Paralympics 2024: ಧರಂಬೀರ್‌ಗೆ ಚಿನ್ನ, ಪ್ರಣವ್‌ಗೆ ಬೆಳ್ಳಿ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪುರುಷರ ಕ್ಲಬ್ ಥ್ರೋ ಈವೆಂಟ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಈ ವಿಭಾಗದಲ್ಲಿ ಬಂಗಾರ ಹಾಗೂ ಬೆಳ್ಳಿ ಪದಕವನ್ನು ಭಾರತ ಪಡೆದುಕೊಂಡಿದೆ. ಪುರುಷರ F51 ಕ್ಲಬ್ ಥ್ರೋ ವಿಭಾಗದಲ್ಲಿ ಧರಂಬೀರ್ ಚಿನ್ನ ಹಾಗೂ ಪ್ರವಣ್ ಸೂರ್ಮ ಬೆಳ್ಳಿ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ 24 ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಬುಧವಾರ ತಡ ರಾತ್ರಿ ನಡೆದ ಪುರುಷರ ಕ್ಲಬ್ ಥ್ರೋ F51 ಫೈನಲ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಭಾರತ ಈ ಮೂಲಕ 5 ಚಿನ್ನ, 9 ಬೆಳ್ಳಿ, 10 ಕಂಚಿನ ಪದಕವನ್ನು ಪಡೆದಿದೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತ ಗರಿಷ್ಠ ಪದಕಗಳನ್ನು ಪಡೆದ ದಾಖಲೆಯನ್ನು ಮಾಡಿದ್ದಾರೆ.

ಐದನೇ ಪ್ರಯತ್ನದಲ್ಲಿ ಅಮೋಘ ಪ್ರದರ್ಶನ
ಭಾರೀ ಕುತೂಹಲ ಮೂಡಿಸಿದ್ದ ಪುರುಷರ ಕ್ಲಬ್ ಥ್ರೋ F51 ಫೈನಲ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಭಾರತದ ಧರ್ಮಬೀರ್ ತಮ್ಮ ಮೊದಲ ನಾಲ್ಕು ಎಸೆತಗಳನ್ನು ಎಸೆಯುವಲ್ಲಿ ವಿಫಲರಾದರು. ಆದರೆ ಐದನೇ ಪ್ರಯತ್ನದಲ್ಲಿ ಧರ್ಮಬೀರ್ 34.92 ಅಂತರವನ್ನು ಸಾಧಿಸಿದರು. ಐದನೇ ಪ್ರಯತ್ನ ಅವರಿಗೆ ಚಿನ್ನದ ಪದಕಕ್ಕೆ ಕೊರಳ್ಳೊಡ್ಡಲು ಸಹಾಯ ಮಾಡಿತು.
ಪ್ರಣವ್ ಅಮೋಘ ಸಾಧನೆ
ಪ್ರಣವ್ ಸುರ್ಮಾ ತಮ್ಮ ಮೊದಲ ಎಸೆತದಲ್ಲಿಯೇ ಅಮೋಘ ಸಾಧನೆ ಮಾಡಿದ್ದಾರೆ. ಇವರು ಮೊದಲ ಎಸೆತ 34.59 ಆಗಿತ್ತು, ಇದು ಅವರಿಗೆ ಪದಕ ಖಚಿತ ಪಡಿಸಿತ್ತು. ಆದರೆ ನಂತರದ ಪ್ರಯತ್ನದಲ್ಲಿ ಈ ಸಾಧನೆಯನ್ನು ಮೀರುವಂತಹ ಸಾಧನೆ ಮಾಡಲಿಲ್ಲ.
ಈ ವಿಭಾಗದಲ್ಲಿ ಭಾಗವಹಿಸಿದ್ದ ಇನ್ನೋರ್ವ ಭಾರತೀಯ ಅಥ್ಲೀಟ್ ಅಮಿತ್ ಕುಮಾರ್ ಪದಕ ಗೆಲ್ಲುವಲ್ಲಿ ವಿಫಲರಾದರು. ಇವರು ಪೈನಲ್‌ನಲ್ಲಿ 23.96 ದೂರ ಎಸೆದರೂ, ಪದಕ ಗೆಲ್ಲುವಲ್ಲಿ ಸಾಧ್ಯವಾಗಲಿಲ್ಲ. ಏಳನೇ ದಿನ ಭಾರತದ ಖಾತೆಗೆ ಒಟ್ಟು 4 ಪದಕಗಳು ಬಂದಿದ್ದು, ಒಟ್ಟು ಪದಕಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications