Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಈಜು ಚಾಂಪಿಯನ್‌ಶಿಪ್‌ ಆಯೋಜಿಸಲಿರುವ ಭಾರತ

ಭಾರತ ಈ ವರ್ಷ ಮತ್ತೊಂದು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಇದೇ ವರ್ಷದ ಅಕ್ಟೋಬರ್‌ನಲ್ಲಿ ಏಷ್ಯನ್‌ ಈಜು ಚಾಂಪಿಯನ್‌ಶಿಪ್‌ ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಮೂಲಕ ಭಾರತ ತನ್ನ ಈಜುಪಟುಗಳಿಗೆ ವೇದಿಕೆ ಕಲ್ಪಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ಭಾರತದ ಈಜು ಪಟುಗಳು ಚೀನಾ, ಜಪಾನ್‌, ಕೊರಿಯಾನಂತಹ ಸ್ಟಾರ್ ಈಜು ಪಟುಗಳ ಜೊತೆ ಸ್ಪರ್ಧೆ ನಡೆಸಲಿದ್ದಾರೆ.

ಈ ಸ್ಪರ್ಧೆಗಾಗಿ ಅಹಮದಾಬಾದ್‌ ಸಜ್ಜಾಗುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಈಜು ಪಟುಗಳು ಸಹ ತಯಾರಿ ನಡೆಸಿದ್ದಾರೆ. ನಮ್ಮ ಈಜುಪಟುಗಳು ಈಗಾಗಲೇ ಮಲೇಷ್ಯಾಕ್ಕೆ ಒಂದು ತಿಂಗಳು ತರಬೇತಿಗೆ ಹೋಗಿದ್ದಾರೆ. ಈ ವೇಳೆ ಆಸ್ಟ್ರೇಲಿಯಾದ ತರಬೇತುದಾರ ಭಾರತೀಯ ಈಜು ಪಟುಗಳು ಬೆವರು ಹರಿಸುತ್ತಿದ್ದಾರೆ. ಈ ಈವೆಂಟ್‌ಗಾಗಿ ಸಕಲ ತಯಾರಿ ನಡೆದಿದೆ.

India to Host Asian Swimming Championships in October

ನಮ್ಮ ಈಜು ಪಟುಗಳು ತಮ್ಮ ಕ್ಷಮತೆಯನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆ ಆಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಈವೆಂಟ್‌ನಲ್ಲಿ ನಾವು ಪದಕದ ಆಸೆಯನ್ನು ಕಾಣುತ್ತಿದ್ದೇವು. ಆದರೆ ನಮ್ಮ ಕ್ರೀಡಾ ಪಟುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಎಸ್‌ಎಫ್‌ಐ ಕಾರ್ಯದರ್ಶಿ ಮೋನಲ್ ಚೋಕ್ಷಿ ದಿ ಹಿಂದು ಪತ್ರಿಕೆಗೆ ತಿಳಿಸಿದ್ದಾರೆ.

"ಈಗಾಗಲೇ ನಾವು ವಾಟರ್ ಪೋಲ್ ಕ್ಯಾಂಪ್ ಈ ವರ್ಷದ ಜನೆವರಿಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ನಾವು 14 ಜನ ಹಾಗೂ 4 ಕಾಯ್ದಿರಿಸಿದ ಈಜು ಪಟುಗಳನ್ನು ಸೆಲೆಕ್ಟ್ ಮಾಡಿದ್ದೇವೆ. ನಾವು ಈ ಈಜು ಪಟುಗಳನ್ನು ಯೂರೋಪಕ್ಕೆ ಕಳುಹಿಸಿ ತರಬೇತಿ ನೀಡುವ ಗುರಿಯನ್ನು ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.

ಪದಕದ ನಿರೀಕ್ಷೆ

ನಾವು ಈ ಸ್ಪರ್ಧೆ ತಯಾರಿಗಾಗಿ ನಮ್ಮ ತಂಡದ ಜೊತೆ ಕೆಲಸ ಮಾಡಿದ ಅನುಭವ ಹೊಂದಿರುವ ಕೋಚ್‌ಗಳನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದೇವೆ. ಈಗಾಗಲೇ ಕೋಚ್‌ಗಳನ್ನು ನೇಮಿಸಲಿದ್ದು, ಭಾರತ 1986ರ ನಂತರ ಮೊದಲ ಬಾರಿಗೆ ಏಷ್ಯನ್‌ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದೆ. ಹೀಗಾಗಿ ನಾವು ನಮ್ಮ ತಂಡ ಉತ್ತಮ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟಿದೆ ಎಂದು ಮೋನಲ್ ಚೋಕ್ಷಿ ಹೇಳಿದ್ದಾರೆ.

India to Host Asian Swimming Championships in October

ನಮ್ಮ ನಾಲ್ಕು ಈಜು ಪಟುಗಳಿಂದ ಉತ್ತಮ ನಿರೀಕ್ಷೆ ಹೊಂದಿದ್ದೇವೆ. ಶ್ರೀಹರಿ ನಟರಾಜ್, ಬಿ ರೋಹಿತ್‌ ಉತ್ತಮ ಪ್ರದರ್ಶನ ನೀಡುತ್ತಿದ್ದು ಭರವಸೆ ಮೂಡಿಸಿದ್ದಾರೆ. ಶೋನ್ ಗಂಗೂಲಿ ಮತ್ತು ಆರ್ಯನ್ ನೆಹ್ರಾ ಪದಕದ ಆಸೆ ಚಿಗುರಿಸಿದ್ದಾರೆ. ಎರಡು ತಿಂಗಳ ಕಾಲ ಶಿಬಿರ ನಡೆಸುವ ಪ್ಲ್ಯಾನ್ ಹೊಂದಲಾಗಿದೆ ಎಂದು ಚೋಕ್ಷಿ ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್‌ ಭಾಗವಹಿಸಲಿದ್ದಾರೆ. ಇವರು ಈಗಾಗಲೇ ಭಾರತದ ಪರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಇವರು 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಒಲಿಂಪಿಕ್ಸ್‌ ಅಂಗದಳದಲ್ಲಿ ಕಾಣಿಸಿಕೊಂಡಿದ್ದರು.

Story first published: Saturday, June 28, 2025, 10:03 [IST]
Other articles published on Jun 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+