Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kho Kho World Cup: ಸೆಮಿಫೈನಲ್‌ ಹಂತ ಪ್ರವೇಶಿಸಿದ ಭಾರತ ಪುರುಷರ ಹಾಗೂ ಮಹಿಳಾ ತಂಡ

ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಖೋ ಖೋ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಟೂರ್ನಿಯ ಸೆಮಿಫೈನಲ್ ಹಂತ ಪ್ರವೇಶಿಸಿವೆ. ಭಾರತ ಪುರುಷರು 100-40 ಅಂಕಗಳಿಂದ ಶ್ರೀಲಂಕಾ ವಿರುದ್ಧ ಗೆದ್ದು ಸೆಮಿಫೈನಲ್ಸ್‌ಗೆ ಲಗ್ಗೆ ಇಟ್ಟಿದ್ದಾರೆ. ಇನ್ನು ಭಾರತ ಮಹಿಳಾ ತಂಡ 109-16 ಅಂಕಗಳ ಅಂತರದಿಂದ ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಶ್ಯಪ್‌, ಪ್ರತೀಕ್‌ ವೈಕರ್‌ ಮತ್ತು ಆದಿತ್ಯ ಗನ್ಪುಲೆ ಅವರ ಅಮೋಘ ಆಟದ ನೆರವಿನಿಂದ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿತು. ಮೊದಲಾವಧಿಯಲ್ಲಿ ಲಂಕಾ ಅಂಕಗಳನ್ನು ಗಳಿಸಲು ಟೀಮ್ ಇಂಡಿಯಾ ಬಿಡಲಿಲ್ಲ. ಎರಡನೇ ಅವಧಿಯ ಆಟದಲ್ಲಿ ಶ್ರೀಲಂಕಾ ಭಾರತಕ್ಕೆ ಭರ್ಜರಿ ಪೈಪೋಟಿ ನೀಡಿತು. ಈ ಅವಧಿಯಲ್ಲಿ ಶ್ರೀಲಂಕಾದ ದಾಳಿಕೋರರು ಸ್ಥಿರ ಪ್ರದರ್ಶನ ನೀಡಿದ್ದರಿಂದ ಪಂದ್ಯ ರೋಚಕತೆ ಹೆಚ್ಚಿಸಿತು. ಪ್ರವಾಸಿ ತಂಡವನ್ನು ಆತಿಥೇಯ ತಂಡ ಬಹುವಾಗಿ ಕಾಡಿತು. ಪರಿಣಾಮ ಮೂರನೇ ಅವಧಿಯ ಆರಂಭದಲ್ಲಿ ಪುಟಿದೇಳಲು ಕಾರಣವಾಯಿತು.

India Storms Into Kho Kho World Cup Semi-Finals with Dominant Wins in Quarterfinals

ಪಂದ್ಯದ ಯಾವುದೇ ಹಂತದಲ್ಲೂ ಲಂಕಾ ತಂಡವನ್ನು ಕಂ ಬ್ಯಾಕ್‌ ಮಾಡಲು ಬಿಡಲೇ ಇಲ್ಲ. ಪಂದ್ಯದಲ್ಲಿ ಲಂಕಾ ಭರ್ಜರಿ ಕಂ ಬ್ಯಾಕ್ ಮಾಡುವ ಸೂಚನೆ ನೀಡಿದರೂ, ಅದು ಸಾಕಾಗಲಿಲ್ಲ. ಮೂರನೇ ಅವಧಿಯಲ್ಲೂ ಟೀಮ್ ಇಂಡಿಯಾ ಸ್ಥಿರ ಆಟದ ಪ್ರದರ್ಶನ ನೀಡಿ ಅಂಕಗಳನ್ನು ಗುಡ್ಡೆ ಹಾಕಿ ಲಂಕಾದ ಆಸೆಗೆ ಕೊಳ್ಳಿ ಇಟ್ಟಿತು. ಅಂತಿಮವಾಗಿ ಭಾರತ 100-40 ಅಂಕಗಳೊಂದಿಗೆ ಜಯ ಸಾಧಿಸಿ ಸುಲಭವಾಗಿ ಸೆಮಿಫೈನಲ್ ಹಂತ ಪ್ರವೇಶಿಸಿತು.

ಭಾರತ ಮಹಿಳೆಯ ಭರ್ಜರಿ ಸಾಧನೆ

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಸಹ ಸ್ಥಿರ ಪ್ರದರ್ಶನ ನೀಡಿತು. ಎಂಟರ ಘಟ್ಟದ ಪಂದ್ಯದಲ್ಲಿ ಭಾರತ 109-16 ಅಂಕಗಳ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

India Storms Into Kho Kho World Cup Semi-Finals with Dominant Wins in Quarterfinals

ನಾಯಕಿ ಪ್ರಿಯಾಂಕಾ ಇಂಗಳೆ ನೇತೃತ್ವದ ತಂಡವು ಎರಡನೇ ಅವಧಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿತು. ಇದರೊಂದಿಗೆ ಆತಿಥೇಯ ತಂಡವು 100ಕ್ಕೂ ಅಧಿಕ ಅಂಕಗಳನ್ನು ಗಳಿಸುವ ಗಮನಾರ್ಹ ಸಾಧನೆ ಮಾಡಿತು. ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡ ಸೆಮಿಫೈನಲ್ ಪ್ರವೇಶಿಸಿತು

ಪಂದ್ಯದ ಎಲ್ಲ ಹಂತದಲ್ಲೂ ಟೀಮ್ ಇಂಡಿಯಾ ಆಟಗಾರ್ತಿಯರು ಅಮೋಘ ಪ್ರದರ್ಶನ ನೀಡಿದರು. ಅಲ್ಲದೆ ನೂರಕ್ಕೂ ಹೆಚ್ಚು ಅಂಕಗಳನ್ನು ಕಲೆ ಹಾಕಿದರು. ಈ ಪಂದ್ಯದಲ್ಲಿ ಸ್ಕೈ ಡೇವ್‌ ಖ್ಯಾತಿಯ ರೇಷ್ಮಾ ರಾಥೋಡ್‌ ತಂಡ ಸತತ ಐದನೇ ಬಾರಿಗೆ ತಂಡ 100 ಅಂಕಗಳನ್ನು ಗಳಿಸಲು ನೆರವಾದರು. 3ನೇ ಅವಧಿಯ ಅಂತ್ಯಕ್ಕೆ ಭಾರತ ಸ್ಕೋರ್‌ 106-8 ಮುನ್ನಡೆ ಸಾಧಿಸಿತ್ತು. ನಾಲ್ಕನೇ ಅವಧಿಯಲ್ಲೂ ಭಾರತ ಪಂದ್ಯದ ಮೇಲೆ ಸಾಧಿಸಿದ್ದ ಹಿಡಿತವನ್ನು ಕಡಿಮೆ ಮಾಡಲಿಲ್ಲ. ಪರಿಣಾಮ ಸುಲಭ ಗೆಲುವು ದಾಖಲಿಸಿತು.

Story first published: Friday, January 17, 2025, 23:45 [IST]
Other articles published on Jan 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+