರ 78 ಕೆಜಿ ಪ್ರಿ-ಕ್ವಾರ್ಟರ್ ಫೈನಲ್ - ಭಾರತದ ದುಲಿಕಾ ಮಾನ್ vs ಕ್ಯೂಬಾದ ಒರ್ಟಿಜ್- ಮಧ್ಯಾಹ್ನ 2.12 ಗಂಟೆಗೆ
ಹಾಕಿ: ಭಾರತ vs ಆಸ್ಟ್ರೇಲಿಯಾ- ಸಂಜೆ 4.30 ಗಂಟೆಗೆ
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್: ಲಕ್ಷ್ಯ ಸೇನ್ vs ತೈಪೆಯ ಚೌ ತಿಯೆನ್ ಚೆನ್ - ಸಂಜೆ 6.30 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications