Historic win: ಭಾರತದ ಪುರುಷರ ಹಾಗೂ ಮಹಿಳಾ ತಂಡಗಳಿಗೆ ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನ
45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಭಾರತದ ಪುರುಷರ ಹಾಗೂ ಮಹಿಳಾ ತಂಡಗಳು ತಮ್ಮ ತಮ್ಮ ಎದುರಾಳಿಗಳನ್ನು ಮಣಿಸಿ ಮೊದಲ ಬಾರಿಗೆ ಚಿನ್ನಕ್ಕೆ ಮುತ್ತಿಟ್ಟಿವೆ.
ಭಾರತದ ಪುರುಷರ ತಂಡ 11ನೇ ಹಾಗೂ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸ್ಲೊವೇನಿಯಾ ವಿರುದ್ಧ 3.5-0.5 ಅಂತರದಲ್ಲಿ ಗೆಲುವು ದಾಖಲಿಸಿತು. ಮಹಿಳೆಯರ ತಂಡವು ಅಜರ್‌ಬೈಜಾನ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಭಾರತ ಪುರುಷರ ತಂಡ 2014, 2022ರಲ್ಲಿ ಕಂಚಿನ ಪದಕ ಗೆದ್ದಿದ್ದರೆ, ಮಹಿಳಾ ತಂಡ 2022ರಲ್ಲಿ ಕಂಚಿನ ಸಾಧನೆ ಮಾಡಿತ್ತು.

ಭಾರತ ಮಹಿಳಾ ತಂಡದ ಪರ ಡಿ ಹರಿಕಾ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭರ್ಜರಿ ಲಯಕ್ಕೆ ಮರಳಿದರು. ತಾಂತ್ರಿಕ ಶ್ರೇಷ್ಠತೆಯನ್ನು ಸಾಧಿಸಿದ ಹರಿಕಾ ಆರಂಭದಲ್ಲಿ ಮೇಲುಗೈ ಸಾಧಿಸಿದರು. ಯುವ ಆಟಗಾರ್ತಿ ದಿವ್ಯಾ ದೇಶಮುಖ್ ಅಮೋಘ ಪ್ರದರ್ಶನ ನೀಡಿದರು. ಇವರು 11ರಲ್ಲಿ 9.5 ಅಂಕಗಳನ್ನು ಕಲೆ ಹಾಕಿ ಗೋವರ್ ಬೀದುಲಾಯೆವಾ ಅವರನ್ನು ಮಣಿಸಿದರು.
ಇನ್ನೊಬ್ಬ ಮಹಿಳಾ ಆಟಗಾರ್ತಿ ವೈಶಾಲಿ, ವಾಂತಿಕಾ ಅಗರ್‌ವಾಲ್, ಸ್ಥಿರ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಚಿನ್ನದ ಪದಕವನ್ನು ಖಚಿತಪಡಿಸಿದರು. ಮಹಿಳಾ ತಂಡ ಅಂತಿಮ ಸುತ್ತಿನಲ್ಲಿ ಗೆಲ್ಲಲು ಅಗತ್ಯವಿರುವ ಒಟ್ಟು 19 ಅಂಕಗಳನ್ನು ಗಳಿಸಿತು.
ಪುರಷರ ತಂಡದ ಕಮಾಲ್ ಪ್ರದರ್ಶನ
ಇನ್ನು ಈಗಾಗಲೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಭರವಸೆಯನ್ನು ಮೂಡಿಸಿರುವ ಭಾರತದ ಚೆಸ್ ಪಟುಗಳು ಪ್ರಸಕ್ತ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಮುಕ್ತ ವಿಭಾಗದಲ್ಲಿ ಸೊಗಸಾದ ನಡೆಗಳ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿದ ಡಿ ಗುಕೇಶ್, ಅರ್ಜುನ್ ಎರಿಗೇಸಿ ಮತ್ತು ಆರ್ ಪ್ರಗ್ನಾನಂದ ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿ ಪ್ರಶಸ್ತಿ ಪಡೆದರು.
ಮಹತ್ವದ ಪಂದ್ಯದಲ್ಲಿ ಗುಕೇಶ್ ಪ್ರಯಾಸದ ಜಯ ದಾಖಲಿಸಿದರು. ಇನ್ನು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಮೋಘ ಚಾಣಕ್ಯ ತನ ಪ್ರದರ್ಶಿಸಿದ ಪ್ರಗ್ನಾನಂದ ಸುಲಭವಾಗಿ ಎದುರಾಳಿಗೆ ಅಂಕಗಳನ್ನು ಬಿಟ್ಟು ಕೊಡಲಿಲ್ಲ. ಪರಿಣಾಮ ಪಂದ್ಯವನ್ನು ಗೆದ್ದು ಬೀಗಿದರು.
ಈ ಟೂರ್ನಿಯಲ್ಲಿ ನಾವೆಲ್ಲಾ ಆಡಿದ ರೀತಿ, ತಂಡವಾಗಿ ನೀಡಿದ ಪ್ರದರ್ಶನ ನಿಜಕ್ಕೂ ಖುಷಿ ನೀಡಿದೆ ಎಂದು ಡಿ ಗುಕೇಶ್ ಹೇಳಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ವಿಜೇತ ವಿಶ್ವನಾಥನ್ ಆನಂದ್ ಅವರು ಈ ಟೂರ್ನಿಯನ್ನು ವೀಕ್ಷಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications