ಯುವ ಅಥ್ಲೆಟಿಕ್ಸ್: ಕೊನೆ ದಿನ ರಿಲೆಯಲ್ಲಿ ಚಿನ್ನ ಗೆದ್ದ ಭಾರತ
ಬ್ಯಾಂಕಾಕ್, ಮೇ 24 : ಇಲ್ಲಿ ಮಂಗಳವಾರ ಮುಕ್ತಾಯಗೊಂಡ ಏಷ್ಯನ್ ಯುವ ಅಥ್ಲೆಟಿಕ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಮೆಡ್ಲೆ ರಿಲೇ ತಂಡ ಚಿನ್ನ ಗೆದ್ದರು. ಈ ಮೂಲಕ ಭಾರತ ಐದು ಚಿನ್ನ, 5 ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತು.
ಗುರಿಂದರ್ ವೀರ್ ಸಿಂಗ್, ಪಾಲೇಂದರ್ ಕುಮಾರ್, ಮನೀಶ್ ಮತ್ತು ಅಕ್ಷಯ್ ನಾಯ್ನ್ ಅವರನ್ನು ಒಳಗೊಂಡ ತಂಡ 1:55.62 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಕೊರಳೊಡ್ಡಿದರು.

ಚೀನಾ ತೈಪೆ (1:55.71) ಸೆಕೆಂಡ್ ಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ಇನ್ನು ಹಾಂಕಾಂಗ್ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಬಾಲಕರ ವಿಭಾಗದ ಜಾವೆಲಿನ ಥ್ರೋ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಗಳು ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದರು. ಉತ್ತರ ಪ್ರದೇಶದ ರೋಹಿತ್ ಯಾದವ್ (74.30 ಮೀಟರ್ಸ್) ಮತ್ತು ಅವಿನಾಶ್ ಯಾದವ್ (70.09 ಮೀ) ಕ್ರಮವಾಗಿ ಈ ಸಾಧನೆ ಮಾಡಿದರು.
ಈ ಮೂಲಕ ಭಾರತ ಐದು ಚಿನ್ನ, 5 ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತು. 16 ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚಿನ ಪದಕ ಗೆದ್ದ ಚೀನಾ ಪ್ರಥಮ ಸ್ಥಾನ ಗಳಿಸಿದರೆ, ಆರು ಚಿನ್ನ, ಏಳು ಬೆಳ್ಳಿ ಮತ್ತು ಎರಡು ಕಂಚು ಗೆದ್ದ ಚೀನಾ ತೈಪೆ ದ್ವಿತೀಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications