Taiwan Athletics Open 2024: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ
ಜೂನ್ 1 ಶನಿವಾರ, ತೈವಾನ್ ಅಥ್ಲೆಟಿಕ್ಸ್ ಓಪನ್ 2024ರ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಡಿಪಿ ಮನು ಅವರು ದಾಖಲೆ ನಿರ್ಮಿಸಿದ್ದಾರೆ.
ಡಿಪಿ ಮನು ಅವರು 81.58 ಮೀಟರ್‌ಗಳ ಅತ್ಯುತ್ತಮ ಎಸೆತಗಳೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.ಈ ಕೂಟದಲ್ಲಿ ಭಾಗವಹಿಸಿದ್ದ 12 ಸ್ಪರ್ಧಿಗಳ ಪೈಕಿ ಮನು ಒಬ್ಬರೇ ವಿದೇಶಿ ಸ್ಪರ್ಧಿಯಾಗಿದ್ದರು. ಮನು ಅವರು ಮೊದಲು 78.32 ಮೀಟರ್ ಎಸೆಯುವ ಮೂಲಕ ಸ್ಪರ್ಧೆಯನ್ನು ಪ್ರಾರಂಭಿಸಿದರು.

ಆದರೆ ಮೂರನೇ ಪ್ರಯತ್ನದಲ್ಲಿ 80.59 ಮೀಟರ್‌ಗೆ ಸುಧಾರಿಸಿದರು. ಬಳಿಕ ಮನು ನಾಲ್ಕನೇ ಎಸೆತದಲ್ಲಿ ವಿಫಲರಾದರೂ ಮುಂದಿನ 5ನೇ ಪ್ರಯತ್ನದಲ್ಲಿ 81.52 ಮೀಟರ್ ದೂರ ಜಾವೆಲಿನ್ ಎಸೆದರು. ಆರನೇ ಮತ್ತು ಅಂತಿಮ ಪ್ರಯತ್ನದಲ್ಲಿ 81.58 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ಎಸೆಯುವ ಮೂಲಕ ತಮ್ಮ ಹಿಂದಿನ ದಾಖಲೆಯನ್ನು ಮುರಿದರು.
ಹೀಗಾಗಿ ಸ್ಪರ್ಧೆಯಲ್ಲಿ ಅಗ್ರ ಸ್ಥಾನವನ್ನು ಪಡೆದ ಮನು ಚಿನ್ನದ ಪದಕ ಗೆದ್ದರು. ಚೀನದ ತೈಪೆಯ ಚಾವೊ ತ್ಸುನ್ ಚೆಂಗ್ 76.21 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರೆ, ಅವರ ದೇಶದ ಮತ್ತೋರ್ವ ಆಟಗಾರ ಚಾವೊ-ಹಾಂಗ್ ಹುವಾಂಗ್ 71.24 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಗೆದ್ದರು.
ಮನು ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ 82.06 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ 82.27 ಮೀಟರ್ ಎಸೆದು ಚಿನ್ನದ ಪದಕ ಕೈ ವಶ ಮಾಡಿಕೊಂಡಿಕೊಂಡಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಮನು ಇನ್ನೂ 85.50 ಮೀಟರ್‌ಗಳ ಅರ್ಹತಾ ಮಾರ್ಕ್ ಅನ್ನು ಪೂರೈಸಬೇಕಾಗಿದೆ. ತೈವಾನ್ ಅಥ್ಲೆಟಿಕ್ಸ್ ಓಪನ್ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್‌ನಲ್ಲಿ ಕಂಚಿನ ಮಟ್ಟದ ಪಂದ್ಯಾವಳಿಯಾಗಿದ್ದು, ಅದು ಪ್ರಮುಖ ಶ್ರೇಯಾಂಕಗಳನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications